ಇಂದಿನ ಆಧುನಿಕ ಜೀವನಶೈಲಿಯಿಂದ ಎಲ್ಲರಲ್ಲೂ ಸಾಮಾನ್ಯವಾಗಿ ಕಂಡುಬರುವ ಒಂದು ಸಮಸ್ಯೆ ಅಂದ್ರೆ ಅದುವೇ ಹೇರ್ ಫಾಲ್. ಯೆಸ್ ಈ ಹೇರ್ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ಅಜ್ಜ –ಅಜ್ಜಿಯರಲ್ಲೂ ಕಂಡುಬರುತ್ತಿದೆ. ಹೇರ್ ಫಾಲ್ ಅನ್ನೋದು ಕೆಲವರಿಗೆ ದೊಡ್ಡ ಸಮಸ್ಯೆಯಾಗಿ (Problems) ಪರಿಣಮಿಸಿದೆ. ಇದಕ್ಕೆ ತ್ವರಿತವಾಗಿ ಪರಿಹಾರ ನೀಡುವ ಅನೇಕ ಉತ್ಪನ್ನಗಳು ಮಾರ್ಕೆಟ್‌ಗೆ ಬಂದಿದ್ದರೂ ಸಹ, ಅವುಗಳಿಂದ ಸಮಸ್ಯೆ ಸಂಪೂರ್ಣವಾಗಿ ಗುಣವಾಗುತ್ತದೆಯೋ ಅಂತ ತಿಳಿದುಕೊಂಡು ಮುಂದುವರಿಯುವುದು ಬೆಸ್ಟ್ (Best). ಈ ಸಮಸ್ಯೆಗೆ ನಮ್ಮಲ್ಲೂ ಒಂದು ಪರಿಹಾರ ಇದೆ. ನಿಮ್ಮ ಕೂದಲಿನ ಉದುರುವಿಕೆಯನ್ನು (Hair Fall) ಕಡಿಮೆ ಮಾಡುವ, ಕೆಲವು ಅತ್ಯುತ್ತಮ ಆ್ಯಂಟಿ ಹೇರ್ ಫಾಲ್ ಶ್ಯಾಂಪೂಗಳನ್ನು ಪಟ್ಟಿ ಮಾಡಿದ್ದೇವೆ.
ಈ ಶ್ಯಾಂಪೂಗಳು ನಿಮ್ಮ ಕೂದಲನ್ನು ಪೋಷಿಸಲು, ನೆತ್ತಿಯನ್ನು ಸ್ವಚ್ಛಗೊಳಿಸಲು ಮತ್ತು ಕೂದಲ ಬೆಳವಣಿಗೆಗೆ ಸಹಾಯ ಮಾಡಲು ಸಹಾಯಕವಾಗಿವೆ. ಈಗ ಪ್ರಮುಖ 5 ಆ್ಯಂಟಿ ಹೇರ್ ಫಾಲ್ ಶ್ಯಾಂಪೂಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ
5 ಅತ್ಯುತ್ತಮ ಆ್ಯಂಟಿ ಹೇರ್ ಫಾಲ್ ಶ್ಯಾಂಪೂಗಳು ಇಂತಿವೆ:
- ಬಯೋಟಿಕ್ ಓಷನ್ ಕೆಲ್ಪ್ ಆ್ಯಂಟಿ ಹೇರ್ ಫಾಲ್ ಶ್ಯಾಂಪೂ
ಈ ಶ್ಯಾಂಪೂ ನೈಸರ್ಗಿಕ ಪ್ರೋಟೀನ್‌ಗಳು, ಬೇವಿನ ತೊಗಟೆ ಮತ್ತು ಭೃಂಗರಾಜ್ ಸಸ್ಯದ ಸಾರಗಳ ಮಿಶ್ರಣವನ್ನು ಹೊಂದಿರುತ್ತದೆ. ಇದು ಕೂದಲಿನ ಬೆಳವಣಿಗೆ ಮತ್ತು ಆರೋಗ್ಯಕರ ಹೊಳಪನ್ನು ಉತ್ತೇಜಿಸಲು ಸಹಾಯಕ ಅಂತೆಯೇ ಕೂದಲು ಮತ್ತು ನೆತ್ತಿಯನ್ನು ಕೂಡ ಸ್ವಚ್ಛಗೊಳಿಸುತ್ತದೆ.
ಈ ಶ್ಯಾಂಪೂ 100 % ರಷ್ಟು ಸಸ್ಯಗಳ ಸಾರಗಳೊಂದಿಗೆ, ವಿಶೇಷವಾಗಿ ಸಾಗರ ಕೆಲ್ಪ್, ವಿಟಮಿನ್‌ಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿದೆ. ಇದು ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕೂದಲು ಅಕಾಲಿಕ ಬಿಳಿ ಆಗುವಿಕೆಯನ್ನು ತಡೆಯುತ್ತದೆ. ಒಟ್ಟಾರೆ ಹೇರ್ ಫಾಲ್‌ಗೆ ಬೆಸ್ಟ್.
- ಪಿಲ್ಗ್ರಿಮ್ ಸ್ಪ್ಯಾನಿಷ್ ರೋಸ್ಮರಿ & ಬಯೋಟಿನ್ ಆ್ಯಂಟಿ ಹೇರ್ ಫಾಲ್ ಶ್ಯಾಂಪೂ
ಕೂದಲು ಉದುರುವಿಕೆ ಮತ್ತು ಒಡೆಯುವಿಕೆಯನ್ನು ತಡೆಗಟ್ಟಲು, ಪಿಲ್ಗ್ರಿಮ್‌ನ ಸ್ಪ್ಯಾನಿಷ್ ರೋಸ್‌ಮರಿ ಮತ್ತು ಬಯೋಟಿನ್ ಆ್ಯಂಟಿ ಹೇರ್ ಫಾಲ್ ಶ್ಯಾಂಪೂವನ್ನು ತಯಾರಿಸಲಾಗಿದ್ದು ಕೂದಲನ್ನು 95% ರಷ್ಟು ಬಲಪಡಿಸುವ ಗುಣವನ್ನು ಇದು ಹೊಂದಿದೆ.
ಇದನ್ನೂ ಓದಿ:
ನೀವು ಇನ್ನೊಬ್ದರಿಗೆ ಡಿಫ್ರೆಂಟ್ ಆಗಿ ಕಾಣ್ತಾ ಇದ್ರೆ ಯಶಸ್ವಿಯಾಗಿದ್ದೀರ ಎಂದರ್ಥ!
ಇದು ರೋಸ್ಮರಿ ಮತ್ತು ಬಯೋಟಿನ್ ನಂತಹ ನೈಸರ್ಗಿಕ ಪದಾರ್ಥಗಳನ್ನು ಒಳಗೊಂಡಿದೆ, ಇದು ಕೂದಲಿನ ಬೆಳವಣಿಗೆಗೆ ಕೂದಲು ಕಿರುಚೀಲಗಳನ್ನು ಉತ್ತೇಜಿಸುವುದು ಮಾತ್ರವಲ್ಲದೆ ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.ಈ ಶ್ಯಾಂಪೂವನ್ನು ಬಳಸುವ ಮುನ್ನ, ಕೆಲವು ನಿಮಿಷಗಳ ಕಾಲ ತಲೆಗೆ ಮಸಾಜ್ ಮಾಡಿಕೊಳ್ಳುವುದು ಉತ್ತಮ.
- ಸೆಬಾಮೆಡ್ ಆ್ಯಂಟಿ ಹೇರ್ ಫಾಲ್ ಶ್ಯಾಂಪೂ
ಸೆಬಾಮ್ಡ್ ಆಂಟಿ-ಹೇರ್ ಲಾಸ್ ಶ್ಯಾಂಪೂ ಪಿಹೆಚ್ 5.5 ಫಾರ್ಮುಲಾ ಆಗಿದ್ದು ಅದು ಕೂದಲಿನ ರಚನೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ, ಕೂದಲು ಉದುರುವ ಅಪಾಯವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ:
ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುತ್ತೀರಾ? ಹಾಗಾದ್ರೆ ನೀವಿದನ್ನು ಓದಲೇ ಬೇಕು
ಕೆಫೀನ್ ಮತ್ತು ಗಿಂಕ್ಗೊ ಬಿಲೋಬಾದ ಸೇರ್ಪಡೆಯು ಈ ಶ್ಯಾಂಪೂವನ್ನು ಇತರ ಶ್ಯಾಂಪೂಗಳಿಂದ ಇದನ್ನು ಬೇರೆಯಾಗಿಸುತ್ತದೆ. ಇದು ನಿಮ್ಮ ನೆತ್ತಿಯನ್ನು ಆಳವಾಗಿ ಪೋಷಿಸುತ್ತದೆ ಮತ್ತು ಹೈಡ್ರೇಟ್ ಮಾಡುತ್ತದೆ, ಇದು ಆರೋಗ್ಯಕರ ಕೂದಲಿಗೆ ಅವಶ್ಯಕವಾಗಿದೆ.
