ಕೋವಿಡ್-19 (Covid – 19) ಸಾಂಕ್ರಾಮಿಕ ಕಾಯಿಲೆಯ ಸಂದರ್ಭದಲ್ಲಿ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಹೇಳಿತ್ತು. ಈಗ ಅದು ಬಹುತೇಕರಿಗೆ ಅಭ್ಯಾಸವಾಗಿ ಹೋಗಿದೆ ಅಂತ ಹೇಳಬಹುದು. ಬೆಳಗ್ಗೆ ಎದ್ದು ಬೇಗನೆ ತಯಾರಾಗಿ ಟ್ರಾಫಿಕ್ ನಲ್ಲಿ ಪರದಾಡುತ್ತಾ ಆಫೀಸಿಗೆ ಹೋಗುವ ಗೋಜಿಲ್ಲ ಅಂತ ಅನೇಕರು ಈಗ ವರ್ಕ್ ಫ್ರಮ್ ಹೋಂ (Work From Home) ಇರುವ ಕೆಲಸಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ರೀತಿಯ ಜಡ ಜೀವನಶೈಲಿಯನ್ನು ಅನುಸರಿಸುವಾಗ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು (Problems) ಸಹ ಉಂಟಾಗುತ್ತವೆ. ಏಕೆಂದರೆ, ನಿಮ್ಮ ದೇಹಕ್ಕೆ ಚಲನೆಯ ಅಗತ್ಯವಿದೆ ಮತ್ತು ಒಂದು ದಿನದಲ್ಲಿ ನೀವು ಹೆಚ್ಚು ಹೆಚ್ಚು ಓಡಾಡದೆ ಇದ್ದರೆ, ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಗಂಟೆಗಟ್ಟಲೆ ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವುದರಿಂದ ಬೊಜ್ಜು ಬರಬಹುದು. ಇದೆಲ್ಲವೂ ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಅಪಾಯಕಾರಿ ಅಂತ ಹೇಳಬಹುದು.
ಕುಳಿತುಕೊಂಡು ಕೆಲಸ ಮಾಡುವುದರಿಂದಿವೆಯಂತೆ ಅನೇಕ ಸಮಸ್ಯೆಗಳು
ಹಾಗಾದರೆ, ಈ ಪರಿಸ್ಥಿತಿಯನ್ನು ಹೇಗೆ ಎದುರಿಸುವುದು? ಕುಳಿತುಕೊಂಡು ಕೆಲಸ ಮಾಡುವುದರಿಂದ ಬರುವ ಅಪಾಯಗಳನ್ನು ಹೇಗೆ ತಡೆಗಟ್ಟುವುದು ಅಂತ ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.
“ನೀವು 30 ನಿಮಿಷಗಳು ಅಥವಾ 1 ಗಂಟೆಯ ಕಾಲ ಕುಳಿತುಕೊಂಡು ಕೆಲಸ ಮಾಡುತ್ತಿರುವಾಗ ವಿಶ್ರಾಂತಿ ತೆಗೆದುಕೊಳ್ಳದೆ ಇದ್ದರೆ, ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು” ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
ಕುಳಿತುಕೊಂಡು ಕೆಲಸ ಮಾಡುವುದರಿಂದ ಎದುರಾಗುವ ಅಪಾಯಗಳನ್ನು ಹೇಗೆ ತಪ್ಪಿಸುವುದು**?**
1. ಸ್ಟ್ಯಾಂಡಿಂಗ್ ಡೆಸ್ಕ್ ಆಯ್ಕೆ ಮಾಡಿಕೊಳ್ಳಿ: ನೀವು ನಿಂತುಕೊಂಡು ಕೆಲಸ ಮಾಡಲು ಸ್ಟ್ಯಾಂಡಿಂಗ್ ಡೆಸ್ಕ್ ಅನ್ನು ಆಯ್ಕೆ ಮಾಡಿಕೊಳ್ಳಿರಿ. ನೀವು ಮನೆಯಿಂದ ಕೆಲಸ ಮಾಡುತ್ತಿದ್ದರೂ ಸಹ ಈ ಡೆಸ್ಕ್ ಅನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.
2. ವಾಕಿಂಗ್ ಮೀಟಿಂಗ್‌ಗಳು ಒಳ್ಳೆಯದು: ಆಫೀಸಿನಲ್ಲಿ ಕುಳಿತುಕೊಂಡು ಮೀಟಿಂಗ್ ಮಾಡುವ ಬದಲಿಗೆ, ವಾಕಿಂಗ್ ಮೀಟಿಂಗ್ ಮಾಡುವುದು ಒಳ್ಳೆಯದು.
