ಕೋಲಾರ: ಹಸುಗಳನ್ನು ಕದ್ದಿದ್ದ ಆರೋಪಿಯನ್ನು ಇದೀಗ ಪೊಲೀಸರು (Police) ಬಂಧಿಸಿದ್ದಾರೆ. ಬಂಧಿತನನ್ನು ತಮಿಳುನಾಡು ಕೃಷ್ಣಗಿರಿ (Tamil Naḑu Krishnagiri) ಜಿಲ್ಲೆಯ ಜಾರಕಲ ಹಟ್ಟಿ ಗ್ರಾಮದ ಎ.ಮುನಿರಾಜು ಎಂಬುದಾಗಿ ಗುರುತಿಸಲಾಗಿದೆ.
ಒಂದೂವರೆ ವರ್ಷಗಳ ಹಿಂದೆಬೂದಿಕೋಟೆ ಸಮೀಪದ ಶ್ರೀರಂಗಬಂ- ಡಹಳ್ಳಿಯಲ್ಲಿ ಈ ಘಟನೆ ನಡೆದಿತ್ತು. ಚನ್ನಕೇಶವ ಎಂಬವರ ಶೆಡ್‌ನಲ್ಲಿದ್ದ ಸುಮಾರು 1.70 ಲಕ್ಷ ಮೌಲ್ಯದ ಎರಡು ಸೀಮೆ ಹಸುಗಳು ಕಳವಾಗಿದ್ದವು. ಇದನ್ನೂ ಓದಿ: ಶಾಸಕಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ರಾಜೀನಾಮೆ ಕೊಟ್ಟ ಸಿಕ್ಕಿಂ ಸಿಎಂ ಪತ್ನಿ
ಈ ಸಂಬಂಧ ಹಸುಗಳ ಮಾಲೀಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಜೊತೆಗೆ ಕಳವಾಗಿದ್ದ ಹಸುಗಳನ್ನು ಹುಡುಕಿ ಕೊಡುವಂತೆ ಮನವಿ ಮಾಡಿದ್ದರು.ಇದನ್ನೂ ಓದಿ: ದರ್ಶನ್ ಇರೋ ಪೊಲೀಸ್ ಠಾಣೆ ಬಳಿ 144 ಸೆಕ್ಷನ್ ಜಾರಿ- ಪರದಾಡಿದ ವಾಹನ ಸವಾರರು
ಮಾಲೀಕನ ದೂರು ಸ್ವೀಕರಿಸಿದ ಬೂದಿಕೋಟೆ ಪೊಲೀಸರು ಕಾರ್ಯಾಚರಣೆ ನಡೆಸಿ ಕಳವು ಮಾಡಿದ ಆರೋಪಿ ಹಾಗೂ ಹಸುಗಳನ್ನು ಪತ್ತೆ ಮಾಡಿದ್ದಾರೆ. ಇದನ್ನೂ ಓದಿ: ದರ್ಶನ್ ಕೇಸ್ ಬಗ್ಗೆನಟಿ ರಮ್ಯಾ ಸುದೀರ್ಘ ಟ್ವೀಟ್

