ಉತ್ತರ ಕನ್ನಡ: ಯುಗಾದಿ ಹಬ್ಬದ ದಿನವೇ ಕಾರೊಂದು ರಸ್ತೆ ಬದಿ ಮಲಗಿದವರ ಮೇಲೆ ಹರಿದ ಪರಿಣಾಮ 7 ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿರಸಿ ಕುಮಟಾ ರಸ್ತೆಯ ಹೀಪ್ನಳ್ಳಿ ಕ್ರಾಸ್‌ನಲ್ಲಿ ನಡೆದಿದೆ.
ಕುಮಟಾ ರಸ್ತೆಯಲ್ಲಿರುವ ಹೀಪ್ನಳ್ಳಿ ಕ್ರಾಸ್‌ನಲ್ಲಿ ರಸ್ತೆ ಕೆಲಸವನ್ನು ಮಾಡಿದ ಬಳಿಕ ಕಾರ್ಮಿಕರೆಲ್ಲರೂ ವಿಶ್ರಾಂತಿಗೆAದು ರಸ್ತೆ ಬದಿಯಲ್ಲೇ ಮಲಗಿದ್ದರು. ಈ ವೇಳೆ ವೇಗವಾಗಿ ಬಂದ ಕಾರು ಮಲಗಿದ್ದವರ ಮೇಲೆ ಹರಿದಿದೆ. ಪರಿಣಾಮ 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಮಗು ಸೇರಿ ಇನ್ನೊಬ್ಬರ ಸ್ಥಿತಿ ಗಂಭೀರವಾಗಿದೆ. ಇದನ್ನೂ ಓದಿ: ಕೇಜ್ರೀವಾಲ್ ಸಲ್ಲಿಸಿದ್ದ ಅರ್ಜಿ ವಜಾ
ಘಟನೆಯಲ್ಲಿ ಗಾಯಗೊಂಡವರೆಲ್ಲ ಹೈದರಾಬಾದ್‌ನ ಮೆಹಬೂಬ ನಗರದ ನಿವಾಸಿಗಳೆಂದು ತಿಳಿದು ಬಂದಿದೆ. ಗಾಯಾಳುಗಲನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದು ಶಿರಸಿ ಗ್ರಾಮೀಣ ಠಾಣಾ ವ್ಯಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಕಾಲರಾ ಪ್ರಕರಣಗಳ ಪತ್ತೆ ಹಿನ್ನೆಲೆ ಬೀದಿ ಬದ್ದಿ ಹಣ್ಣುಗಳನ್ನು ಕಟ್ ಮಾಡಿ ಮಾರಾಟ ಮಾಡುವುದಕ್ಕೆ ಬ್ರೇಕ್

