ಶಿವಮೊಗ್ಗ: ತುಂಗಾ ನದಿಯಲ್ಲಿ ಈಜಲು ಹೋಗಿ ಮೂವರು ವಿದ್ಯರ್ಥಿಗಳು ನೀರುಪಾಲಾಗಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದ.
ರಫನ್, ಇಯನ್ ಹಾಗೂ ಸಮ್ಮರ್ ಮೃತ ವಿದ್ಯಾರ್ಥಿಗಳು. ರಂಜಾನ್ ಉಪವಾಸ ಮುಗಿಸಿ ಮೂವರು ಈಜಲು ತುಂಗಾ ನದಿಗೆ ತೆರಳಿದ್ದಾರೆ. ಈ ವೇಳೆ ಘಟನೆ ಸಂಭವಿಸಿದೆ. ಸದ್ಯ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಮಕ ದಳದ ಸಿಬ್ಬಂದಿ ಮೃತದೇಹಗಳನ್ನು ನದಿಯಿಂದ ಹೊರತೆಗೆದಿದ್ದಾರೆ.

