ಜೀವನಚಕ್ರ ಎಂಬುದು ಯಾರು ಇದ್ರೂನೂ, ಇಲ್ಲದೇ ಹೋದರನೂ ತಿರುಗ್ತಾನೇ ಇರುತ್ತೆ. ಆದರೆ ಕೆಲವು ಸಲ ನಮಗೆ ನಮ್ಮ ಜೀವನ ನಿಂತ ನೀರಾಗಿದೀಯಲ್ಲ ಅಂತ ಅನಿಸಕ್ಕೆ ಸ್ಟಾರ್ಟ್ ಆಗುತ್ತೆ. ಆಗ ನನ್ನಿಂದ ಏನೂ ಸಾಧನೆ ಮಾಡಕ್ಕೆ ಆಗ್ತಿಲ್ಲ. ನಾನು ಏಕಾಂಗಿ. ಹೀಗೆ ನಾನಾ ತರಹದ ನೆಗೆಟಿವ್ (Negative) ಯೋಚನೆಗಳು ಬಂದೇ ಬರುತ್ತವೆ. ಆದ್ರೆ ಈ ರೀತಿಯ ಯೋಚ್ನೆಗಳನ್ನು ಸರಿ ಪಡಿಸಿಕೊಂಡು ಮತ್ತೆ ನಿಮ್ಮ ಜೀವನವನ್ನು ಹೊಸದಾಗಿ ಸ್ಟಾರ್ಟ್ (Smart) ಮಾಡಿ ಅದರಲ್ಲಿ ಪ್ರಗತಿಯನ್ನು ಸಹ ಸಾಧಿಸಬಹುದು. ಇದಕ್ಕೆ ಮುಖ್ಯವಾಗಿ ನೀವು ನಿಮ್ಮ ದಿನನಾ ಹೇಗೆ ಸ್ಟಾರ್ಟ್ ಮಾಡ್ತಿರಿ ಅನ್ನೊದರ ಮೇಲೆ ನಿಂತಿದೆ. ಸೋ ಬನ್ನಿ. ಜೀವನದಲ್ಲಿ ಮುಂದೆ ಬರಬೇಕು ಅಂದ್ರೆ ಪ್ರತಿದಿನ ಯಾವ 10 ಕೆಲಸಗಳನ್ನು ಮಾಡಬೇಕು ಅಂತ ತಿಳಿಯೋಣ.
ಜೀವನದಲ್ಲಿ ಪ್ರಗತಿ ಸಾಧಿಸಲು ಬಯಸಿದರೆ, ಪ್ರತಿದಿನ ಬೆಳಿಗ್ಗೆ ಈ 10 ಕೆಲಸಗಳನ್ನು ಮಾಡಿ
- ಬೇಗನೆ ಎದ್ದೇಳಿ
ಬೆಳಿಗ್ಗೆ ಬೇಗನೆ ಏಳುವುದು ನಿಮಗೆ ಶಾಂತಿಯುತ ಆರಂಭವನ್ನು ನೀಡುತ್ತದೆ. ಯಾವುದೇ ರೀತಿಯ ಒತ್ತಡವಿಲ್ಲದೇ, ಕೆಲಸ ಮಾಡಲು ನಿಮಗೆ ದಾರಿಯಾಗುತ್ತದೆ. ಮುಂಜಾನೆಯ ಸಮಯ ನೀವು ಉತ್ತಮ ಕೆಲಸಗಳನ್ನು ಮಾಡಿ, ನಿಮ್ಮನ್ನು ಮತ್ತಷ್ಟು ಉತ್ತಮ ವ್ಯಕ್ತಿಯಾಗಿ ಮಾಡಿಕೊಳ್ಳಬಹುದು. ಉದಾಹರಣೆಗೆ, ಧ್ಯಾನ, ವಾಕಿಂಗ್ ಹೀಗೆ.
- ನಿಮ್ಮ ಹಾಸಿಗೆಯನ್ನು ಮಡಚಿಡಿ
ಹೌದು, ಎದ್ದ ತಕ್ಷಣ ನೀವು ಮಾಡಬೇಕಾದ ಮತ್ತೊಂದು ಕೆಲಸ ಅಂದ್ರೆ ನಿಮ್ಮ ಹಾಸಿಗೆಯನ್ನು ನೀಟಾಗಿ ಮಡಚಿಡುವುದು. ಇದರಿಂದ ನಿಮಗೆ ಮತ್ತೆ ಮಲಗಲು ಇಷ್ಟವಾಗದೇ ಕೆಲಸದ ಕಡೆ ಗಮನಕೊಡಬಹುದು. ಇದರ ಜತೆಗೆ ನಿಮ್ಮ ರೂಮ್‌ನ್ನು ಸಹ ನೀಟಾಗಿಡಿ. ಇದರಿಂದ ನಿಮ್ಮಲ್ಲಿ ಪಾಸಿಟಿವ್ ಭಾವನೆ ಬಂದು ಕೆಲಸ ಮಾಡಲು ಉತ್ಸಾಹ ಮೂಡುತ್ತದೆ.
