ಹೃದಯದ (Heart) ಕಾಯಿಲೆ ಇತ್ತೀಚಿನ ದಿನಗಳಲ್ಲಿ ಹೇಳಹೆಸರಿಲ್ಲದೆ ವ್ಯಕ್ತಿಗಳನ್ನು ಆವರಿಸುತ್ತಿದೆ. ಮೊದಲೆಲ್ಲಾ ಹಿರಿಯರಿಗೆ ಬರುತ್ತಿದ್ದ ಈ ಕಾಯಿಲೆ ಇಂದು ಯುವಕರ ಪಾಲಿಗೂ ಕ್ರೂರಿಯಾಗುತ್ತಿದೆ. ಆರೋಗ್ಯವಂತರಾದವರೂ ಹೃದಯ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಒಂದು ರೀತಿಯಲ್ಲಿ ಹಾರ್ಟ್ ಅಟ್ಯಾಕ್ ಹೆಸರು ಕೇಳಿದರೆ ಸಾಕು ಮೈಯೆಲ್ಲಾ ಕಂಪಿಸುವ ಅನುಭವ ಉಂಟಾಗುತ್ತದೆ. ಹೃದಯದ ತಪಾಸಣೆ ಮಾಡಲು ಹಾಗೂ ಅನಾರೋಗ್ಯ (Illness) ಗುರುತುಗಳನ್ನು ಪತ್ತೆಹಚ್ಚಲು ಅನೇಕ ವಿಧಾನಗಳಿದ್ದರೂ ಆರೋಗ್ಯ ತಜ್ಞರು ಇದೀಗ ಹೃದಯದ ಕಾಯಿಲೆಗಳನ್ನು ಇನ್ನೊಂದು ಬಗೆಯಲ್ಲಿ ಪತ್ತೆಹಚ್ಚಬಹುದು ಎಂದು ತಿಳಿಸಿದ್ದು ಉಗುರು, ಕಿವಿ,ಕಾಲುಗಳನ್ನು ಪರೀಕ್ಷಿಸುವ ಮೂಲಕ ದೇಹದಲ್ಲಿ ಅಡಗಿರುವ ಸೈಲೆಂಟ್ ಕಿಲ್ಲರ್ ಅನ್ನು ಕಂಡುಹಿಡಿಯಬಹುದು ಎಂದು ತಿಳಿಸಿದ್ದಾರೆ.
ನಮ್ಮ ಚರ್ಮದ ಮೇಲೆ ಕಾಣಿಸಿಕೊಳ್ಳುವ ಅನೇಕ ಚಿಹ್ನೆಗಳು ಕೂಡ ಹೃದಯದ ಕಾಯಿಲೆಯನ್ನು ಖಾತ್ರಿಪಡಿಸುತ್ತದೆ ಎಂದು ತಜ್ಞರು ತಿಳಿಸಿದ್ದು, ಚರ್ಮದಲ್ಲಿನ ಬದಲಾವಣೆಗಳು ನಿಮ್ಮ ಒಟ್ಟಾರೆ ಆರೋಗ್ಯವನ್ನು ಸೂಚಿಸುತ್ತವೆ.
ಚರ್ಮರೋಗದ ಲಕ್ಷಣಗಳು ಕೂಡ ಹೃದಯದ ಕಾಯಿಲೆಗಳನ್ನು ಖಾತ್ರಿಪಡಿಸುತ್ತವೆ ಅಲ್ಲದೆ ಇದು ಎಸ್ಜಿಮಾದಂತಹ ಪರಿಸ್ಥಿತಿಗಳ ಬೆಳವಣಿಗೆಯಿಂದ ಹೆಚ್ಚು ಗಂಭೀರವಾದ ಕಾಯಿಲೆಗಳವರೆಗೆ ಇರುತ್ತದೆ ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯವಾಗಿದೆ.
