ಬೆಂಗಳೂರು : ದರ್ಶನ್ ಅಂಡ್ ಗ್ಯಾಂಗ್ ನಿಂದ ರೇಣುಕಾಸ್ವಾ ಮಿ ಕೊಲೆ ಪ್ರ ಕರಣದಲ್ಲಿ ದರ್ಶನ್ ಗೆ 1 ಲಕ್ಷದ ಜೀನ್ಸ್ ಪ್ಯಾಂಟ್ ಮುಳುವಾಯ್ತಾ..? ಹೌದು ರೇಣುಕಾಸ್ವಾ ಮಿ ಕೊಲೆ ಪ್ರ ಕರಣದಲ್ಲಿ 200 ಕ್ಕೂ ಅಧಿಕ ಸಾಕ್ಷಿಗಳನ್ನ ಪೊಲೀಸರು ಕಲೆ ಹಾಕಿದ್ದಾರೆ. ಈ ಪೈಕಿ ದರ್ಶನ್ ಬಟ್ಟೆ ಅತ್ಯಂ ತ ಮಹತ್ವ ದ ಸಾಕ್ಷಿ ಗಳಲ್ಲಿ ಎಂದು ಹೇಳಲಾಗ್ತಿದೆ. ಕೊಲೆಯ ದಿನ ದರ್ಶನ್ ಧರಿಸಿದ್ದ ಜೀನ್ಸ್ ಹಾಗೂ ಟಿಶರ್ಟ್ ನಲ್ಲಿ ರೇಣುಕಾಸ್ವಾ ಮಿ ರಕ್ತದ ಕಲೆ ಪತ್ತೆಯಾಗಿದ್ದು , ದರ್ಶನ್ ಮನೆಯಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಬ್ಲೂ ಜೀನ್ಸ್ ಹಾಗೂ ಬ್ಲಾಕ್ ಟಿಶರ್ಟ್ ವಶಕ್ಕೆ ಪಡೆದಿದ್ದರು.
ಈ ಬಟ್ಟೆ ಯನ್ನ ಎಫ್ಎಸ್ಎಲ್ ಗೆ ಕಳುಹಿಸಿ ಲುಮಿನಲ್ ಟೆಸ್ಟ್ ಮಾಡಿಸಲಾಗಿತ್ತು . ಲೂಮಿನಲ್ ಟೆಸ್ಟ್ ನಲ್ಲಿ ಬಟ್ಟೆ ಯಲ್ಲಿ ರೇಣುಕಾಸ್ವಾ ಮಿ ರಕ್ತದ ಕಲೆಗಳು ಪತ್ತೆಯಾಗಿತ್ತು . ಸಾಕ್ಷಿ ಗಳನ್ನೆ ಲ್ಲ ನಾಶಪಡಿಸಿದ್ದ ದರ್ಶನ್ ಬಟ್ಟೆ ಯನ್ನು ಮಾತ್ರ ನಾಶ ಪಡೆಸಿರಲಿಲ್ಲ .ಸಿಸಿಟಿವಿ, ಸಿಮ್ ಕಾರ್ಡ್ ಸೇರಿದಂತೆ ಹಲವು ಸಾಕ್ಷಿ ಗಳನ್ನ ದರ್ಶನ್ ನಾಶಪಡಿಸಿದ್ದರು.
ಆದ್ರೆ ಜೀನ್ಸ್ ಹಾಗೂ ಟಿ ಶರ್ಟ್ಮಾತ್ರ ನಾಶಪಡಿಸಿದೆ ಒಗೆದು ಒಣಹಾಕಿದ್ದ ರಂತೆ.ಇದಕ್ಕೆ ಕಾರಣ ದರ್ಶನ್ ಧರಿಸುತ್ತಿದ್ದ ಜೀನ್ಸ್ 50 ಸಾವಿರದಿಂದ ಒಂದು ಲಕ್ಷ ಎಂದುಹೇಳಲಾಗುತ್ತಿದೆ. ದರ್ಶನ್ ಧರಿಸೋದು ಟ್ರು ರಿಲಿಜಿಯನ್ ಅನ್ನೋ ಕಂಪನಿಯ ಜೀನ್ಸ್ ಪ್ಯಾಂ ಟ್ ಎನ್ನ ಲಾಗುತ್ತಿದೆ. ಈ ವಿಚಾರವನ್ನ ಈ ಹಿಂದೆ ನಿರ್ಮಾಪಕ ಉಮಾಪತಿ ಸಹ ಬಹಿರಂಗ ಪಡಿಸಿದ್ದರು.
ಈ ಟ್ರು ರಿಲಿಜಿಯನ್ ಜೀನ್ಸ್ ಪ್ಯಾಂ ಟ್ ನ ದರ ಸುಮಾರು 50 ರಿಂದ 1 ಲಕ್ಷವಂತೆ. ಇದೇ ಕಾರಣಕ್ಕೆ ಅಂದು ದರ್ಶನ್ ಜೀನ್ಸ್ ಪ್ಯಾಂ ಟನ್ನ ನಾಶಮಾಡಿರಲಿಲ್ಲ ಎನ್ನ ಲಾಗುತ್ತಿದೆ. ದುಬಾರಿ ಬೆಲೆಯ ಜೀನ್ಸ್ ಆದ ಕಾರಣ ಅದನ್ನ ವಾಶ್ಮಾಡಿದರೆ ರಕ್ತದ ಕಲೆಹೋಗುತ್ತೆ ಅಂದುಕೊಂಡಿದ್ದರು.
ಹೀಗಾಗಿ ಅದನ್ನ ವಾಶ್ಮಾಡಿಸಿ ಅದನ್ನ ಒಣಗಾಕಿದ್ದ ರಂತೆ. ಆದ್ರೆ ಪೊಲೀಸರು ಲುಮಿನಲ್ ಟೆಸ್ಟ್ ಮೂಲಕ ಇದನ್ನ ಪತ್ತೆ ಮಾಡಿದ್ದಾರೆ. ಲಕ್ಷ ಲಕ್ಷ ಕೊಟ್ಟು ದರ್ಶನ್ ಖರೀದಿಮಾಡಿದ ಜೀನ್ಸ್ ಪ್ಯಾಂ ಟ್ ಇದೀಗ ಆತನಿಗೆಮುಳುವಾಗಿದೆ.

