ಸ್ನೇಹಿತರು ನಮ್ಮ ಜೀವನದ ಉತ್ತಮ ಒಡನಾಡಿಗಳು ಮಾರ್ಗದರ್ಶಕರು ಎಂಬ ಮಾತಿದೆ. ಜೀವನದಲ್ಲಿ ನಾವೆಷ್ಟೇ ಸಂಪತ್ತು (Wealth) ಗಳಿಸಿದರೂ ನಮ್ಮ ಪರವಾಗಿ ಒಬ್ಬ ಉತ್ತಮ ಗೆಳೆಯನಿಲ್ಲ ಎಂದಾದಲ್ಲಿ ಅದರಷ್ಟು ವೇದನೆ ಇನ್ನೊಂದಿಲ್ಲ ಎಂಬುದಾಗಿ ಅನೇಕ ಪರಿಣಿತರು ತಿಳಿಸುತ್ತಾರೆ. ನಮ್ಮ ಜೀವನದಲ್ಲಿ ಬರುವವರು ನಮಗೆ ದೊರಕುವವರು ಎಲ್ಲರೂ ಒಳ್ಳೆಯ ಸ್ನೇಹಿತರಾಗಿರುವುದಿಲ್ಲ. ಒಮ್ಮೊಮ್ಮೆ ಮೋಸ ಮಾಡುವ ಕಪಟ (Hypocrite) ಸ್ನೇಹಿತರೂ ಇರುತ್ತಾರೆ ಅದನ್ನು ಈ ಕೆಳಗಿನ ಕೆಲವೊಂದು ಲಕ್ಷಣಗಳಿಂದ ತಿಳಿದುಕೊಳ್ಳಬಹುದಾಗಿದೆ.
ನಿಮ್ಮಿಂದ ಪಡೆದುಕೊಳ್ಳುವುದು ಮಾತ್ರ ಅವರಿಗೆ ಗೊತ್ತಿರುತ್ತದೆ
ನಿಮ್ಮಿಂದ ಪ್ರಯೋಜನ ಲಾಭವಿದೆ ಎಂಬುದು ಗೊತ್ತಾದರೆ ನಿಮ್ಮ ಬೆನ್ನ ಹಿಂದೆಯೇ ಒಳ್ಳೆಯ ಸ್ನೇಹಿತರಂತೆ ಸೋಗು ಹಾಕುವ ಸ್ನೇಹಿತರೂ ಇರುತ್ತಾರೆ. ಇವರು ನಿಮ್ಮಿಂದ ಲಾಭವನ್ನು ಮಾತ್ರ ಪಡೆಯುತ್ತಾರೆ.
ನಿಮ್ಮಿಂದ ಹಣ ಪಡೆದುಕೊಂಡರೂ ಅದನ್ನು ಮರಳಿಸುವುದನ್ನು ಯೋಚಿಸುವುದಿಲ್ಲ. ಇವರು ಕಾರ್ಯಜಾಣರು ಎಂಬ ಸತ್ಯವನ್ನು ಅರಿಯಬೇಕು. ಇಂತಹವರಿಂದ ದೂರವಿರಬೇಕು.
ನಿಮ್ಮ ಅಗತ್ಯಗಳಿಗೆ ಅವರು ಲಭ್ಯರಿರುವುದಿಲ್ಲ
ನಿಮ್ಮ ಸಹಾಯಕ್ಕೆ ನಿಮ್ಮ ಕಷ್ಟಕಾಲದಲ್ಲಿ ಈ ಸ್ನೇಹಿತರು ದೊರೆಯುವುದೇ ಇಲ್ಲ. ಏನಾದರೂ ನೆಪವನ್ನ ಹೇಳಿ ತಪ್ಪಿಸಿಕೊಳ್ಳುತ್ತಾರೆ. ನಿಮಗೇನಾದರೂ ಆರ್ಥಿಕ ಸಹಾಯ ಬೇಕು ಎಂದಾಗ ಅವರು ನೆಪಗಳನ್ನು ಹೇಳುತ್ತಾರೆ.
