ನೋಯ್ಡಾ: ಮದುವೆ ನಂತರವು ಫಾರ್ಚುನರ್ ಕಾರು ಮತ್ತು 21 ಲಕ್ಷ ನಗದು ಸೇರಿದಂತೆ ವರದಕ್ಷಿಣೆ ಬೇಡಿಕೆಗಳನ್ನು ಪೂರೈಸದೆ ಇದಕ್ಕೆ ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.
ಕರಿಷ್ಮಾ ಮೃತ ದುರ್ದೈವಿ. ಕರಿಷ್ಮಾ ಡಿಸೆಂಬರ್ 2022 ರಲ್ಲಿ ವಿಕಾಸ್ ಎಂಬವರನ್ನು ವಿವಾಹವಾದರು. ಆಕೆಯ ಕುಟುಂಬದವರು ಮದುವೆಯ ಸಮಯದಲ್ಲಿ ವರನ ಕುಟುಂಬಕ್ಕೆ 11 ಲಕ್ಷ ಮೌಲ್ಯದ ಚಿನ್ನ ಮತ್ತು ಎಸ್‌ಯುವಿಯನ್ನು ನೀಡಿ ಮದುವೆ ಮಾಡಿಕೊಟ್ಟಿದ್ದರು. ಆದರೆ ವಿಕಾಸ್ ಕುಟುಂಬ ಮಾತ್ರ ಹಲವಾರು ವರ್ಷಗಳಿಂದ ಇನ್ನು ಹೆಚ್ಚಿನ ವರದಕ್ಷಿಣೆಗೆ ಬೇಡಿಕೆಯಿಟ್ಟಿದ್ದರು. ಕರಿಷ್ಮಾ ಅವರಿಗೆ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು. ಇದನ್ನೂ ಓದಿ: ಮುಂದಿನ 5 ದಿನ ಭಾರೀ ಮಳೆಯಾಗುವ ಸಾಧ್ಯತೆ.. ಹವಮಾನ ಇಲಾಖೆಯಿಂದ ಆರೆಂಜ್ ಅಲರ್ಟ್!
ನಂತರ ಕರಿಷ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ಇನ್ನೂ ಹೆಚ್ಚು ಕಿರುಕುಳ ನೀಡುತ್ತಿದ್ದರು. ಹಲವಾರು ಬಾರಿ ವಿಕಸ್ ಗ್ರಾಮದ ಪಂಚಾಯತ್ ಸಭೆಗಳ ಮೂಲಕ ಎರಡು ಕುಟುಂಬಗಳ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಪ್ರಯತ್ನಿಸಲಾಗಿತ್ತು. ನಂತರ ಕರಿಷ್ಮಾ ಅವರ ಕುಟುಂಬದವರು 10 ಲಕ್ಷ ರೂ ನೀಡಿದ್ದರೂ ಕರಿಷ್ಮಾ ಮೇಲೆ ಮಾತ್ರ ದೌರ್ಜನ್ಯ ನಿಲ್ಲಲಿಲ್ಲ ಎಂದು ಅವರ ಸಹೋದರ ದೀಪಕ್ ಆರೋಪಿಸಿದ್ದಾರೆ. ಇದನ್ನೂ ಓದಿ: ಮೂವರು SSLC ವಿದ್ಯಾರ್ಥಿಗಳು ತುಂಗಾ ನದಿಯ ನೀರುಪಾಲು
ವಿಕಾಸ್ ಅವರ ಕುಟುಂಬ ಇತ್ತೀಚೆಗೆ ಫಾರ್ಚುನರ್ ಕಾರು ಮತ್ತು ಕರಿಷ್ಮಾ ಅವರಿಂz 21 ಲಕ್ಷ ರೂ. ನೀಡುವಂತೆ ಹೊಸ ಬೇಡಿಕೆಯನ್ನು ಇಟ್ಟಿದ್ದರು. ಇದನ್ನೂ ಓದಿ:ತಡರಾತ್ರಿ ಸಿಲಿಕಾನ್ ಸಿಟಿಗೆ ಆಗಮಿಸಿದ ಅಮಿತ್ ಶಾ
ಈ ಪ್ರಕರಣಕ್ಕೆ ಸಂಬ0ಧಿಸಿದ0ತೆ ವಿಕಾಸ್, ಆತನ ತಂದೆ ಸೋಂಪಾಲ್ ಭಾಟಿ, ತಾಯಿ ರಾಕೇಶ್, ಸಹೋದರಿ ರಿಂಕಿ ಮತ್ತು ಸಹೋದರರಾದ ಸುನೀಲ್ ಮತ್ತು ಅನಿಲ್ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿಕಾಸ್ ಮತ್ತು ಆತನ ತಂದೆಯನ್ನು ಪೊಲೀಸರು ಬಂಧಿಸಿದಾರೆ. ಇದನ್ನೂ ಓದಿ: ಸಂಸದೆ ಸುಮಲತಾ ಮಹತ್ವದ ನಿರ್ಧಾರ ಪ್ರಕಟನೆ- ನಟ ದರ್ಶನ್ ಹಾಜರು