ನವದೆಹಲಿ: ಮದ್ಯ ನೀತಿ ಪ್ರಕರಣದಲ್ಲಿ ಜೈಲು ಸೇರಿರುವ ಅರವಿಂದ್ ಕೇಜ್ರಿವಾಲ್ ಅವರನ್ನು ಭಯೋತ್ಪಾದಕನಂತೆ ನಡೆಸಿಕೊಳ್ಳಲಾಗುತ್ತಿದ್ದೆ ಎಂದು ಪಮಜಾಬ್ ಮುಖ್ಯಮಂತ್ರಿ ಭಗವಂತ್ ಮನ್ ಆರೋಪಿಸಿದ್ದಾರೆ.
ದೆಹಲಿಯ ತಿಹಾರ್ ಜೈಲಿನಲ್ಲಿ ಕೇಜ್ರಿವಾಲ್ ಅವರನ್ನು ಭೇಟಿಯಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಈ ಚುನಾವಣೆಯಲ್ಲಿ ಆಪ್‍ನ ತನ್ನ ರಾಜಕೀಯ ಪ್ರತಿಸ್ರ‍್ಧಿಯನ್ನು ಇರದಂತೆ ನೋಡಿಕೊಳ್ಳುತ್ತಿದೆ. ಅವರನ್ನು ಉಗ್ರನಂತೆ ಬಂಧಿಸಲಾಗಿದೆ. ಅವರು ಮಾಡಿದ ತಪ್ಪೇನು ಎಂದು ಮಾನ್ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ತ್ಯಾಜ್ಯ ತುಂಬಿದ ತೊಟ್ಟಿಗೆ ಬಿದ್ದು ಮಗು ಸಾವು
ಜೈಲಿನೊಳಗೂ ಕೇಜ್ರಿವಾಲ್ ದೆಹಲಿಯ ಜನರ ಬಗ್ಗೆ ಕಾಳಜಿ ವಹಿಸಿದ್ದಾರೆ. ಮುಂದಿನ ವಾರ ಇಬ್ಬರು ಸಚಿವರನ್ನು ತಿಹಾರ್ ಜೈಲಿಗೆ ಕರೆಸಿಕೊಂಡು ಆಡಳಿತದ ಕುರಿತು ರ‍್ಚಿಸಲು ಕೇಜ್ರಿವಾಲ್ ಯೋಜಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರಸಲ್ಲಿಸಿರುವ ಪ್ರಲ್ಹಾದ್ ಜೋಶಿ
ಜೈಲಿನ ಒಳಗಿನ ಗಾಜಿನ ಕೋಣೆಯಲ್ಲಿ ಕೇಜ್ರಿವಾಲ್ ಅವರನ್ನು ಮಾನ್ ಭೇಟಿಯಾದರು. ಬಳಿಕ ಇಬ್ಬರು ವಿರೋಧ ಪಕ್ಷದ ನಾಯಕರು ದೂರವಾಣಿ ಸಂರ‍್ಕದ ಮೂಲಕ 30 ನಿಮಿಷಗಳ ಕಾಲ ಮಾತನಾಡಿದರು. ಅವರನ್ನು ನೋಡಿ ನಾನು ಭಾವುಕನಾದೆ ಎಂದು ಮಾನ್ ಹೇಳಿದ್ದಾರೆ. ಇದನ್ನೂ ಓದಿ: ಬೈಕ್ ಟಿಪ್ಪರ್ ನಡುವೆ ಭೀಕರ ಅಪಘಾತ: ಸ್ಥಳದಲೇ ಸವಾರ ಸಾವು
ಭೇಟಿಯ ಬಳಿಕ ಮಾನ್ ಅವರು, ತಮ್ಮ ಎಕ್ಸ್ ಖಾತೆಯಲ್ಲಿ ಬಿಜೆಪಿಯ ರಾಜಕೀಯ ತಂಡ – ಇಡಿ, ಕೇಜ್ರಿವಾಲ್ ಅವರ ಚಿಂತನೆಯನ್ನು ಬಂಧಿಸಲು ಸಾಧ್ಯವಿಲ್ಲ. ಎಎಪಿ ಮಾತ್ರ ಬಿಜೆಪಿಯನ್ನು ತಡೆಯಬಹುದು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಚುನಾವಣೆಯಲ್ಲಿ ನೀನು ಗೆಲ್ಲಲ ಮಿಸ್ಟರ್ ಕುಮಾರಸ್ವಾಮಿ -ಡಿಕೆಶಿ