ಚರ್ಮದ ಮೇಲೆ ಕಂಡುಬರುವ ಲಕ್ಷಣಗಳು
ಡರ್ಮಟಾಲಜಿಸ್ಟ್ ಡಾ ಡಸ್ಟಿನ್ ಪೋರ್ಟೆಲಾ ಅವರು ತಮ್ಮ ಕ್ಷೇತ್ರದ ತಜ್ಞರು ಹೃದ್ರೋಗವನ್ನು ಸೂಚಿಸುವ ಚರ್ಮದ ಮೇಲೆ ಯಾವೆಲ್ಲಾ ರೀತಿಯ ಲಕ್ಷಣಗಳು ಕಂಡುಬರುತ್ತವೆ ಎಂಬುದನ್ನು ಹಂಚಿಕೊಂಡಿದ್ದಾರೆ.
ಆರೋಗ್ಯ ಸಮೀಕ್ಷೆಯ ಪ್ರಕಾರ, ಪರಿಧಮನಿಯ ಹೃದಯ ಕಾಯಿಲೆ (CHD) ಯುಕೆ ಮತ್ತು ಪ್ರಪಂಚದಾದ್ಯಂತ ಸಾವಿಗೆ ಪ್ರಮುಖ ಕಾರಣವಾಗಿದೆ.
ಚರ್ಮರೋಗ ತಜ್ಞರು ಕೂಡ ತರಬೇತಿ ಹೊಂದಿರುತ್ತಾರೆ
ಹೃದ್ರೋಗದ ಮುಖ್ಯ ಲಕ್ಷಣಗಳು ಎದೆ ನೋವು, ಉಸಿರಾಟದ ತೊಂದರೆ ಮತ್ತು ದೇಹದಾದ್ಯಂತ ನೋವು ಮುಂತಾದ ಆಂತರಿಕ ಲಕ್ಷಣಗಳಾಗಿವೆ. ಅದೇ ರೀತಿ ನಮ್ಮ ಚರ್ಮದ ಮೇಲೆ ಕಂಡುಬರುವ ಚಿಹ್ನೆಗಳನ್ನು ನೋಡಲು ಚರ್ಮರೋಗ ತಜ್ಞರು ತರಬೇತಿ ಪಡೆದಿದ್ದಾರೆ ಎಂದು ಡಾ ಪೋರ್ಟೆಲಾ ವಿವರಿಸುತ್ತಾರೆ.
ಡಾ ಪೋರ್ಟೆಲಾ ಹೇಳುವಂತೆ ನಿಮಗೆ ಹೃದ್ರೋಗವಿದೆಯೇ ಎಂದು ಹೇಳಲು ಚರ್ಮರೋಗ ತಜ್ಞರು ಚರ್ಮದ ಮೇಲೆ ಕಂಡು ಬರುವ ರೋಗಲಕ್ಷಣಗಳನ್ನು ಹುಡುಕಲು ತರಬೇತಿ ಪಡೆದುಕೊಂಡಿರುತ್ತಾರೆ. ನಿಮ್ಮ ಚರ್ಮದ ಮೇಲಿನ ಆಂತರಿಕ ಕಾಯಿಲೆಯ ಚಿಹ್ನೆಗಳನ್ನು ನೋಡಲು ಚರ್ಮಶಾಸ್ತ್ರಜ್ಞರು ತರಬೇತಿ ಹೊಂದಿರುತ್ತಾರೆ.
ಕಾಲುಗಳು
ಅವರು ಮೊದಲು ಕಾಲುಗಳಲ್ಲಿ ಕಂಡುಬರುವ ಸುಳಿವನ್ನು ಸೂಚಿಸಿದ್ದಾರೆ. ಹೃದ್ರೋಗದ ಅಪಾಯವನ್ನು ಸೂಚಿಸುವ ಕೆಲವು ಅಂಶಗಳೆಂದರೆ, ಮೊದಲನೆಯದಾಗಿ ಕಾಲುಗಳ ಊತ, ನೀವು ಕಾಲುಗಳ ಊತ ಹೊಂದಿರುವುದು, ಇದು ಹೃದಯ ವೈಫಲ್ಯದ ಸಂಕೇತವಾಗಿರಬಹುದು.