ನೀವು ಮೂರರಿಂದ ನಾಲ್ಕು ಜನರ ಗುಂಪನ್ನು ಹೊಂದಿದ್ದರೆ ಮತ್ತು ಹೊರಗೆ ಉದ್ಯಾನವನವಿರುವ ಉತ್ತಮ ಕಚೇರಿಯನ್ನು ನೀವು ಹೊಂದಿದ್ದರೆ, ನೀವು ಅಲ್ಲಿಯೇ ನಡೆದಾಡಿಕೊಂಡು ನಿಮ್ಮ ಸಭೆಗಳನ್ನು ನಡೆಸಬಹುದು.
ಇದನ್ನೂ ಓದಿ:
ನೀವು ಮಾಡುವ ವ್ಯಾಯಾಮ ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ಮದ್ದು! ಹೇಗೆ ಗೊತ್ತಾ?
ಒಂದು ವೇಳೆ ನೀವು ಮನೆಯಲ್ಲಿದ್ದರೆ, ಫೋನ್ ನಲ್ಲಿ ಮೀಟಿಂಗ್ ಮಾಡುತ್ತಾ ಅಲ್ಲಿಯೇ ಸುತ್ತಲೂ ಓಡಾಡಬಹುದು.
3. ವಿಶ್ರಾಂತಿ ಅನುಭವಿಸಲು ದೇಹವನ್ನು ಸ್ಟ್ರೆಚ್ ಮಾಡಿ: ಕುಳಿತುಕೊಂಡು ಕೆಲಸ ಮಾಡುವಾಗ ಮಧ್ಯೆ ಮಧ್ಯೆ ವಿಶ್ರಾಂತಿ ಪಡೆಯಲು ದೇಹವನ್ನು ಸ್ಟ್ರೆಚ್ ಮಾಡಿ.
ನೀವು ದೀರ್ಘಕಾಲದವರೆಗೆ ಕುಳಿತಿದ್ದರೆ, ನೀವು ಮಧ್ಯೆ ಎರಡು ನಿಮಿಷಗಳ ಕಾಲ ದೇಹವನ್ನು ಸ್ಟ್ರೆಚ್ ಮಾಡಬಹುದು. ಈ ರೀತಿಯಾಗಿ ಮಾಡುವುದು ದೇಹಕ್ಕೆ ತುಂಬಾನೇ ಪ್ರಯೋಜನ ತರುತ್ತದೆ ಎಂದು ಅಂಜಲಿ ಹೇಳುತ್ತಾರೆ.
4. ವಿಶ್ರಾಂತಿ ಪಡೆಯುವಾಗ ಆಳವಾದ ಉಸಿರಾಟ ಅಭ್ಯಾಸ ಮಾಡಿ: ನೀವು ಸಮಯ ಸಿಕ್ಕಾಗ ಕುಳಿತುಕೊಂಡೆ ಆಳವಾದ ಉಸಿರಾಟವನ್ನು ಅಭ್ಯಾಸ ಮಾಡಬಹುದು. ಪ್ರಾಣಾಯಾಮದಂತಹ ವ್ಯಾಯಾಮಗಳನ್ನು ಮನೆಯಲ್ಲಿ ಸುಲಭವಾಗಿ ಮಾಡಬಹುದು ಮತ್ತು ಅವು ನಿಮ್ಮನ್ನು ರಿಫ್ರೆಶ್ ಮಾಡುತ್ತದೆ.
ನೀವು ಪ್ರತಿ ಅರ್ಧಗಂಟೆಗೆ ಒಮ್ಮೆ 8 ನಿಮಿಷಗಳ ಕಾಲ ನಿಮ್ಮ ಡೆಸ್ಕ್ ಬಳಿ ಎದ್ದು ನಿಂತುಕೊಂಡು ಸಭೆಗಳನ್ನು ನಡೆಸಿ ಮತ್ತು ಉಳಿದ 2 ನಿಮಿಷಗಳ ಕಾಲ ಸ್ವಲ್ಪ ಅಲ್ಲಿಯೇ ಅತ್ತಿಂದಿತ್ತ ನಡೆದಾಡಿ.
ಬಾಟಲ್ ಗ್ರೀನ್ ಸೀರೆಯಲ್ಲಿ ಚುಟು ಚುಟು ಬ್ಯೂಟಿಯ ಫೋಟೋಸ್!
ಈ ಸಲಹೆಗಳು ದಿನದಲ್ಲಿ 8 ರಿಂದ 10 ಗಂಟೆಗಳ ಕಾಲ ಕುಳಿತುಕೊಳ್ಳುವಿಕೆಯಿಂದಾಗುವ ಆರೋಗ್ಯ ಸಮಸ್ಯೆಗಳಿಂದ ದೂರವಿಡಲು ಸಹಾಯ ಮಾಡುತ್ತವೆ ಅಂತ ಪೌಷ್ಟಿಕ ತಜ್ಞೆ ಅಂಜಲಿ ಅವರು ಹೇಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

