ಜೈಪುರ : ರಾಜಸ್ಥಾನ ರಾಜಧಾನಿ ಜೈಪುರದಲ್ಲಿ ದೇಗುಲವೊಂದರಲ್ಲಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
ಚಾಕು ಸೇರಿದಂತೆ ಮಾರಕಾಸ್ತ್ರಗಳನ್ನು ಹಿಡಿದು ಬಂದಿದ್ದ ದುಷ್ಕರ್ಮಿಗಳು, ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ಏಕಾಏಕಿ ಮುಗಿಬಿದ್ದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. 10 ಮಂದಿ ಆರ್‌ಎಸ್‌ಎಸ್ ಕಾರ್ಯಕರ್ತರು ಈ ಘಟನೆಯಲ್ಲಿ ಗಾಯಗೊಂಡಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಪೂರ್ಣಗೊಂಡ ಬಳಿಕ ದೇಗುಲಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಪ್ರಸಾದ ಹಂಚಿಕೆ ಮಾಡಲು ಸಿದ್ದತೆ ನಡೆಯುತ್ತಿತ್ತು. ಈ ವೇಳೆ ಇದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ಇಬ್ಬರು ದುಷ್ಕರ್ಮಿಗಳು ನಡು ರಾತ್ರಿ ವೇಳೆ ಚಾಕು ಸಮೇತ ಕಾರ್ಯಕ್ರಮ ನಡೆಯುತ್ತಿದ್ದ ಮಂದಿರಕ್ಕೆ ಆಗಮಿಸಿ ಎಲ್ಲರ ಮೇಲೂ ಹಲ್ಲೆ ನಡೆಸಲು ಮುಂದಾದರು. ಚಾಕುವಿನಿಂದ ಇರಿಯಲು ಆರಂಭಿಸಿದರು. ಆರಂಭದಲ್ಲಿ ಇಬ್ಬರು ದುಷ್ಕರ್ಮಿಗಳು ಮಾತ್ರ ಹಲ್ಲೆ ನಡೆಸಲು ಮುಂದಾದರು. ಆ ನಂತರ ದುಷ್ಕರ್ಮಿಗಳು ಕೂಗಿ ಕರೆದ ಕೂಡಲೇ ಇನ್ನಷ್ಟು ಮಂದಿ ಶಸ್ತ್ರಾಸ್ತ್ರ ಸಮೇತ ದೇಗುಲಕ್ಕೆ ಧಾವಿಸಿದರು ಎನ್ನಲಾಗಿದೆ.
ಎಲ್ಲರೂ ಸೇರಿ ಭಕ್ತಾದಿಗಳು ಹಾಗೂ ನಡೆಸಿದರು. ಬಳಿಕ ಘಟನಾ ಸ್ಥಳದಿಂದ ಪರಾರಿಯಾದರು. ಈ ವೇಳೆ, 10 ಮಂದಿ ಆರ್‌ಎಸ್‌ಎಸ್ ಕಾರ್ಯಕರ್ತರು ಗಾಯಗೊಂಡರು. ಕೂಡಲೇ ಸ್ಥಳೀಯರು ಪೊಲೀಸ್ ಹಾಗೂ ಆಂಬುಲೆನ್ಸ್‌ಗೆ ಕರೆ ಮಾಡಿದರು. ಗಾಯಗೊಂಡ ಎಲ್ಲರನ್ನೂ ಸ್ಥಳೀಯ ಸವಾಯಿ ಮಾನ್ ಸಿಂಗ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಯ್ತು.
ಈ ಪ್ರಕರಣ ಸಂಬಂಧ ಸ್ಥಳೀಯ ನಿವಾಸಿ ನಸೀಬ್ ಚೌಧರಿ ಹಾಗೂ ಆತನ ಮಗನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರಿಬ್ಬರ ವಿಚಾರಣೆ ನಡೆಯುತ್ತಿದ್ದು, ಈ ಘಟನೆಗೆ ಕಾರಣವಾದ ಇನ್ನಷ್ಟು ದುಷ್ಕರ್ಮಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಮೂಲಗಳ ಪ್ರಕಾರ ತಡ ರಾತ್ರಿವರೆಗೂ ನಡೆದ ಈ ಜಾಗರಣ ಕಾರ್ಯಕ್ರಮಕ್ಕೆ ಕೆಲವು ಸ್ಥಳೀಯ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿದೆ. ಮೊದಲಿಗೆ ಇಬ್ಬರು ದುಷ್ಕರ್ಮಿಗಳು ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಧಾವಿಸಿ ತಮ್ಮ ಆಕ್ಷೇಪ ವ್ಯಕ್ತಪಡಿಸಿ ನಡೆಸಿದರು. ಬಳಿಕ ಈ ಇಬ್ಬರೂ ದುಷ್ಕರ್ಮಿಗಳು ಕೂಗಿ ಕರೆದ ಹಿನ್ನೆಲೆಯಲ್ಲಿ ಸ್ಥಳದಲ್ಲೇ ಅಡಗಿದ್ದ ಇನ್ನೂ 6 ಮಂದಿ ಚಾಕು, ಚೂರಿಗಳ ಸಮೇತ ದೇಗುಲಕ್ಕೆ ಧಾವಿಸಿ ಎಲ್ಲರಿಗೂ ಏಕಾಏಕಿ ಇರಿಯಲು ಆರಂಭಿಸಿದರು ಎಂಬ ಮಾಹಿತಿ ಲಭ್ಯವಾಗಿದೆ.

