ಮೈಸೂರು: ಲೋಕಸಭಾ ಚುನಾವಣೆಯ ಬಳಿಕ ದೇಶದ ಜನರೇ ರಾಹುಲ್ ಗಾಂಧಿಗೆ ಕಡ್ಡಾಯ ರಜೆ ಕೊಡುತ್ತಾರೆ. ತಾಲಿಬಾನ್‌ಗಳ ಪ್ರೇರಣೆ ಹಾಗೂ ನಗರ ನಕ್ಸಲಿಯರ ಸಹಾಯದಿಂದ ಕಾಂಗ್ರೆಸ್ ತನ್ನ ಪ್ರಣಾಳಿಕೆ ಸಿದ್ದಪಡಿಸಿದೆ ಎಂದು ಮಾಜಿ ಸಚಿವ ಸಿ.ಟಿ ರವಿ ಹೇಳಿಕೆ ಕೊಟ್ಟಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯಕ್ಕೆ ಹೆಚ್ಚು ಅನುದಾನ, ತೆರಿಗೆ ಪಾಲು ಕೊಟ್ಟಿರುವುದು ಮೋದಿ ಸರ್ಕಾರ. ಚರ್ಚೆ ಬೇಕಾದರೆ ಕಾಂಗ್ರೆಸ್ ನಡಸಲಿ. ನಾವು ಕಾಂಗ್ರೆಸ್‌ನ ದೃಷ್ಟಿದೋಷ ನಿವಾರಿಸುತ್ತೆವೆ. ಕೈ ಗೆ ವಿಭಜನೆ ರೋಗ ಅವರಿಸಿದೆ. ಇದನ್ನೂ ಓದಿ: ಸಾಕ್ಷಿಗೆ ಸಂಗ್ರಹಿಸಿದ್ದ 10 ಕೆಜಿ ಗಂಜಾ, 9 ಕೆಜಿ ಭಾಂಗ್ ಇಲ್ಲಿಗಳೇ ತಿಂದಿವೆ
ದೇಶ ವಿಭಜಿಸುವ ರೋಗ ಕಾಂಗ್ರೆಸ್‌ಗೆ ಬಹು ಹಿಂದಿನಿoದ ಇದೆ. ಈಗಲು ಇದೆ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಈ ಚುನಾವಣೆಯಲ್ಲಿ ಡಬಲ್ ಡಿಜಿಟ್ ಕೂಡ ದಾಟಲ್ಲ. ಹೀಗಾಗಿ ಇವರ ವಿಭಜನೆಯ ಯೋಚನೆ ಪ್ರಣಾಳಿಕೆಯಲ್ಲಿಯೇ ಸತ್ತು ಹೋಗುತ್ತದೆ. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ ನಡೆದ ಹಗರಣಗಳಿಗೆ ಕಾರಣರು ಯಾರು? ಮೋದಿ ರಾಜ್ಯಕ್ಕೆ ಕೊಟ್ಟ ತೆರಿಗೆ ಹಣ, ಅನುದಾನ ಎಷ್ಟು? ಮನಮೋಹನ್ ಸಿಂಗ್ ಸರ್ಕಾರ ರಾಜ್ಯಕ್ಕೆ ಕೊಟ್ಟಿದ್ದು ಎಷ್ಟು ಚರ್ಚೆಗೆ ಬನ್ನಿ. ನಾವು ಸಿದ್ಧ ಎಂದು ಸಿಟಿ ರವಿ ಸವಾಲೆಸೆದರು. ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೆ.ಕವಿತಾ ಬಂಧನ – ಜಾಮೀನು ನೀಡಲು ನಿರಾಕರಿಸಿದ ಕೋರ್ಟ್

