ದೆಹಲಿ: ಬಿಜೆಪಿಗೆ (BJP) ಸೇರದಿದ್ದರೆ ಎಎಪಿ ನಾಯರನ್ನು ಜೈಲಿಗೆ ಹಾಕಲು ಪ್ರಧಾನಿ ನರೇಂದ್ರ ಮೋದಿ(Narendra Modi) ನಿರ್ಧರಿಸಿದ್ದಾರೆ ಎಂದು ದೆಹಲಿ ಸಚಿವೆ ಅತಿಶಿ(Atishi) ಕಿಡಿಕಾರಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ ನಂತರ ಇದೀಗ ಇ.ಡಿ ನಿರ್ದೇಶನಾಲಯವು ನನ್ನನ್ನು ಸೇರಿ ಸೌರಭ್ ಭಾರದ್ವಾಜ್, ದುರ್ಗೇಶ್ ಪಾಠಕ್ ಮತ್ತು ರಾಘವ್ ಚಡ್ಡಾ ಅವರನ್ನು ಬಂಧಿಸಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೂವರು SSLC ವಿದ್ಯಾರ್ಥಿಗಳು ತುಂಗಾ ನದಿಯ ನೀರುಪಾಲು
ಶೀಘ್ರದಲಿ ನಮ್ಮ ನಿವಾಸದ ಮೇಲೆ ಇಡಿ ದಾಳಿ ನಡೆಯಲಿದೆ. ಬಳಿಕ ನಮ್ಮನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗುವುದು ಎಂದು ನನಗೆ ತಿಳಿಸಲಾಗಿದೆ. ಇದೀಗ ಬಿಜೆಪಿ ಆಮ್ ಆದ್ಮಿ ಪಕ್ಷದ ಮುಂಚೂಣೀಯ ನಾಯಕರನ್ನು ಗುರಿಯಾಸಿಕೊಂಡಿದೆ ಎಂದು ಕಿಡಿಕಾರಿದ್ದರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಸಮಸ್ಯೆ ಇಲ್ಲ ಸುಮ್ಮನೆ ಉಹಾಪೋಹದ ವರದಿ ಬರೆಯುತ್ತಾರೆ: ಸಿದ್ದರಾಮಯ್ಯ
“ವೈಯಕ್ತಿಕ ಸಂಪರ್ಕದ ಮೂಲಕ ಬಿಜೆಪಿ ಸೇರಲು ನನ್ನನ್ನು ಸಂಪರ್ಕಿಸಲಾಗಿದೆ. ನಾನು ಬಿಜೆಪಿಗೆ ಸೇರುವ ಮೂಲಕ ನನ್ನ ರಾಜಕೀಯ ಜೀವನವನ್ನು ಉಳಿಸಿಕೊಳ್ಳಬಹುದು. ಇಲ್ಲವೇ ಮುಂದಿನ ಒಂದು ತಿಂಗಳಲ್ಲಿ ಬಂಧಿಸಬಹುದು ಎಂದು ನನಗೆ ತಿಳಿಸಲಾಗಿದೆ. ಪ್ರತಿಯೊಬ್ಬ ಎಎಪಿ ನಾಯಕನನ್ನು ಜೈಲಿಗೆ ಹಾಕಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ ಎಂದು ನನಗೆ ತುಂಬಾ ಹತ್ತಿರವಿರುವ ವ್ಯಕ್ತಿಯೊಬ್ಬರು ಹೇಳಿದ್ದಾರೆ. ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಅವರಿಂದ ಆರಂಭಿಸಿ ಈಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ್ದಾರೆ. ಆದರೆ ಈಗ ಅವರು ಇನ್ನೂ ನಾಲ್ವರು ಉನ್ನತ ನಾಯಕರನ್ನು ಬಂಧಿಸಲು ಬಯಸಿದ್ದಾರೆ. ಅದರಲ್ಲಿ ನಾನು, ರಾಘವ್ ಚಡ್ಡಾ, ದುರ್ಗೇಶ್ ಪಾಠಕ್ ಮತ್ತು ಸೌರಭ್ ಭಾರದ್ವಾಜ್ ಇದ್ದೀವಿ ಎಂದಿದ್ದಾರೆ ಅತಿಶಿ. ಇದನ್ನೂ ಓದಿ: ಶಿವಮೊಗ್ಗದ ಬಂಡಾಯಕ್ಕೆ ಚುನಾವಣಾ ಚಾಣಕ್ಯ ಅಮಿತ್ ಶಾ ಎಂಟ್ರಿ!

