ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಇಬ್ಬರು ನಿವೃತ್ತ ಎಂಜಿನಿಯರ್ ಸೇರಿದಂತೆ 11 ಅಧಿಕಾರಿಗಳಿಗೆ ಸಂಬಂಧಿಸಿದ 56 ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು (Lokayukta Police) ದಾಳಿ ನಡೆಸಿದ್ದಾರೆ.
ಬೆಂಗಳೂರು, ಮಂಡ್ಯ, ಕಲಬುರಗಿ, ಚಿತ್ರದುರ್ಗ, ದಾವಣಗೆರೆ , ಬೆಳಗಾವಿ,ಕೋಲಾರ, ಮೈಸೂರು ,ಬೆಂಗಳೂರು, ಹಾಸನ ಜಿಲ್ಲೆಯಲ್ಲಿ ಲೋಕಾ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲಿಸುತ್ತಿದ್ದಾರೆ. ಒಟ್ಟು 11 ಪ್ರಕರಣಗಳಿಗೆ ಸಂಬಂಧಿಸಿದಂತೆ 9 ಜಿಲ್ಲೆಗಳಲ್ಲಿ ದಾಳಿ ನಡೆದಿದೆ. ಒಟ್ಟು 56 ಸ್ಥಳಗಳಲ್ಲಿ 100 ಕ್ಕೂ ಅಧಿಕಾರಿಗಳ ತಂಡದ ದಾಳಿ ನಡೆಸಿ ಕಡತ ಪರಿಶೀಲಿಸುತ್ತಿದೆ. ಇದನ್ನೂ ಓದಿ: ಬೆಂಗಾವಲು ಪಡೆಯಿಲ್ಲದೇ ಖಾಸಗಿ ಕಾರಲ್ಲಿ ಅಜ್ಜಯ್ಯನ ಮೊರೆ ಹೋದ ಡಿಕೆಶಿ
ಬೆಂಗಳೂರಿನ 15 ಕ್ಕೂ ಹೆಚ್ಚು ಕಡೆ ಲೋಕಾಯುಕ್ತ ದಾಳಿ ನಡೆದಿದೆ. ಪಾಲಿಕೆ ಎಂಜಿನಿಯರ್ ಬಸವರಾಜ್ ಮಾಗಿ ಮನೆ ಹಾಗೂ ಸಂಬಂಧಿಕರ ಮನೆಯಲ್ಲಿ ಶೋಧ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ಹಾಗೂ ಸೂರಜ್ ಬೇಟಿಗೆ ಆಗಮಿಸಿದ ಅಪ್ಪ-ಅಮ್ಮ
ಈ ಎಲ್ಲ ಅಧಿಕಾರಿಗಳ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ (Disappropriate Assets) ಹೊಂದಿರುವ ಆರೋಪದ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಲೋಕಾಯುಕ್ತ ಪೊಲೀಸ್ ಎಫ್‌ಐಆರ್ ದಾಖಲಿಸಿದ್ದಾರೆ. ನ್ಯಾಯಾಲಯದಿಂದ ಶೋಧನಾ ವಾರಂಟ್ ಪಡೆದು ಇಂದು ಬೆಳಗ್ಗೆ ದಾಳಿ ನಡೆಸಲಾಗಿದೆ. ಇದನ್ನೂ ಓದಿ: ಚಾರ್ಮಾಡಿಯಲ್ಲಿ ಪ್ರವಾಸಿಗರ ಹುಚ್ಚಾಟ –ಬಟ್ಟೆ ಹೊತ್ತೊಯ್ದ ಬುದ್ಧಿ ಕಲಿಸಿದ ಕಾಕಿ
- ರವೀಂದ್ರ ಚೀಫ್ ಇಂಜೀನಿಯರ್ ( ಮೈನರ್ ಇಮೀಗ್ರೇಷನ್ ಡಿಪಾರ್ಟ್ಮೆಂಟ್ ಬೆಂಗಳೂರು)
ಚಿತ್ರದುರ್ಗದಲ್ಲಿ ದಾಳಿ
- ಶೇಖರ್ ಗೌಡ ಪ್ರಾಜೆಕ್ಟ್ ಡೈರೆಕ್ಟರ್
ಧಾರವಾಡದಲ್ಲಿ ದಾಳಿ
- ಮಹಾದೇವ ಬನ್ನೂರು ಎ ಇ ಇ
ಬೆಳಗಾವಿಯಲ್ಲಿ ದಾಳಿ
- ಡಿ ಹೆಚ್ ಉಮೇಶ್ ಇ ಇ
ದಾವಣಗೆರೆಯಲ್ಲಿ ದಾಳಿ
- ಎಂ ಎಸ್ ಪ್ರಭಾಕರ್ ಎ ಇ ಇ
ದಾವಣಗೆರೆಯಲ್ಲಿ ದಾಳಿ
- ವಿಜಣ್ಣ ತಹಸಿಲ್ದಾರ್
ಕೋಲಾರದಲ್ಲಿ ದಾಳಿ
- ಮಹೇಶ್ ಇಂಜೀನೀಯರ್
ಮೈಸೂರು
- ಎನ್ ಎಂ ಜಗದೀಶ್ ಗ್ರೇಡ್ ೧ ಸೆಕ್ರೆಟರಿ
ಹಾಸನ
- ಕೆ ಜಿ ಜಗದೀಶ್ ಇಂಜೀನಿಯರ್
ಚಿತ್ರದುರ್ಗದಲ್ಲಿ ದಾಳಿ

