ನವದೆಹಲಿ: ಲಿವ್ ಇನ್ನ ಸಂಗಾತಿಯನ್ನ ಕೊಂದು ಶವವನ್ನು ಕಬೋರ್ಡ್ನಲ್ಲಿ ತುಂಬಿಸಿ ಪರಾರಿಯಾಗಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ವಿಪಾಲ್ನ್ನನು ರಾಜಸ್ಥಾನದಿಂದ ಬಂಧಿಸಲಾಗಿದೆ. ಬಳಿಕ ಅಲ್ಲಿಂದ ದೆಹಲಿಗೆ ಕರೆತರಲಾಗಿದೆ. ಮೃತಳ ತಂದೆ ತನ್ನ 26 ವರ್ಷದ ಮಗಳನ್ನು ಸಂಪರ್ಕ ಮಾಡಲು ಹಲವು ದಿನಗಳಿಂದ ಪ್ರಯತ್ನಿಸುತ್ತಿದ್ದರು. ಆದರೆ ಮಗಳು ಸಂಪರ್ಕಕ್ಕೆ ಸಿಗದಿದ್ದರಿಂದ ಗಾಬರಿಗೊಂಡು ಪೊಲೀಸರಿಗೆ ದೂರು ನೀಡಿದ್ದರು. ಇದ್ದಾದ ಮುರುದಿನವೆ ಕೊಲೆ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ:ಮನೆಯೊಂದರ ಕಪಾಟಿನಲ್ಲಿ ಮಹಿಳೆಯ ಶವ ಪತ್ತೆ, ಲೈವ್- ಇನ್ ಸಂಗಾತಿ ಮೇಲೆ ಅನುಮಾನ