ನಟ ದಳಪತಿ ವಿಜಯ್ ಅವರು ಸದ್ಯ ಗೋಟ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಶೀಘ್ರವೇ ಅವರ 69 ನೆ ಸಿನಿಮಾ ಘೋಷಣೆ ಆಗಲಿದ್ದು, ಇದು ಅವರ ಕೊನೆಯ ಸಿನಿಮಾ ಎನ್ನಲಾಗುತ್ತಿದೆ.
ವಿಜಯ್ ತಾಯಿ ಶೋಭಾ ಅವರಿಗೆ ದೇಚಸ್ಥಾನ ನಿರ್ಮಾಣ ಮಾಡಬೇಕು ಎನ್ನುವ ಕನಸಿತ್ತು. ಆದರಿಂದ ತಮಿಳುನಾಡಿನ ಚೆನ್ನೈನ ಕೊರಟ್ಟೂರ್‌ನಲ್ಲಿ ಸಾಯಿ ಬಾಬಾ ಮಂದಿರವನ್ನು ನಿರ್ಮಾಣವಾಗಿದೆ.
ಕಳೆದ ಫೆಬ್ರವರಿಯಲ್ಲಿ ಈ ಮಂದಿರ ನಿರ್ಮಾಣದ ಕಾರ್ಯ ಪೂರ್ಣಗೊಂಡಿದೆ ಎನ್ನಲಾಗಿದೆ. ಅವರು ಇತ್ತಿಚೆಗೆ ಭೇಟಿ ಸಹ ನೀಡಿದ್ದಾರೆ. ವಿಜಯ್ ಅವರು ‘ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ತ್ರಿಶಾ ನಾಯಕಿ. ಈ ಸಿನಿಮಾದಲ್ಲಿ ಪ್ರಭುದೇವ ಮೊದಲಾದವರು ನಟಿಸುತ್ತಿದ್ದಾರೆ. ಈ ಚಿತ್ರವನ್ನು ವೆಂಕಟ್ ಪ್ರಭು ನರ‍್ದೇಶನ ಮಾಡುತ್ತಿದ್ದಾರೆ.