- ಕಾಫಿ/ಟೀ ಸೇವನೆ ಮೊದಲು ಒಂದು ಗ್ಲಾಸ್ ನೀರು ಕುಡಿಯಿರಿ
ಯೆಸ್, ಎದ್ದ ತಕ್ಷಣ ನಿಮ್ಮ ಶೌಚ ಕಾರ್ಯಗಳೆಲ್ಲವನ್ನೂ ಮುಗಿಸಿಕೊಂಡು, ನಂತರ ಕಾಫಿ/ ಟೀ ಏನಾದರೂ ಕುಡಿಯುವ ಮೊದಲು ಒಂದು ದೊಡ್ಡ ಗ್ಲಾಸ್ ನೀರನ್ನು ಕುಡಿಯಿರಿ. ಇದು ನಿಮ್ಮನ್ನು ದಿನಪೂರ್ತಿ ಹೈಡ್ರೆಟ್ ಆಗಿರಲು ಹೆಲ್ಪ್ ಮಾಡುತ್ತೆ.
- ಉಸಿರಾಟದ ವ್ಯಾಯಾಮಗಳನ್ನು ಮಾಡಿ
ಪ್ರತಿದಿನ ಬೆಳಿಗ್ಗೆ ಆಳವಾದ ಉಸಿರಾಟದ ವ್ಯಾಯಾಮಗಳನ್ನು ಮಾಡಲು ಕೆಲವು ನಿಮಿಷಗಳನ್ನು ತೆಗೆದುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಹೆಚ್ಚು ಉತ್ತಮ. ಇದು ಸಿಂಪಲ್ ಎನಿಸಿದರೂ ಬಹಳ ಪರಿಣಾಮಕಾರಿಯಾಗಿದೆ.
ಇದನ್ನೂ ಓದಿ:
ವಿದೇಶಿ ಪ್ರವಾಸಿಗರಿಗೂ ವರದಾನವಾದ UPI ಗೇಟ್ ವೇ ಪೇಮೆಂಟ್ ಪ್ರಕ್ರಿಯೆ!
- ಆ ದಿನದ ಮುಖ್ಯ ಕೆಲಸವನ್ನು ಬರೆಯಿರಿ
ಪ್ರತಿದಿನ ನೀವು ಏನು ಮಾಡಬೇಕು, ಯಾವ ಸಮಯದಲ್ಲಿ ಆ ಕೆಲಸ ಮಾಡಬೇಕು ಎಂಬುದನ್ನು ಬರೆದಿಡಿ. ಇದರಿಂದ ಆ ಗುರಿ ನಿಮ್ಮ ವಾಸ್ತವಕ್ಕೆ ಹೆಚ್ಚು ಹತ್ತಿರವಾಗಿ, ಸಾಧಿಸಲು ಅನುಕೂಲವಾಗುತ್ತದೆ. ಅದಕ್ಕೆ ನೀವು ಒಂದು ಡೈರಿ ಮಾಡಿಕೊಳ್ಳಿ.
- ಬೆಳಗಿನ ವೇಳೆ ನೆಗೆಟಿವ್ ಸುದ್ದಿ ಕೇಳಬೇಡಿ
ಎದ್ದ ತಕ್ಷಣ ಕೆಲವರಿಗೆ ವಾರ್ತೆ ನೋಡುವ ಅಭ್ಯಾಸ ಅಥವಾ ನ್ಯೂಸ್ ಪೇಪರ್ ಓದುವ ಅಭ್ಯಾಸ ಇದ್ದೆ ಇರುತ್ತದೆ. ಕೆಲವು ಸುದ್ದಿಗಳು ನೆಗೆಟಿವ್ ಸುದ್ದಿಗಳಾಗಿರುತ್ತವೆ. ಇದರಿಂದ ನಿಮ್ಮ ಮೂಡ್ ಹಾಳಾಗಬಹುದು. ಸೋ ಎದ್ದ ತಕ್ಷಣ ನ್ಯೂಸ್ ಬೇಡ. ಬೇಕಿದ್ರೆ ಆಮೇಲೆ ಈ ಕೆಲಸ ಮಾಡಬಹುದು.
