ಉತ್ತರ ಪ್ರದೇಶ: ಕ್ಲಾಸ್ ಬಂಕ್ ಮಾಡಿ ಶಾಲೆಯ ಆವರಣದಲ್ಲೇ ಮುಖ್ಯಶಿಕ್ಷಕಿ ಫೇಶಿಯಲ್ ಮಾಡಿಸಿಕೊಂಡು ಈಗ ಪೇಚಿಗೆ ಸಿಲುಕಿರುವ ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದಿದೆ.
ಮುಖ್ಯಶಿಕ್ಷಕಿ ಶಾಲೆಯ ಆವರಣದಲ್ಲಿ ಫೇಶಿಯಲ್ ಮಾಡಿಸಿಕೊಳ್ಳುವುದನ್ನು ಸಹ ಶಿಕ್ಷಕಿಯೊಬ್ಬರು ವಿಡಿಯೋ ಮಾಡಿದ್ದಾರೆ. ಈ ಬಗ್ಗೆ ವಿಷಯ ತಿಳಿದು ಮುಖ್ಯಶಿಕ್ಷಕಿ ಮೇಲೆ ಇಟ್ಟಿಗೆಯಿಂದ ಹೊಡೆದು, ಕೈ ಕಚ್ಚಿ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಪ್ರಚಾರದ ವೇಳೆ ಹಿಟ್ & ರನ್ – ಸ್ಥಳದಲ್ಲೇ ಬಿಜೆಪಿ ಕಾರ್ಯಕರ್ತ ಸಾವು
ಉನ್ನಾವೊದ ದಾದಾಮೌ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಸಂಗೀತಾ ಸಿಂಗ್ ಅವರು ತರಗತಿಯನ್ನು ತೆಗೆದುಕೊಳ್ಳವ ಬದಲು ಶಾಲೆಯ ಅಡುಗೆ ಮನಬೆಯೊಳಗೆ ಫೇಶಿಯಲ್ ಮಾಡಿಸಿಕೊಳ್ಳುತ್ತಿದ್ದರು. ಇದೇ ವೇಳೆ ಮತ್ತೊಬ್ಬ ಶಿಕ್ಷಕಿ ಅನಮ್ ಖಾನ್ ಇದನ್ನು ಪತ್ತೆಹಚ್ಚಿದ್ದು, ವಿಡಿಯೋ ಮಾಡಿಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ವಿದ್ಯಾರ್ಥಿನಿ ನೇಹಾ ಕೊಲೆಗೆ ಕಾರಣ ತಿಳಿಸಿದ ಪರಮೇಶ್ವರ್
ಮೊಬೈಲ್ ನೋಡಿದ ತಕ್ಷಣ ಎಚ್ಚೆತ್ತ ಮುಖ್ಯಶಿಕ್ಷಕಿ ನಾನು ಏನಾದರೂ ಮಾಡುತ್ತೇನೆ ಅದನ್ನು ಕೇಳಲು ನೀನ್ಯಾರು ಎಂದು ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಕಲ್ಲನ್ನು ಎತ್ತಿಹಾಕಿ ಹಲ್ಲೆಗೆ ಯತ್ನಿಸಿದ್ದಾರೆ. ವಿಡಿಯೋ ವೈರಲ್ ಆದ ನಂತರ ಬ್ಲಾಕ್ ಶಿಕ್ಷಣಾಧಿಕಾರಿ ಈ ಬಗ್ಗೆ ತನಿಖೆ ಕೈಗೊಂಡಿದ್ದು, ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಕೀನ್ಯದಲ್ಲಿ ಮಿಲಿಟರಿ ಹೆಲಿಕಾಪ್ಟರ್ ಪತನ: ಘಟನೆಯಲ್ಲಿ ಸೇನಾ ಮುಖ್ಯಸ್ಥ ಸೇರಿ ಯೋಧರು ಸಾವು
ಸಂಗೀತಾ ಸಿಂಗ್ ವಿರುದ್ಧ ಅನಮ್ ಖಾನ್ ಬಿಘಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಶಿಕ್ಷಕರಿಂದ ದೂರು ಬಂದಿದ್ದು, ಈ ಬಗ್ಗೆ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬಿಘಾಪುರ ವೃತ್ತಾಧಿಕಾರಿ ಮಾಯಾ ರೈ ತಿಳಿಸಿದ್ದಾರೆ. ಇದನ್ನೂ ಓದಿ: ಮತದಾರರಿಗೆ ಬೆದರಿಕೆ ಆರೋಪ: ಡಿಸಿಎಂ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು