ಇತ್ತಿಚೆಗೆ ಹಸಿರು ಕೆಂಪು ಬಣ್ಣ ಸೀರೆ ತೊಟ್ಟು ಫೋಟೊಶುಟ್ ಮಾಡಿಸಿಕೊಂಡಿದ್ದ ಸ್ಯಾಂಡಲ್ವುಡ್ ನಟಿ ಅದಿತಿ ಪ್ರಭುದೇವ್ ಯುಗಾದಿಯಂದು ಅಭಿಮಾನಿಗಳಿಗೆ ಸಿಹಿಸುದ್ದಿ ವನೀಡಿದ್ದಾರೆ. ನಟಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಹಬ್ಬದಂದು ಮನೆಗೆ ಮಹಾಲಕ್ಷ್ಮಿ ಆಗಮನದ ಬಗ್ಗೆ ಸಹಿ ಸುದ್ದಿ ನೀಡಿದ್ದಾರೆ.
ಅದಿತಿ ಏ.4ರಂದು ಹೆಣ್ಣೂ ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಅವರು ಯುಗಾದಿ ಹಬ್ಬದ ದಿನದಂದು ಮಗಳ ಆಗಮನದ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇತ್ತಿಚೆಗೆ ಸೀಮಂತ ಕಾರ್ಯಕ್ರಮ ಕೂಡ ಅದ್ದೂರಿಯಾಗಿ ನೆರೆವೆರಿತ್ತು. ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿ ಕೊನೆಗೂ ನನ್ನ ಪುಟ್ಟ ಆಸೆ ನೆರವೇರಿದೆ ಎಂದು ಅದಿತಿ ಸಂಭ್ರಮಿಸಿದ್ದಾರೆ.