ಬೆಂಗಳೂರು: ತಾನು ಪ್ರೀತಿ ಮಾಡುತ್ತಿದ್ದ ಯುವತಿಗೆ ಮೆಸೇಜ್ (Message) ಮಾಡುತ್ತಿದ್ದ ಎಂಬ ಕಾರಣಕ್ಕೆ ಸ್ನೇಹಿತನ (Friend) ಮೇಲೆ ಹಲ್ಲೆ ಮಾಡಿರುವ ಘಟನೆ ಶಂಕರಪುರ (Shankarapura) ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಶಶಾಂಕ್ ಹಾಗೂ ನಂದನ್ ಬಂಧಿತ ಆರೋಪಿಗಳು. ಶಶಾಂಕ್ ಯುವತ್ತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದ. ಸ್ನೇಹಿತನದ ಹರ್ಷಿತ್ ಕುಮಾರ್ ಬುಲ್ ಟೆಂಪಲ್ ರಸ್ತೆಯಲ್ಲಿ ಬರುವ ಟಾಕೀಸ್ ಬಳೀ ಫ್ಲವರ್ ಡೆಕೋರೆಷಣ್ ಅಂಗಡಿ ಇಟ್ಟುಕೊಂಡಿರುತ್ತಾನೆ. ಇದನ್ನೂ ಓದಿ: ಪ್ರವಾಸಕ್ಕೆ ಬಂದ ವಿದ್ಯಾರ್ಥಿಗಳು ಕಾವೇರಿ ನದಿಯಲ್ಲಿ ಮುಳುಗಿ ಸಾವು – ಐವರು ದುರ್ಮರಣ
ಶಶಾಂಕ್ ಪ್ರೇಯಸಿ ಹರ್ಷಿತ್ ಕುಮಾರ್ಗೆ ಪರಿಚಯವಾಗಿರುತ್ತಾರೆ. ಹರ್ಷಿತ್ ಕುಮಾರ್ ಪರಿಚಯ ಸ್ನೇಹಕ್ಕೆ ತಿರುಗಿ ಯುವತಿ ಹಾಗೂ ಹರ್ಷಿತ್ ಇಬ್ಬರು ಚಾಟ್ ಮಾಡಿಕೊಂಡಿರುತ್ತಾರೆ. ಇದು ಶಶಾಂಕ್ ಗಮನಕ್ಕೆ ಬಂದು ಪ್ರಶ್ನೆ ಮಾಡಿದ್ದಾನೆ. ಯುವತಿ ಮುಂದೆ ಹರ್ಷಿತ್ ಫೋನ್ ಕೇಳಿದಾಗ ಆತ ಕೊಡಲು ನಿರಾಕರಿಸಿದ್ದಾನೆ. ಯುವತಿ ಮೊಬೈಲ್ ಕೊಡಲು ಸೂಚಿಸಿದಾಗ ಹರ್ಷಿತ್, ಶಶಾಂಕ್ ಕೈಯಲ್ಲಿ ಮೊಬೈಲ್ ಕೊಟ್ಟಿದ್ದಾರೆ. ಇದನ್ನೂ ಓದಿ: ಚುನಾವಣೆಯಿಂದ 6 ವರ್ಷ ಮೋದಿ ನಿಷೇಧ ಕೋರಿ ಸಲ್ಲಿಸಿದ್ದ ಅರ್ಜಿ ವಜಾ
ಆರೋಪಿ ಮೊಬೈಲ್ ಪರಿಶೀಲನೆ ಮಾಡಿ ನೋಡಿದಾಗ ಹರ್ಷಿತ್ ಮತ್ತೆ ಶಶಾಂಕ್ ಲವರ್ ಚಾಟ್ ಮಾಡಿರುವು ಬೆಳಕಿಗೆ ಬರುತ್ತಿದ್ದಂತೆ ಸ್ನೇಹಿತ ನಂದನ್ ಜೊತೆ ಸೇರಿಕೊಂಡು ಹರ್ಷಿತ್ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ನ್ಯಾಯಲಕ್ಕೆ ಶರಣಾದ ಚಿತ್ರದುರ್ಗದ ಮುರುಘಾ ಶ್ರೀ
ಹಲ್ಲೆಗೆ ಒಳಗಾಗಿದ್ದ ಹರ್ಷಿತ್ನನ್ನು ಸ್ಥಳೀಯರು ಆಸ್ಪತ್ರಗೆ ದಾಕಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಘಟನೆ ಸಂಬಂಧ ಶಂಕರಪುರ ಪೊಲೀಸ್ ಠಾಣೆಯಲ್ಲಿ ಹರ್ಷಿತ್ ಪೋಷಕರು ದೂರು ದಾಖಲಿಸುತ್ತಾರೆ. ಪ್ರಕರಣ ಸಂಬಂಧ ಕೇಸ್ ದಾಖಲಿಸಿಕೊಂಡ ಪೊಲೀಸರು ಆರೋಪಿ ಶಶಾಂಕ್ ಹಾಗೂ ನಂದನ್ ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಇದನ್ನೂ ಓದಿ: ಸಂಸದ ಪ್ರಜ್ವಲ್ ರೇವಣ್ಣ ಜೆಡಿಎಸ್ನಿಂದ ಅಮಾನತು