ವ್ಯಾಯಾಮ (Exercise) ಮಾಡೋದು ಕೇವಲ ದೇಹಕ್ಕೆ ಅಂತಾ ನೀವೂ ತಿಳಿದುಕೊಂಡಿರಬಹುದು, ಆದರೆ ನಿಮಗೆ ಗೊತ್ತಿಲ್ಲದಂತೆ ನೀವು ಮಾಡುವ ವ್ಯಾಯಾಮ ನಿಮ್ಮ ಮನಸ್ಸನ್ನು ಕೂಡ ಆರೋಗ್ಯಯುತವಾಗಿಸುತ್ತದೆ. ಹೌದು ಪ್ರತಿನಿತ್ಯ ಸ್ವಲ್ಪ ಹೊತ್ತು ದೇಹವನ್ನು (Body) ವ್ಯಾಯಾಮದ ಮೂಲಕ ದಂಡಿಸಿದರೆ ಮನಸ್ಸಿಗೂ ವಿಶ್ರಾಂತಿ ಸಿಗುತ್ತದೆ. ದೇಹ ಮಾತ್ರವಲ್ಲ, ಮನಸ್ಸು ಸರಿ ಇದ್ದರೂ ಯೋಗಕ್ಷೇಮ ಅನ್ನೋದು ತಂತಾನೇ ಬರುತ್ತದೆ. ದೇಹಕ್ಕೆ ಮುಲಾಮು ಹಚ್ಚುವ ಮೂಲಕ ಸರಿಮಾಡಿಕೊಳ್ಳಬಹುದು, ಆದರೆ ಮಾನಸಿಕವಾಗಿ ಆರೋಗ್ಯ (Mental Health) ವಾಗಿರಲು ಮದ್ದು, ಮಾತ್ರೆಗಿಂತ ಮನಸ್ಸಿಗೆ ಇಷ್ಟವಾಗುವ ವಿಷಯಗಳು ಕೆಲಸ ಮಾಡುತ್ತವೆ.
ದೈಹಿಕ ಕಾಳಜಿಯಂತೆ ಮಾನಸಿಕ ಕಾಳಜಿ ಬಗ್ಗೆಯೂ ವೈದ್ಯ ಲೋಕ ಎಚ್ಚರಿಸುತ್ತಿದೆ. ಮಾನಸಿಕ ಪರಿಸ್ಥಿತಿ ಹದಗೆಟ್ಟರೆ ನಿರ್ಲಕ್ಷ್ಯಿಸಬೇಡಿ ತಕ್ಷಣ ಅದಕ್ಕೆ ಪರಿಹಾರ ಕಂಡುಕೊಳ್ಳಿ ಎನ್ನುತ್ತಾರೆ ವೈದ್ಯರು.
ಕಾರಣ ಇಷ್ಟೇ ಮಾನಸಿಕವಾಗಿ ಕುಗ್ಗಿ ಹೋದರೆ ಖಿನ್ನತೆ, ಭಾವನಾತ್ಮಕ ಅಸ್ವಸ್ಥತೆಗಳನ್ನು ಎದುರಿಸಬೇಕಾಗುತ್ತದೆ ಮತ್ತು ಇದರಿಂದ ಹೊರ ಬರುವುದು ಕೂಡ ಕಷ್ಟ. ಒಮ್ಮೊಮ್ಮೆ ಪರಿಸ್ಥಿತಿ ಕೈ ಮೀರಿದರೆ ಆತ್ಮಹತ್ಯೆ ಒಂದೇ ಪರಿಹಾರ ಎನಿಸಿಬಿಡುತ್ತದೆ.
ಮಾನಸಿಕವಾಗಿ ಕುಗ್ಗಿ ಹೋದರೆ ಯಾವುದೇ ಕೆಲಸ ಕಾರ್ಯದಲ್ಲೂ ನಮಗೆ ಆಸಕ್ತಿ ಇರುವುದಿಲ್ಲದಂತಾಗುತ್ತದೆ. ಮನಸ್ಸು, ದೇಹ ಎರಡೂ ಜಡ ಎನಿಸುತ್ತದೆ. ಹೀಗೆ ಜೀವನದಲ್ಲಿ ಚೈತನ್ಯವೇ ಇಲ್ಲದಂತಾಗುತ್ತದೆ.
ಇದನ್ನೂ ಓದಿ:
ಇದ್ದಕಿದ್ದ ಹಾಗೇ ಕಣ್ಣಿನ ರೆಪ್ಪೆಗಳು ಬಡಿದುಕೊಳ್ತಿದ್ಯಾ? ಯಾವ ಅದೃಷ್ಟನೂ ಇಲ್ಲ, ಈ ಸಮಸ್ಯೆಯ ಮುನ್ಸೂಚನೆ ಅದು!
ಮೆಂಟಲ್ ಹೆಲ್ತ್ ಅನ್ನು ಸುಧಾರಿಸಲು ಸುಮಾರು ದಾರಿಗಳಿವೆ, ಆ ದಾರಿಗಳಲ್ಲಿ ಒಂದು ವ್ಯಾಯಾಮ.
ಹೇಗೆ ವ್ಯಾಯಾಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ನೋಡಿ.
