ಲಕ್ನೋ: ಜಗತ್ತು ಎದುರಿಸುತ್ತಿರುವ ವಿವಿಧ ಸಂಕಷ್ಟಗಳ ನಡುವೆ, ಭಾರತಕ್ಕೆ ಸಾಧಿಸಲು ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಸಾಬೀತು ಪಡಿಸುತ್ತಿದೆ ಎಂದು ಉತ್ತರಪ್ರದೇಶದ ಪಿಲಿಭತ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ನರೇಂದ್ರ ಮೋದಿ ಹೇಳಿದ್ದಾರೆ.
ಗುರಿ ಎಷ್ಟೇ ಕಠೀಣವಾಗಿದ್ದರೂ, ಅದನ್ನು ಸಾಧಿಸಲು ಭಾರತ ಸಂಕಲ್ಪ ಮಾಡಿದರೆ, ಅದು ಖಂಡಿತವಾಗಿಯೂ ಸಾಧಿಸುತ್ತದೆ. ಇಂದು ಈ ಸ್ಪೂರ್ತಿ ಮತ್ತು ಶಕ್ತಿಯೊಂದಿಗೆ, ನಾವು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರವು ವಿಶ್ವದಿಂದ ಸಹಾಯವನ್ನು ಕೇಳುತ್ತಿದ್ದ ಸಮಯವಿತ್ತು. ಈಗ ಕೋವಿಡ್ ಸಮಯದಲ್ಲಿ ಭಾರತದಿಂದ ಇಡೀ ಜಗತ್ತಿಗೆ ಔಷಧಿಗಳನ್ನು ಲಭ್ಯವಾಗುವಂತೆ ಮಾಡಲಾಗಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೈಕ್‌ನಲ್ಲಿ ಸಾಗಿಸುತ್ತಿದ್ದ ಲಕ್ಷಾಂತರ ರೂ. ಕರ್ನೂರು ಬಳಿ ವಶಕ್ಕೆ
ಭಾರತ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅರ್ಥಿಕ ಶಕ್ತಿಯಾದಾಗ, ಜನ ಅದರ ಬಗ್ಗೆ ಹೆಮ್ಮೆಪಡುತ್ತಾರೆ ಅಲ್ಲವೇ? ನಮ್ಮ ಚಂದ್ರಯಾನವು ಚಂದ್ರನ ಮೇಲೆ ತ್ರಿರ‍್ಣ ಧ್ವಜವನ್ನು ಹಾರಿಸಿದಾಗ ನೀವು ಹೆಮ್ಮೆ ಪಟ್ಟಿದ್ದೀರಿ ಅಲ್ಲವೇ? ದೇಶ ಬಲಿಷ್ಠವಾದಾಗ ಜಗತ್ತು ನಮ್ಮ ಮಾತನ್ನು ಕೇಳುತ್ತದೆ ಎಂದಿದ್ದಾರೆ. ಇದನ್ನೂ ಓದಿ: ವಿಧಾನಸಭೆ ಚುನಾವಣೆ ಮುಡ್‌ನಿಂದ ಸಿಎಂ ಇನ್ನು ಹೊರ ಬಂದಿಲ್ಲ: ಜೋಶಿ