ಈ ಸ್ನೇಹಿತರು ನಿಮ್ಮ ಕಷ್ಟಗಳಿಗೆ ಸ್ಪಂದಿಸುವುದಿಲ್ಲ ಎಂಬುದನ್ನು ನಿರ್ಧರಿಸಿ. ಎಷ್ಟು ಬೇಕೋ ಅಷ್ಟು ಮಾತ್ರ ಸ್ನೇಹವನ್ನು ಇವರೊಂದಿಗೆ ನಿರ್ವಹಿಸಿ
ಭರವಸೆಗಳನ್ನು ನೀಡುವವರಲ್ಲ
ಮಾತು ಕೊಟ್ಟರೆ ಅದನ್ನು ಉಳಿಸಿಕೊಳ್ಳುವ ಜಾಯಮಾನ ಇವರದ್ದಾಗಿರುವುದಿಲ್ಲ. ಕೊಟ್ಟ ಮಾತಿಗೆ ತಪ್ಪಿ ನಡೆಯುವವರು ಇವರಾಗಿರುತ್ತಾರೆ. ಯಾವುದೇ ಆಶ್ವಾಸನೆಗಳನ್ನು ನೀಡುವುದಕ್ಕೆ ಹಿಂದೆ ಮುಂದೆ ಯೋಚಿಸುತ್ತಾರೆ.
ಇದನ್ನೂ ಓದಿ:
ಚಳಿಗಾಲದಲ್ಲಿ ಈ ಕಾರಣಕ್ಕೆ ನೀವು ನುಗ್ಗೆಸೊಪ್ಪು ತಿನ್ನಲೇಬೇಕು!
ಋಣಾತ್ಮಕತೆಯನ್ನು ಪಸರಿಸುತ್ತಾರೆ
ಈ ಸ್ನೇಹಿತರು ಗಾಸಿಪ್‌ಗಳನ್ನು ಹರಡುವಲ್ಲಿ ನಿಷ್ಣಾಣತಾಗಿರುತ್ತಾರೆ. ಧನಾತ್ಮಕತೆಯ ಬದಲಿಗೆ ಋಣಾತ್ಮಕ ಅಂಶವನ್ನೇ ಹರಡುತ್ತಾರೆ. ಋಣಾತ್ಮಕವಾಗಿಯೇ ಯೋಚಿಸುತ್ತಾರೆ ಹಾಗೂ ಋಣಾತ್ಮಕ ಯೋಚನೆಗಳನ್ನು ಹರುಡುತ್ತಾರೆ.
ಇತರರ ಬಗ್ಗೆ ಗಾಸಿಪ್ ಹರಡುತ್ತಾರೆ
ನಕಲಿ ಸ್ನೇಹಿತರು ಇತರರ ಬಗ್ಗೆ ಸುಳ್ಳು ಸುದ್ದಿ ಹಬ್ಬಲು ನಿಷ್ಣಾತರಾಗಿರುತ್ತಾರೆ. ಇತರರ ಬಗ್ಗೆ ಗಾಸಿಪ್ ಮಾಡುವವರು ನಾಳೆ ನಿಮ್ಮ ಬಗ್ಗೆ ಕೂಡ ಹೇಳುತ್ತಾರೆ ಎಂಬುದನ್ನು ಮರೆಯದಿರಿ. ಈ ನಡವಳಿಕೆಯು ಹಾನಿಕಾರಕವಾಗಿದೆ ಮತ್ತು ಜನರ ಗೌಪ್ಯತೆಗೆ ಗೌರವದ ಕೊರತೆಯನ್ನು ತೋರಿಸುತ್ತದೆ.
ಸ್ಪರ್ಧಾತ್ಮಕ ಮನೋಭಾವ ಅವರದಾಗಿರುತ್ತದೆ ಬೆಂಬಲವಾಗಿರುವುದಿಲ್ಲ
ಸ್ಪರ್ಧೆಯು ಆರೋಗ್ಯಕರವಾಗಿದ್ದರೆ ಅದು ಸಂಬಂಧವನ್ನು ಉತ್ತಮಗೊಳಿಸುತ್ತದೆ. ಸ್ನೇಹದ ವಿಷಯದಲ್ಲಿ ಸ್ಪರ್ಧೆ ವಿಷಕಾರಿಯಾಗಿರಬಾರದು. ಆದರೆ ಇಂತಹ ಸ್ನೇಹಿತರು ಸ್ಪರ್ಧಾ ಮನೋಭಾವದಲ್ಲಿರುತ್ತಾರೆ ಹಾಗೂ ಬೆಂಬಲ ನೀಡುವವರಲ್ಲ.