1. ಒತ್ತಡ ಕಡಿಮೆ ಮಾಡುತ್ತದೆ- ವ್ಯಾಯಾಮವು ನಮ್ಮ-ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುತ್ತದೆ ಮತ್ತು ಒತ್ತಡವನ್ನು ನಿವಾರಿಸುವ ಅತ್ಯದ್ಭುತ ಪ್ರಯೋಜನಗಳನ್ನು ಹೊಂದಿದೆ.
2. ಆತಂಕ ನಿವಾರಿಸುತ್ತದೆ – ಯಾವುದೇ ರೀತಿಯ ದೈಹಿಕ ಚಟುವಟಿಕೆಯು ನಿಮಗೆ ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ನಿಮಗೆ ಉತ್ತಮ ಭಾವನೆಯನ್ನು ನೀಡುತ್ತದೆ.
3. ಆತ್ಮವಿಶ್ವಾಸ ಹೆಚ್ಚಿಸುತ್ತದೆ – ವ್ಯಾಯಾಮದ ಮತ್ತೊಂದು ಮಾನಸಿಕ ಆರೋಗ್ಯ ಪ್ರಯೋಜನವೆಂದರೆ ಅದು ನಿಮ್ಮ ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
4. ಶಕ್ತಿಯುತವಾಗಿರಲು ಸಹಕಾರಿ – ನಿಯಮಿತವಾದ ದೈಹಿಕ ಚಟುವಟಿಕೆಯು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ನೀವು ದಿನವಿಡೀ ಮನಸ್ಸು ಚೈತನ್ಯಯುತವಾಗಿರಲು ವ್ಯಾಯಾಮವು ಸಹಾಯ ಮಾಡುತ್ತದೆ.
5. ಬೇರೆ ಯೋಚನೆ – ಪ್ರತಿದಿನ ವ್ಯಾಯಾಮವೂ ನಿಮ್ಮನ್ನು ಬೇರೆ ಯೋಚನೆಗಳತ್ತ ಕೊಂಡೊಯ್ಯುತ್ತದೆ. ಇದು ನಿಮ್ಮ ಪ್ರತಿಕೂಲವಾದ ಮಾನಸಿಕ ಸ್ಥಿತಿ ಮೇಲೆ ಪರಿಣಾಮ ಬೀರಲು ಬಿಡುವುದಿಲ್ಲ.
6. ಒಳ್ಳೆಯ ನಿದ್ರೆ- ಮಾನಸಿಕವಾಗಿ ಶಕ್ತರಾಗಿರಲು ನಿದ್ರೆಯ ಬಹಳ ಮುಖ್ಯ. ನಿದ್ರೆ ಚೆನ್ನಾಗಿ ಬರಬೇಕು ಎಂದರೆ ವ್ಯಾಯಾಮ ಅಗತ್ಯವಾಗಿದೆ. ಯಾರು ಪ್ರತಿನಿತ್ಯ ವ್ಯಾಯಾಮ ಮಾಡುತ್ತಾರೋ ಅವರಿಗೆ ನಿದ್ರೆಯ ಕೊರತೆ ಇರುವುದಿಲ್ಲ.
7. ಎಂಡಾರ್ಫಿನ್ ಬಿಡುಗಡೆ- ನೀವು ವ್ಯಾಯಾಮ ಮಾಡುವಾಗ, ನಿಮ್ಮ ದೇಹವು ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ ಅದು ಒತ್ತಡವನ್ನು ನಿರ್ವಹಿಸಲು ಮತ್ತು ನಿಮ್ಮನ್ನು ಸಂತೋಷವಾಗಿರಿಸಲು ಸಹಾಯ ಮಾಡುತ್ತದೆ.
8. ರಕ್ತದ ಹರಿವು – ದೈಹಿಕ ಪರಿಶ್ರಮದ ಸಮಯದಲ್ಲಿ ಮೆದುಳು ಸೇರಿದಂತೆ ಇಡೀ ದೇಹಕ್ಕೆ ರಕ್ತದ ಹರಿವು ಹೆಚ್ಚಾಗುತ್ತದೆ. ಇದರಿಂದ ನಿಮ್ಮ ಸ್ಮರಣೆಯ ಲಾಭದ ಜೊತೆಗೆ ಮನಸ್ಸಿಗೂ ಉಲ್ಲಾಸದಾಯಕವಾಗಿದೆ.
9. ಅರಿವಿನ ಕಾರ್ಯ: ನಿಯಮಿತ ವ್ಯಾಯಾಮವು ಅರಿವಿನ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ಅರಿವಿನ ವಯಸ್ಸಾದ ದರವನ್ನು ನಿಧಾನಗೊಳಿಸುತ್ತದೆ. ಅರಿವು, ಸ್ಮರಣೆ ಕೂಡ ಮಾನಸಿಕ ಆರೋಗ್ಯದ ಜೊತೆ ಸಂಬಂಧ ಹೊಂದಿವೆ.
ಬಿಡದೇ ಕಾಡುವ ಕೆಳ ಬೆನ್ನು ನೋವಿಗೆ ಇಲ್ಲಿದೆ ಕಾರಣ!
ವ್ಯಾಯಾಮದ ಈ ಪ್ರಯೋಜನಗಳ ಮೂಲಕ ನಾವು ನಮ್ಮ ಮೆಂಟಲ್ ಹೆಲ್ತ್ ಅನ್ನು ಕಾಪಾಡಿಕೊಳ್ಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

