ನವದೆಹಲಿ: ವಾಣಿಜ್ಯ LPG ಗ್ಯಾಸ್ ಸಿಲಿಂಡರ್‌ಗಳ (Cylinder)ಬೆಲೆ ಪರಿಷ್ಕರಣೆ ಮಾಡಲಾಗಿದ್ದು, ದರದಲ್ಲಿ (Price) 19 ರೂ. ಇಳಿಕೆ ಮಾಡಲಾಗಿದೆ.
ಮೆಟ್ರೋ ನಗರಗಳಾದ ನವದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ಸೇರಿದಂತೆ ದೇಶದಾದ್ಯಾಂತ 19 ಕಿ.ಗ್ರಾಂಗಳಷ್ಟು ವಾಣಿಜ್ಯ ಎಲ್‌ಪಿಜೆ (LPG) ಸಿಲಿಂಡರ್ ಬೆಲೆಯನ್ನು ತೈಲ ಮಾರುಕಟ್ಟೆ ಕಂಪನಿಗಳು ಬುಧವಾರ ಕಡಿತಗೊಳಿಸಿ. ಪರಿಷ್ಕೃತದರಗಳು ತಕ್ಷಣದಿಂದಲೇ ಜಾರಿಗೆ ಬರಲಿದೆ. ಇದನ್ನೂ ಓದಿ: ಮತ್ತೊಂದು ಶಾಲೆಗೆ ಬಾಂಬ್ ಬೆದರಿಕೆ ಯಾವ ಶಾಲೆ?
ನವದೆಹಲಿಯಲ್ಲಿ ಇಂದಿನಿಂದ ವಾಣಿಜ್ಯ ಸಿಲಿಂಡರ್ ಬೆಲೆ 1,745.50 ರೂ. ಆಗಿದೆ. ಮುಂಬೈನಲ್ಲಿ 1,74917.50 ರೂ. ನಿಂದ 1,698.50 ಕ್ಕೆ ಇಳಿಕೆಯಾಗಿದೆ. ಚೆನ್ನೈನಲ್ಲೂ 19 ರೂ. ಇಳಿಕೆಯಾಗಿದೆ. ಈಗಿನ ಬೆಲೆ 1,930 ರೂ. ಗಳಾಗಿದ್ದು, 1,911 ರೂಪಾಯಿಗೆ ಇಳಿಕೆಯಾಗಿದೆ. ಈ ನಡುವೆ ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1,860 ರೂ.ನಿಂದ ಕುಸಿತ ಕಂಡಿದೆ. ಇದನ್ನೂ ಓದಿ: ಪ್ರೀತಿಸುತ್ತಿದ್ದ ಹುಡುಗಿಗೆ ಮೆಸೇಜ್ ಮಾಡಿದ್ದಕ್ಕೆ ಸ್ನೇಹಿತನ್ನೇ ಮೇಲೆ ಹಲ್ಲೆ ಮಾಡಿದ ಭೂಪ

