ಚಿತ್ರದುರ್ಗ: ತಮ್ಮ ಆರೋಗ್ಯದ ಬಗ್ಗೆ ಜಮೀರ್ ಅಹ್ಮದ್ ಅವರೇ ಪ್ರತಿಕ್ರಿಯಿಸಿದ್ದಾರೆ.
ಆಸ್ಪತ್ರೆಯಿಂದ ಹೊರಬಂದ ಅವರು ಸುದ್ದಿಗರರೊಂದಿಗೆ ಮಾತನಾಡಿದರು. ತುಮಕೂರಿನಲ್ಲಿ ಮಾಜಿ ಶಾಸಕ ರಫೀಕ್ ಅಹ್ಮದ್ ಅವರ ಮನೆಯಲ್ಲಿ ಬೆಳಗ್ಗಿನ ತಿಂಡಿ ವ್ಯವಸ್ಥೆ ಮಾಡಿದ್ದರು. ಈ ವೇಳೆ ವಡೆ ಚೆನ್ನಗಿತ್ತು ಅಂತಾ 2 ವಡೆ ಜಾಸ್ತಿ ತಿಂದುಬಿಟ್ಟೆ. ಪರಿಣಾಮ ಗ್ಯಸ್ಟ್ರಿಕ್ ಸಮಸ್ಯೆಯಾಗಿ ಎದೆನೋವು ಕಾಣಿಸಿಕೊಂಡಿತು ಎಂದು ಹೇಳಿದರು. ಇದನ್ನೂ ಓದಿ:ಬೈಕ್ ಟಿಪ್ಪರ್ ನಡುವೆ ಭೀಕರ ಅಪಘಾತ: ಸ್ಥಳದಲೇ ಸವಾರ ಸಾವು
ಅದಕ್ಕೆ ಕೋಡಲೇ ರಿಸ್ಕ ತೆಗೆದುಕೊಳ್ಳುವುದು ಬೇಟ ಎಂದು ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಂಡೆ. ಬ್ಲಡ್ ಟೆಸ್ಟ್ ಸಹಿತ ಎಲ್ಲಾ ತರದ ಅನ್ನು ವೈದ್ಯರು ಮಾಡಿದರು. ದೇವರ ದಯೆಯಿಂದ ಎಲ್ಲಾ ನಾಮ್ಲ್ ಇದೆ. ಯಾವುದೇ ಸಮಸ್ಯೆ ಇಲ್ಲ. ಗ್ಯಸ್ಟ್ರಿಕ್ ಆಗಿತ್ತು. ಹಾಗಾಗಿ ಸ್ಪಲ್ಪ ಎದೆನೋವು ಆಯಿತು ಎಂದು ಜಮೀರ್ ತಿಳಿಸಿದರು. ಇದನ್ನೂ ಓದಿ: ತ್ಯಾಜ್ಯ ತುಂಬಿದ ತೊಟ್ಟಿಗೆ ಬಿದ್ದು ಮಗು ಸಾವು
ಚಿತ್ರದುರ್ಗ ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ ಪರ ಪ್ರಚಾರಕ್ಕೆ ಸಚಿವರು ಆಗಮಿಸಿದ್ದರು. ಈ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ತಪಾಸಣೆ ನಡೆಸಲಾಯಿತು. ಸದ್ಯ ಅವರ ಅರೋಗ್ಯ ಸುಧಾರಿಸಿದೆ. ಇದನ್ನೂ ಓದಿ: 2 ಲಕ್ಕಕ್ಕೂ ಹೆಚ್ಚು ಭಾರತೀಯರ ಎಕ್ಸ್ ಖಾತೆಗಳ ನಿಷೇಧ