-ಮೈತ್ರಿ ಧರ್ಮ ಪಾಲನೆಗೆ ಗ್ರೀನ್ ಸಿಗ್ನಲ್ ನೀಡ್ತಾರಾ ಹಾಲಿ ಸಂಸದೆ?
ಮಂಡ್ಯ: ಮಂಡ್ಯದಲ್ಲಿ ಇಂದು ಸುಮಲತಾ ಅಂಬರೀಶ್ ಅವರು ಮಹತ್ವದ ನಿರ್ಧಾರ ಪ್ರಕಟವಾಗಲಿದ್ದು, ಅವರಿಗೆ ಸಹಕಾರವೋ ಅಥವಾ ಪಕ್ಷೇತರ ಸ್ಪರ್ಧೆಯೋ ಎಂದು ಕಾದು ನೋಡಬೇಕಿದೆ.
2019 ರ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಗೆದ್ದು ಸಂಸದರಾದರೂ ಕೂಡ ಅವರಿಗೆ ಯಾವುದೇ ಸಹಕಾರ ನೀಡದೆ ಪ್ರತಿ ಹಂತದಲ್ಲೂ ಸುಮಲತಾ ಹಾಗೂ ದಳಪತಿಗಳ ನಡುವರ ವಾಕ್ಸಮರ ನಡೆಯುತ್ತಿದೆ. ಇದನ್ನೂ ಓದಿ: ಸಂಸದೆ ಸುಮಲತಾ ಮಹತ್ವದ ನಿರ್ಧಾರ ಪ್ರಕಟನೆ- ನಟ ದರ್ಶನ್ ಹಾಜರು
ಬೆಳಗ್ಗೆ 10.30ಕ್ಕೆ ಮಂಡ್ಯದ ಕಾಳಿಕಾಂಭ ಸಮುದಾಯ ಭವನದಲ್ಲಿ ಸಂಸದೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ನಟ ದರ್ಶನ್, ಪುತ್ರ ಅಭಿಷೇಕ್ ಅಂಬರೀಶ್, ಹಿರಿಯ ನಟ ದೊಡ್ಡಣ್ಣ, ನಿರ್ಮಾಪಕ ರಾಕ್‌ಲೈನ್ ಭಾಗಿಯಾಗಲಿದ್ದಾರೆ. ತಮ್ಮ ಸಂಸದ ಸ್ಥಾನ ಅವಧಿಯ ಸಾಧನೆ ಬಗ್ಗೆ ಸಾಕ್ಷ್ಯಚಿತ್ರವನ್ನ ಬಿಡುಗಡೆ ಮಾಡಲಿದ್ದಾರೆ. ನಟ ದರ್ಶನ್‌ರಿಂದ ಬಿಡುಗಡೆ ಮಾಡಿಸಲು ಪ್ಲಾನ್ ಮಾಡಿದ್ದಾರೆ. ಸಭೆಯ ನಂತ್ರ ಸುಮಲತಾ ಅಂಬರೀಶ್ ಮೈತ್ರಿ ಧರ್ಮವನ್ನ ಪಾಲನೆ ಮಾಡ್ತಾರಾ? ಇಲ್ವಾ ಪಕ್ಷೇತರವಾಗಿ ಸ್ಪರ್ಧೆ ಮಾಡ್ತಾರಾ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. ಇದನ್ನೂ ಓದಿ:ಶಿವಮೊಗ್ಗದ ಬಂಡಾಯಕ್ಕೆ ಚುನಾವಣಾ ಚಾಣಕ್ಯ ಅಮಿತ್ ಶಾ ಎಂಟ್ರಿ!