ಇದನ್ನೂ ಓದಿ:
ಒಂದು ತಿಂಗಳಿಗೆ ಎಷ್ಟು ಬಾರಿ ಸೆಕ್ಸ್ ಮಾಡೋದು ಒಳ್ಳೆಯದು?
ಎಡಿಮಾವು ದೇಹದ ಅಂಗಾಂಶಗಳಲ್ಲಿ, ಹೆಚ್ಚಾಗಿ ಪಾದಗಳು, ಕಣಕಾಲುಗಳು ಮತ್ತು ಕಾಲುಗಳಲ್ಲಿ ಸಿಕ್ಕಿಬಿದ್ದ ಹೆಚ್ಚಿನ ದ್ರವದಿಂದ ಉಂಟಾಗುವ ಊತವನ್ನು ಸೂಚಿಸುತ್ತದೆ.
ಇದು ಔಷಧಿ, ಗರ್ಭಾವಸ್ಥೆ ಅಥವಾ ರಕ್ತ ಕಟ್ಟಿದ ಹೃದಯ ಸ್ಥಂಭನ, ಮೂತ್ರಪಿಂಡ ಕಾಯಿಲೆ, ಸಿರೆಯ ಕೊರತೆ ಅಥವಾ ಯಕೃತ್ತಿನ ಸಿರೋಸಿಸ್ನಂತಹ ಕಾಯಿಲೆಗಳಿಂದ ಉಂಟಾಗಬಹುದು.
ಉಗುರು
ಉಗುರುಗಳಲ್ಲಿ ಕೂಡ ಹೃದ್ರೋಗದ ಅಪಾಯಗಳಿರುತ್ತವೆ ಎಂದು ತಿಳಿಸುವ ಪೋರ್ಟೆಲಾ, ಉಗುರಿನ ಕೆಳಮುಖವಾದ ವಕ್ರರೇಖೆಯಲ್ಲೂ ಕೆಲವೊಂದು ಲಕ್ಷಣಗಳು ಕಂಡುಬರುತ್ತವೆ.
ಬೆರಳ ತುದಿಯು ಊದಿಕೊಂಡರೆ, ಇದು ಹೃದಯದ ಸೋಂಕು ಅಥವಾ ಶ್ವಾಸಕೋಶದ ಕಾಯಿಲೆಯ ಹೃದಯ ಕಾಯಿಲೆಯ ಸಂಕೇತವಾಗಿರಬಹುದು ಎಂದು ತಿಳಿಸಿದ್ದಾರೆ.
ಬಿಕಿನಿಯಲ್ಲಿ Disha Patani!
ಕಿವಿ
ಕಿವಿಯಲ್ಲಿ ಕೂಡ ಹೃದ್ರೋಗದ ಚಿಹ್ನೆಗಳನ್ನು ಕಂಡುಹಿಡಿಯಬಹುದು ಎಂದು ಪೋರ್ಟೆಲಾ ತಿಳಿಸುತ್ತಾರೆ. ಕಿವಿಯ ಹಾಳೆಯಲ್ಲಿ ಕಂಡುಬರುವ ಕೆಲವೊಂದು ಸೂಚನೆಗಳು ಕೂಡ ಹೃದ್ರೋಗದ ಲಕ್ಷಣಗಳನ್ನು ಸೂಚಿಸುತ್ತವೆ.
ಇನ್ನು ಇಂತಹ ಸಂಕೇತಗಳು ವಯಸ್ಸಿಗೆ ಸಂಬಂಧಿಸಿದ್ದಾಗಿವೆ ಎಂದು ಅಧ್ಯಯನಗಳು ಖಾತ್ರಿಪಡಿಸಿವೆ ಎಂಬುದು ಪೋರ್ಟೆಲಾ ಹೇಳಿಕೆಯಾಗಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