- ತ್ವರಿತ ದೈಹಿಕ ಚಟುವಟಿಕೆಯನ್ನು ಮಾಡಿ
ಕೆಲವು ಬಾಡಿ ಸ್ಟ್ರೆಚಿಂಗ್ ಮಾಡುವುದರಿಂದ ನಿಮ್ಮ ದೇಹಕ್ಕೆ ರಕ್ತ ಪರಿಚಲನೆ ಆಗುತ್ತದೆ. ಕೆಲ ನಿಮಿಷಗಳು ಮಾತ್ರ ಯಾವುದಾದರೂ ವರ್ಕ್‌ವೌಟ್ ಮಾಡುವುದು ಉತ್ತಮ. ಏನೂ ಮಾಡದೇ ಇದ್ದಾಗ ಸುಮ್ಮನೆ ಒಂದು ವಾಕ್ ಹೇಗಿ ಬರುವುದು ಸಹ ಬೆಸ್ಟ್.
- ನಿಮ್ಮ ದಿನವನ್ನು ಸಾಧಕರ ಮಾತಿನಿಂದ ಶುರು ಮಾಡಿ
ಇದರಿಂದ ನಿಮಗೆ ಸ್ಪೂರ್ತಿ ಬರುತ್ತದೆ. ನಾವು ಯಾವಾಗಲೂ ಶ್ರೇಷ್ಠ ಚಿಂತಕರು ಮತ್ತು ಸಾಧಕರ ಮಾತುಗಳಿಂದ ಸ್ಫೂರ್ತಿ ಪಡೆಯಬೇಕು. ಉದಾಹರಣೆಗೆ, ಆಲ್ಬರ್ಟ್ ಐನ್‌ಸ್ಟೈನ್ ಅವರ : “ನಿನ್ನೆಯಿಂದ ಕಲಿಯಿರಿ, ಇವತ್ತಿಗಾಗಿ ಬದುಕಿ, ನಾಳೆಗಾಗಿ ಆಶಿಸಿ” ಇಂತಹವುಗಳನ್ನು ಓದಿ, ಸ್ಪೂರ್ತಿ ಪಡೆದು ಕೆಲಸ ಆರಂಭಿಸಬೇಕು.
- ನಿಮ್ಮ ಜಾಗವನ್ನು ಅಚ್ಚುಕಟ್ಟಾಗಿ ಇರಿಸಿ
ಯೆಸ್, ನೀವು ಕೆಲಸ ಮಾಡುವ ಜಾಗ ನೀಟಾಗಿದ್ದಾಗ ಮಾತ್ರ ನೀವು ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಕೆಲಸ ಮಾಡುವ ಡೆಸ್ಕ್ ಅನ್ನು ನೀಟಾಗಿರಿಸಿ. ನಿಮ್ಮ ಬೆಡ್ ಅನ್ನು ನೀಟಾಗಿರಿಸಿ. ಇತ್ಯಾದಿ.
ನಟಿ Shriya Saran ಈ ಬ್ಯೂಟಿಗೆ ವಯಸ್ಸೇ ಆಗಲ್ಲ ಅಂತಿದ್ದಾರೆ ಫ್ಯಾನ್ಸ್
- ಕೃತಜ್ಞತೆ ತಿಳಿಸಲು ಒಂದು ಕ್ಷಣ ತೆಗೆದುಕೊಳ್ಳಿ
ಕೃತಜ್ಞತೆಯಿಂದ ಇರುವುದು ಬಹಳ ಕಷ್ಟದ ಕೆಲಸ. ಏಕೆಂದರೆ ನಮಗೆ ದೇವರು ಏನು ನೀಡಬೇಕೋ ಅದನ್ನು ನೀಡಿಯೇ ಇರುತ್ತಾನೆ. ಅದಕ್ಕೆ ನಾವು ಯಾವಾಗಲೂ ಕೃತಜ್ಞತೆಯಿಂದ ವರ್ತಿಸುವುದು ಬೆಸ್ಟ್. ಇಲ್ಲ ಎನ್ನುವುದಕ್ಕಿಂತ ಇದೆ ಎಂದು ತಿಳಿದು ಬಾಳುವುದು ಉತ್ತಮ ವ್ಯಕ್ತಿಗಳ ಮಾತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