ನಿಮ್ಮ ಮಿತಿಗಳನ್ನು ಗೌರವಿಸುವುದಿಲ್ಲ
ನಿಮಗೆ ಸಮಯ ಬೇಕು ಇಲ್ಲವೇ ಸ್ಪೇಸ್ ಬೇಕು ಎಂದು ಹೇಳಿದಾಗ ಒಬ್ಬ ಒಳ್ಳೆಯ ಸ್ನೇಹಿತ ಅದನ್ನು ಅಂಗೀಕರಿಸುತ್ತಾನೆ. ಆದರೆ ಕೆಲವು ಸ್ನೇಹಿತರು ಇದನ್ನು ಮನ್ನಿಸುವುದಿಲ್ಲ ಹಾಗೂ ನಿಮ್ಮ ವೈಯಕ್ತಿಕ ವಿಷಯಕ್ಕೆ ತಲೆಹಾಕಲು ಆಸಕ್ತಿ ತೋರುತ್ತಾರೆ.
ನಿಮ್ಮ ಬಗ್ಗೆಯೇ ಕೆಟ್ಟ ಮನೋಭಾವನೆ ಬೆಳೆಸುವಂತೆ ಮಾಡುತ್ತಾರೆ
ನಕಲಿ ಸ್ನೇಹಿತರು ನಿಮ್ಮ ಬಗ್ಗೆಯೇ ಕೆಟ್ಟ ಭಾವನೆ ಮೂಡುವಂತೆ ಮಾಡುತ್ತಾರೆ. ನಿಮ್ಮ ದೌರ್ಬಲ್ಯಗಳನ್ನು ಗುರುತಿಸುತ್ತಾರೆ ಹಾಗೂ ಅದನ್ನೇ ಹಿಯಾಳಿಸಿಕೊಂಡಿರುತ್ತಾರೆ.
ಅಸೂಯೆ ಅಥವಾ ಸ್ಪರ್ಧಾತ್ಮಕ ಸ್ವಭಾವದಿಂದ ನಡೆಸಲ್ಪಡುವ ನಕಲಿ ಸ್ನೇಹಿತ ನಿಮ್ಮ ಯಶಸ್ಸಿಗೆ ಸಾಕ್ಷಿಯಾದಾಗ ನಿಮ್ಮ ಸ್ವಾಭಿಮಾನವನ್ನು ಕೆಳಗಿಳಿಸಲು ಪ್ರಯತ್ನಿಸಬಹುದು.
ಅಯೋಧ್ಯೆಯಂತೆ ಪವಿತ್ರವಾಗಿರುವ ರಾಮ ಮಂದಿರಗಳಿವು!
ನಿಮ್ಮ ಯಶಸ್ಸಿನಿಂದ ಖುಷಿಯಾಗಿರುವುದಿಲ್ಲ
ನಕಲಿ ಸ್ನೇಹಿತ ನಿಮ್ಮ ಯಶಸ್ಸಿನಿಂದ ಅಸೂಯೆ ಹೊಂದುತ್ತಾರೆ ಹಾಗೂ ಅವರ ಯಶಸ್ಸಿಗೆ ಮುಳುವಾಗುತ್ತದೆ ಎಂದು ಭಯಪಡುತ್ತಾರೆ. ನಿಮ್ಮ ಸಾಧನೆಗಳಿಂದ ಅವರು ಹೊಟ್ಟೆಕಿಚ್ಚುಪಡುತ್ತಾರೆ. ನಿಮ್ಮ ಯಶಸ್ಸು ನಿಜವಾದ ಸಂತೋಷವನ್ನು ಉಂಟುಮಾಡುವ ಬದಲು ಅವರ ಸ್ಪರ್ಧಾತ್ಮಕ ಪ್ರವೃತ್ತಿಯನ್ನು ಪ್ರಚೋದಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

