Floods: ಮಹಾರಾಷ್ಟ್ರದಲ್ಲಿ 24 ಗಂಟೆಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಈವರೆಗೂ ಕನಿಷ್ಟ ಹತ್ತು ಜನ ಸಾವನ್ನಪ್ಪಿದ್ದು, 11,800 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಮತ್ತು ಇತರ ಅಧಿಕಾರಿಗಳು ಸೂಚಿಸುವಂತೆ ನಾಸಿಕ್ ಜಿಲ್ಲೆಯಲ್ಲಿ ನಾಲ್ಕು ಜನ ಸಾವನ್ನಪ್ಪಿದ್ದಾರೆ. ಹಾಗೆಯೇ ಮನೆ ಕುಸಿತದಿಂದ ಮೂವರು, ಅಹಲ್ಯಾನಗರ,ಜಲ್ನಾ ಹಾಗೂ ಯಾವತ್ಮಲ್ನಲ್ಲಿ ತಲಾ ಒಬ್ಬೊಬ್ಬರಂತೆ ಒಟ್ಟು 10 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.
ಭಾನುವಾರ ಸಂಜೆಯವರೆಗೆ ನಡೆದ ರಕ್ಷಣಾ ಕಾರ್ಯಕ್ರಮದಲ್ಲಿ ಸುಮಾರು 11 ಸಾವಿರ ಜನರನ್ನು ಆಡಳಿತವು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ಈ ಪೈಕಿ 7,761 ಜನರು ಪ್ರವಾಹ ಪೀಡಿತ ಮರಾಠವಾಡದವರಾಗಿದ್ದು, ಅವರಲ್ಲಿ 7 ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ನಾಸಿಕ್‌ನಲ್ಲಿ, ಗೋದಾವರಿ ನದಿ ಅಪಾಯದ ಮಟ್ಟ ದಾಟಿದ್ದು, ರಾಮಕುಂಡ ಪ್ರದೇಶದ ಹಲವಾರು ದೇವಾಲಯಗಳು ಮುಳುಗಿವೆ. ಈ ಸಂಬಂಧ ಅಧಿಕಾರಿಗಳು ಮಹಾರಾಷ್ಟ್ರದಾದ್ಯಂತ 16 ಎನ್ಡಿಆರ್ಎಫ್ ತಂಡಗಳನ್ನು ನಿಯೋಜಿಸಿದ್ದಾರೆ. ಹಾಗೆಯೇ ತುರ್ತು ಪರಿಸ್ಥಿತಿಯನ್ನು ನಿವಾರಿಸುವ ಸಲುವಾಗಿ ಪುಣೆಯಲ್ಲಿ ಎರಡು ಹೆಚ್ಚುವರಿ ತಂಡಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಥಾಣೆಯಲ್ಲಿ ಪರಿಶೀಲನಾ ಸಭೆ ನಡೆಸಿದ್ದು, ಕೊಂಕಣ ಪ್ರದೇಶದ ಎಲ್ಲಾ ಆಡಳಿತ ಸಂಸ್ಥೆಗಳಿಗೆ ಹೆಚ್ಚಿನ ಎಚ್ಚರಿಕೆ ನೀಡುವಂತೆ ನಿರ್ದೆಶನ ನೀಡಿದ್ದಾರೆ. ಹಾಗೆಯೇ ಪ್ರವಾಹ ಪೀಡಿತ ವಲಯಗಳ ನಿವಾಸಿಗಳನ್ನು ತ್ವರಿತವಾಗಿ ಸ್ಥಳಾಂತರಿಸಿ, ಆಶ್ರಯ ಶಾಲಾ ಕಾಲೇಜುಗಳನ್ನು ಆಶ್ರಯ ತಾಣಗಳಿಗೆ ಪರಿವರ್ತಿಸುವುದು ಅಗತ್ಯ ಎಂದು ತಿಳಿಸಿದ್ದಾರೆ.

