ಪುಣೆ: ಗಡಿಯಾಚೆಯಿಂದ ನಡೆಯುವ ಯಾವುದೇ ಭಯೋತ್ಪಾದನಾ ಕೃತ್ಯಕ್ಕೆ ಪ್ರತ್ಯುತ್ತರ ನೀಡಲು ಭಾರತ ಬದ್ದವಾಗಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಪುಣೆಯಲ್ಲಿ ಯುವಕರನ್ನು ಉದ್ದೇಶಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಗ್ರರಿಗೆ ಯಾವುದೇ ನಿಯಮಗಳಿಲ್ಲ. ಹೀಗಾಗಿ ನೀಡುವ ಉತ್ತರಕ್ಕೂ ಯಾವುದೇ ನಿಯಮ ಇಲ್ಲ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಕರೆಯ ಆಧಾರದ ಮೇಲೆ ಕಾರಿನಲ್ಲಿದ್ದ ಹಣ ವಶಕ್ಕೆ ಪಡೆಯಲಾಗಿದೆ: ಮುನೀಶ್ ಮೌದ್ಗಿಲ್
2008 ರಲ್ಲಿ ಮುಂಬೈ ಮೇಲೆ ದಾಳಿ ನಡೆಯಿತು. ಈ ದಾಳಿಯ ನಂತರ ಪಾಕಿಸ್ತಾನದ ಮೇಲೆ ದಾಳಿ ಮಾಡಬೇಕಾ ಬೇಡವೇ ಎಂಬುದರ ಬಗ್ಗೆ ಸರ್ಕಾರಿ ಮಟ್ಟದಲ್ಲಿ ಸಾಕಷ್ಟು ಚರ್ಚೆ ನಡಯಿತು. ಕೊನೆಗೆ ಪಾಕಿಸ್ತನದ ಮೇಳೆ ದಾಳಿ ಮಾಡದೇ ಇರುವುದಕ್ಕಿಂತ ಮೇಲೆ ದಾಳಿ ಮಾಡುವ ವೆಚ್ಚ ಹೆಚ್ಚು ಎಂದು ಆ ಸಮಯದಲ್ಲಿ ತೀರ್ಮಾನಕ್ಕೆ ಬರಲಾಯಿತು ಎಂದರು. ಇದನ್ನೂ ಓದಿ: ಬ್ಯಾಗಲ್ಲಿರೋದು ಮಾವಿನ ಹಣ್ಣು ಎಂದ್ರು: ಪತ್ತೆಯಾಗಿದ್ದು ಮಾತ್ರ ಕಂತೆ ಕಂತೆ ಹಣ
ಇದೇ ರೀತಿಯ ದಾಳಿ ನಡೆದರೆ ಮತ್ತು ಅದಕ್ಕೆ ಪ್ರತಿಕ್ರಿಯಿಸದಿದ್ದರೆ ಮುಂದಿನ ದಾಳಿಗಳನ್ನು ತಯಡೆಯುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ವರ್ಷಗಳ ಮುನಿಸು ಮರೆತು ಶ್ರೀನಿವಾಸ ಪ್ರಾಸದ್ ಮನೆಗೆ ಸಿಎಂ ಭೇಟಿ