ಬೆಂಗಳೂರು : ಬೆಂಗಳೂರಿನ ಸಿಂಗನಾಯಕನಹಳ್ಳಿ ಬಳಿ 2 ಚಿರತೆಗಳು ಪ್ರತ್ಯಕ್ಷವಾಗಿದ್ದು ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಸಿಂಗನಾಯಕನಹಳ್ಳಿ ಅಕ್ಕ ಪಕ್ಕದ ಊರಿನಲ್ಲಿ ಒಂದು ತಿಂಗಳಿನಿಂದ ಅಲ್ಲೇ ಓಡಾಡುತ್ತಿರುವ ಶಂಕೆ ವ್ಯಕ್ತವಾಗಿದ್ದು ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ವಿಫಲರಾಗಿದ್ದಾರೆ.
ಸದ್ಯ ಇದೀಗ ಈ ವೀಡಿಯೋ ವೈರಲ್ ಆಗಿದ್ದು ಜನರು ಆತಂಕಗೊಂಡಿದ್ದಾರೆ. ಇನ್ನು ರಾತ್ರಿ ಹೊತ್ತು ಚಿರತೆಗಳು ಮೇಕೆಗಳನ್ನು ಭೇಟೆ ಆಡುತ್ತಿದ್ದು ಈಗಾಗಲೇ ಚಿರತೆ ಕಾಟಕ್ಕೆ ಅದೆಷ್ಟೋ ಮೇಕೆಗಳು ಸಾವನ್ನಪ್ಪಿದೆ . ಸಿಂಗನಾಯಕನಹಳ್ಳಿ , ರಾಜನಕುಂಟೆ ,ಚಿಕ್ಕಬಾಣಾವರ , ಗುಣಿ ಅಗ್ರಹಾರ , ಯಲಹಂಕ ಕಡೆ ಸುಳಿದಾಡುತ್ತಿರಬಹುದು ಅನ್ನೋ ಶಂಕೆ ಕೂಡ ವ್ಯಕ್ತವಾಗಿದೆ .
ಇನ್ನು ಶಾಲಾ ಮಕ್ಕಳು ಹಾಗೂ ಮಹಿಳೆಯರು ಹೆಚ್ಚಾಗಿ ಇಲ್ಲಿ ಓಡಾಡುತ್ತಾರೆ. ಈ ಕೂಡಲೇ ಸಂಬಂಧ ಪಟ್ಟ ಅರಣ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.

