ಕ್ಯಾನ್ಸರ್ ಜಾಗತಿಕವಾಗಿ ಹೆಮ್ಮರವಾಗಿ ಬೆಳೆಯುತ್ತಿರುವ ರೋಗವಾಗಿ ಪರಿಣಮಿಸಿದೆ. ಅದರಲ್ಲೂ ಮಹಿಳೆಯರಲ್ಲಿ ಕಂಡುಬರುವ ಸ್ತನ ಕ್ಯಾನ್ಸರ್ ವಿಶ್ವದಾದ್ಯಂತ ಲಕ್ಷಾಂತರ ಮಹಿಳೆಯರನ್ನು ಬಾಧಿಸುತ್ತಿದೆ. ಸ್ತನ ಕ್ಯಾನ್ಸರ್‌ಗೆ (Chest Cancer) ಕಾರಣ ಹುಡುಕುತ್ತಾ ಹೋದರೆ ಸುಮಾರು ಅಂಶಗಳು ಸಿಗುತ್ತದೆ. ಮೊದಲನೆಯದಾಗಿ ಆನುವಂಶಿಕ ಅಂಶಗಳು, ಜೀವನಶೈಲಿ (Lifestyle) ಆಯ್ಕೆಗಳು ಮತ್ತು ಆಹಾರಕ್ರಮ (Food Style) ಹೀಗೆ ಹಲವು ಪ್ರಭಾವಿಸುತ್ತವೆ. ನಾವಿಲ್ಲಿ ಈ ಅಂಶಗಳು ಹೇಗೆ ಕಾರಣವಾಗುತ್ತದೆ ಮತ್ತು ಅದಕ್ಕಿರುವ ಪರಿಹಾರ ಏನು ಎಂಬುದರ ಬಗ್ಗೆ ತಿಳಿಯೋಣ.
ಆರೋಗ್ಯಕರ ತೂಕ
ಅಧಿಕ ತೂಕವು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ, ಹೀಗಾಗಿ ಸರಿಯಾದ ತೂಕ ನಿರ್ವಹಣೆ ಪ್ರಮುಖವಾದ ಅಂಶವಾಗಿದೆ. ಹೆಚ್ಚುವರಿ ದೇಹದ ಕೊಬ್ಬು, ವಿಶೇಷವಾಗಿ ಹೊಟ್ಟೆಯ ಸುತ್ತ, ಈಸ್ಟ್ರೊಜೆನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.
ಇದು ಸ್ತನ ಗೆಡ್ಡೆಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಸಮತೋಲಿತ ಆಹಾರ ಮತ್ತು ನಿಯಮಿತ ದೈಹಿಕ ಚಟುವಟಿಕೆಯ ಮೂಲಕ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವ ಮೂಲಕ ಮಹಿಳೆಯರು ತಮ್ಮ ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು.
ವ್ಯಾಯಾಮ
ಜಡ್ಡು ಹಿಡಿದ ದೇಹ ಸ್ತನ ಕ್ಯಾನ್ಸರ್ ಜೊತೆಗೆ ಇನ್ನಿಲ್ಲದ ರೋಗಗಳಿಗೆ ಆಹ್ವಾನ ನೀಡಿದಂತೆ, ಆದ್ದರಿಂದ ವ್ಯಾಯಾಮ ಮಾಡುವ ಅಭ್ಯಾಸವನ್ನು ಮಹಿಳೆಯರು ರೂಢಿಸಿಕೊಳ್ಳಬೇಕು.
ವ್ಯಾಯಾಮವು ದೇಹದ ಹಾರ್ಮೋನುಗಳನ್ನು ಸಾಮಾನ್ಯಗೊಳಿಸಲು ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸಲು ಸಹಾಯ ಮಾಡುತ್ತದೆ. ವ್ಯಾಯಾಮವು ಈಸ್ಟ್ರೊಜೆನ್ ಮಟ್ಟವನ್ನು ಕಡಿಮೆ ಮಾಡಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಆರೋಗ್ಯಕರ ಆಹಾರ ಕ್ರಮ
ಕ್ಯಾನ್ಸರ್ ಅಪಾಯವನ್ನು ನಿಯಂತ್ರಿಸುವಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಮಹಿಳೆಯರು ತಮ್ಮ ಆಹಾರದಲ್ಲಿ ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಪ್ರೋಟೀನ್-ಭರಿತ ಆಹಾರಗಳಂತಹ ಆರೋಗ್ಯಕರ ಪೌಷ್ಟಿಕಾಂಶವನ್ನು ಸೇರಿಸಿಕೊಳ್ಳಬೇಕು.
