ನವದೆಹಲಿ: ಮದ್ಯ ನೀತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಸದ್ಯ ನ್ಯಾಯಾಂಗ ಬಂಧನದಡಿ ತಿಹಾರ್ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ನೇರ ಭೇಟಿ ಮಾಡಲು ಪತ್ನಿ ಸುನೀತಾ ಅವರಿಗೆ ಅನುಮತಿ ನಿರಾಕರಿಸಲಾಗಿದೆ.
ಕೇವಲ ಕಿಟಕಿಯ ಮೂಲಕ ಭೇಟಿಗೆ ಅವಕಾಶ ನೀಡಲಾಗಿದೆ. ಇದು ಅಮಾನವೀಯ ನಡೆ ಎಂದು ಅಮ್‌ಆದಿ ಪಕ್ಷದ ನಾಯಕ ಸಂಜಯ್ ಸಿಂಗ್ ಶನಿವಾರ ಆರೋಪಿಸಿದ್ದಾರೆ. ಇದನ್ನೂ ಓದಿ: ಕರೆಯ ಆಧಾರದ ಮೇಲೆ ಕಾರಿನಲ್ಲಿದ್ದ ಹಣ ವಶಕ್ಕೆ ಪಡೆಯಲಾಗಿದೆ: ಮುನೀಶ್ ಮೌದ್ಗಿಲ್
ಕಳೆದ ಅಕ್ಟೋಬರ್‌ನಲ್ಲಿ ಇದೇ ಪ್ರಕರನದಲ್ಲಿ ಬಂಧನಕ್ಕೊಳಗಾದ ನಂತರ ತಿಹಾರ್‌ನಲ್ಲಿ ಆರು ತಿಂಗಳು ಕಳೆದು ಈ ತಿಂಗಳ ಆರಂಭದಲ್ಲಿ ಜಾಮೀನು ಪಡೆದ ಸಂಜಯ್ ಸಿಂಗ್ ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಇದನ್ನೂ ಓದಿ: ಬ್ಯಾಗಲ್ಲಿರೋದು ಮಾವಿನ ಹಣ್ಣು ಎಂದ್ರು: ಪತ್ತೆಯಾಗಿದ್ದು ಮಾತ್ರ ಕಂತೆ ಕಂತೆ ಹಣ
ಜೈಲಿನಲ್ಲಿರುವ ಅಪರಾಧಿಗಳಿಗೆ ಕುಟುಂಬಸ್ಥರನ್ನು ಭೇಟಿಯಾಗಲು ಜೈಲಿನಲ್ಲಿ ಅನುಮತಿ ಇದೆ. ಆದರೆ ಕೇಜ್ರೀವಲ್ ಭೇಟಿಗೆ ಅನುಮತಿ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಡಿ ಬಂಧನ ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಅರ್ಜಿ; ವಿಚಾರಣೆ ಸೋಮವಾರ
ಅರವಿಂದ್ ಕೇಜ್ರಿವಾಲ್ ಮೂರು ಬಾರಿ ದೆಹಲಿಯ ಮುಖ್ಯಮಂತ್ರಿಯಾಗಿದ್ದವರು ತಮ್ಮ ಪತ್ನಿಯನ್ನು ನಡುವೆ ಗಾಜಿನಿಂದ ಕಿಟಕಿಯ ಮೂಲಕ ಭೇಟಿಯಾಗುವಂತೆ ಮಾಡುತ್ತಿದ್ದಾರೆ. ಇಂತಹ ಅಮಾನವೀಯ ರ‍್ತನೆ ಏಕೆ? ಎಂದು ಸಂಜಯ್ ಸಿಂಗ್ ಪ್ರಶ್ನಿಸಿದರು. ನಮ್ಮನ್ನು ಅವಮಾನಿಸಲು ಮತ್ತು ನೈತಿಕತೆ ಸ್ಥರ‍್ಯ ಕುಗ್ಗಿಸಲು ಇದನ್ನು ಮಾಡಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ವರ್ಷಗಳ ಮುನಿಸು ಮರೆತು ಶ್ರೀನಿವಾಸ ಪ್ರಾಸದ್ ಮನೆಗೆ ಸಿಎಂ ಭೇಟಿ