ಎಲ್ಲಾ ರೀತಿಯ ಕೂದಲುಗಳಿಗೆ ಸೂಕ್ತವಾದ ಈ ಶ್ಯಾಂಪೂ ಉತ್ತಮವಾಗಿದೆ. ಪ್ಯಾರಬೆನ್‌ಗಳು ಮತ್ತು ಸಿಲಿಕೋನ್‌ನಂತಹ ಹಾನಿಕಾರಕ ರಾಸಾಯನಿಕಗಳಿಂದ ಮುಕ್ತವಾಗಿರುವ ಈ ಶ್ಯಾಂಪೂ ಬಳಸಲು ಸುರಕ್ಷಿತವಾಗಿದೆ.
ಮನೆಯಲಿ ಇದ್ದರೆ ಚಿನ್ನ, ಟೆನ್ಶನ್ ಶುರುವಾಗುತ್ತೆ ಇನ್ನ!
- ಜಸ್ತುಮನ್ ಆ್ಯಂಟಿ ಹೇರ್ ಫಾಲ್ ಶ್ಯಾಂಪೂ
ಜಸ್ತುಮನ್ಆ್ಯಂಟಿ ಹೇರ್ ಫಾಲ್‌ಥೆರಪಿ ಶ್ಯಾಂಪೂ ನಿಸ್ತೇಜಗೊಂಡಿರುವ ಕೂದಲಿಗೆ ಹೊಳಪನ್ನು ತರುತ್ತದೆ ಹಾಗೂ ಜೀವಂತಿಕೆ ಉಂಟುಮಾಡುತ್ತದೆ. ಕ್ಯಾಪಿಲ್ಲಾ ಲಾಂಗಾ, ಶುಂಠಿ ಮತ್ತು ಜಿನ್ಸೆಂಗ್ ಸಾರಗಳ ಮಿಶ್ರಣದಿಂದ ಸಮೃದ್ಧವಾಗಿರುವ ಈ ಶ್ಯಾಂಪೂ ಕೂದಲು ಉದುರುವಿಕೆಯನ್ನು ತಡೆಯುವುದು ಮಾತ್ರವಲ್ಲದೆ ಕೂದಲು ತೆಳುವಾಗುವುದನ್ನು ಸಹ ನಿಯಂತ್ರಿಸುತ್ತದೆ. ಪುರುಷರು ಮತ್ತು ಮಹಿಳೆಯರಿಗೆ ಸೂಕ್ತವಾದ ಈ ಶ್ಯಾಂಪೂ ಕೂದಲಿನ ಬೆಳವಣಿಗೆಯನ್ನು ಪರಿಣಾಮಕಾರಿಯಾಗಿ ಉತ್ತೇಜಿಸಲು ಮತ್ತು ಕೂದಲಿನ ಸಾಂದ್ರತೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.
- ಲವ್ ಬ್ಯೂಟಿ ಮತ್ತು ಪ್ಲಾನೆಟ್ ಆನಿಯನ್ ಆಯಿಲ್ ಹೇರ್ ಫಾಲ್ ಕಂಟ್ರೋಲ್ ಶ್ಯಾಂಪೂ
ಈ ಶ್ಯಾಂಪೂ ಈರುಳ್ಳಿ ಎಣ್ಣೆ, ಕಪ್ಪು ಬೀಜದ ಎಣ್ಣೆ ಮತ್ತು ಪ್ಯಾಚ್ಚೌಲಿಗಳಿಂದ ತಯಾರಾಗಿದೆ. ಈ ವಿಶಿಷ್ಟ ಮಿಶ್ರಣವು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಅಷ್ಟೆ ಅಲ್ಲದೇ ಕೂದಲಿನ ಬೆಳವಣಿಗೆಯನ್ನು ಬಲಪಡಿಸುತ್ತದೆ. ಆರೋಗ್ಯಕರ, ಬಲವಾದ ಕೂದಲಿಗೆ ನೆತ್ತಿಯನ್ನು ಪೋಷಿಸುತ್ತದೆ.ಇದು ಪ್ಯಾರಾಬೆನ್, ಸಲ್ಫೇಟ್ ಮತ್ತು ಡೈ-ಫ್ರೀ ಶ್ಯಾಂಪೂ ಆಗಿದೆ, ಇದು ಎಲ್ಲಾ ರೀತಿಯ ಕೂದಲುಗಳಿಗೆ ಸೂಕ್ತವಾಗಿದೆ. ಇದರ ಸುಗಂಧವು ನಿಮ್ಮ ಕೂದಲಿಗೆ ತಾಜಾತನವನ್ನು ನೀಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