ಇದನ್ನೂ ಓದಿ:
ನಿಮ್ಮ ಶೃಂಗಾರ ಸಾಮಾರ್ಥ್ಯವನ್ನು ಹೆಚ್ಚಳ ಮಾಡುವ ತರಕಾರಿಗಳು ಇಲ್ಲಿವೆ
ಇದು ದೇಹಕ್ಕೆ ಸರಿಯಾದ ಪ್ರಮಾಣದ ಪಾಲಿಫಿನಾಲ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಪಡೆಯಲು ಸಹಾಯ ಮಾಡಿ ಬ್ರೆಸ್ಟ್ ಕ್ಯಾನ್ಸರ್ ಅನ್ನು ತಡೆಯಲು ಸಹಾಯ ಮಾಡುತ್ತದೆ.
ಮದ್ಯ ಸೇವನೆ
ಆಲ್ಕೊಹಾಲ್ ಸೇವನೆಯು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಸ್ತನ ಕ್ಯಾನ್ಸರ್ ಸಂದರ್ಭದಲ್ಲಿ, ಮಧ್ಯಮ ಆಲ್ಕೊಹಾಲ್ ಸೇವನೆಯು ಈಸ್ಟ್ರೊಜೆನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಡಿಎನ್ಎಗೆ ಹಾನಿ ಮಾಡುತ್ತದೆ, ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಮದ್ಯ ಸೇವನೆ ಬಿಟ್ಟು ಬಿಡುವುದು ಸೂಕ್ತ.
ಧೂಮಪಾನ
ಧೂಮಪಾನವು ಸ್ತನ ಕ್ಯಾನ್ಸರ್ ಸೇರಿದಂತೆ ಹಲವಾರು ರೀತಿಯ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯದೊಂದಿಗೆ ಸಂಬಂಧಿಸಿದೆ.
ಸೆಕೆಂಡ್‌ಹ್ಯಾಂಡ್ ಸ್ಮೋಕ್ ಮೂಲಕವೂ ನಾವು ಕ್ಯಾನ್ಸರ್‌ಗೆ ತುತ್ತಾಗಬಹುದು. ಆದ್ದರಿಂದ ಧೂಮಪಾನ ಮತ್ತು ಧೂಮಪಾನದ ವಾತಾವರಣವನ್ನು ತಪ್ಪಿಸುವ ಕೆಲಸ ಮಾಡಿ.
ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿ
ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿ, ಇದು ಋತುಬಂಧದ ಲಕ್ಷಣಗಳನ್ನು ಸರಾಗಗೊಳಿಸಲು ಸಾಮಾನ್ಯವಾಗಿ ಬಳಸಲಾಗುತ್ತದೆ. ಆದರೆ ಇದು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಆದ ಕಾರಣ ತಜ್ಞರೊಂದಿಗೆ ಸಂಭಾವ್ಯ ಅಪಾಯಗಳು ಮತ್ತು ಪ್ರಯೋಜನಗಳನ್ನು ಚರ್ಚೆ ಮಾಡಿ.
ಸ್ತನ್ಯಪಾನ
ತಮ್ಮ ಮಕ್ಕಳಿಗೆ ಹಾಲುಣಿಸುವ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬರುವ ಅಪಾಯ ಕಡಿಮೆ. ಸ್ತನ್ಯಪಾನವು ಮಹಿಳೆಯ ಜೀವಿತಾವಧಿಯಲ್ಲಿ ಈಸ್ಟ್ರೊಜೆನ್‌ಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ.
ಹೇಗಿರುತ್ತೆ ಗೊತ್ತಾ ರಾಜರ ದರ್ಬಾರ್!
ಆರಂಭಿಕ ಪತ್ತೆ ಮತ್ತು ಸ್ಕ್ರೀನಿಂಗ್
ನಿಯಮಿತ ಸ್ತನ ಸ್ವಯಂ-ಪರೀಕ್ಷೆ, ಕ್ಲಿನಿಕಲ್ ಸ್ತನ ಪರೀಕ್ಷೆ ಮತ್ತು ಮಮೊಗ್ರಾಮ್‌ನಂತಹ ಆರಂಭಿಕ ರೋಗ ಪತ್ತೆಗಳನ್ನು ತೆಗೆದುಕೊಳ್ಳಬೇಕು. ಜೀವನಶೈಲಿ ಮತ್ತು ಆಹಾರದ ಆಯ್ಕೆಗಳು ಸ್ತನ ಕ್ಯಾನ್ಸರ್ ಅಪಾಯವನ್ನು ಪ್ರಭಾವಿಸಬಹುದಾದರೂ, ಈ ರೋಗದ ವಿರುದ್ಧದ ಹೋರಾಟದಲ್ಲಿ ಆರಂಭಿಕ ಸ್ಕ್ರೀನಿಂಗ್ ಪ್ರಮುಖ ಸಾಧನವಾಗಿ ಉಳಿದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

