ಮಹಾರಾಷ್ಟ್ರ : ಕಾಲೇಜಿನ ಕೊನೆಯ ದಿನದ ಫೇರ್ ವೆಲ್ ಭಾಷಣದ ವೇಳೆ ಯುವತಿಯೊಬ್ಬಳು ಹೃದಯಾಘಾತದಿಂದ ಸಾವನಪ್ಪಿದ ಘಟನೆ ನಡೆದಿದ್ದು. ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಾರಾಷ್ಟ್ರದ ಧಾರಾಶಿವ್ನ ಪರಂಡ ತಾಲೂಕಿನಲ್ಲಿ ಈ ದುರಂತ ಘಟನೆ ನಡೆದಿದೆ. 20 ವರ್ಷದ ಕಾಲೇಜು ವಿದ್ಯಾರ್ಥಿನಿ ವಿದಾಯ ಭಾಷಣ ಮಾಡುತ್ತಿದ್ದಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ಪರಂಡದ ಆರ್ಜಿ ಶಿಂಧೆ ಕಾಲೇಜಿನಲ್ಲಿ ಈ ಘಟನೆ ಸಂಭವಿಸಿದೆ.
ಮೃತರನ್ನು ಬಿಎಸ್ಸಿ ವಿಧ್ಯಾರ್ಥಿಯನ್ನು ವರ್ಷಾ ಖರತ್ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿನಿ ತನ್ನ ಬಿಎಸ್ಸಿ ತರಗತಿಯ ವಿದಾಯ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ವೇದಿಕೆಯಲ್ಲಿಯೇ ಕುಸಿದು ಬಿದ್ದಿದ್ದಾಳೆ. ಕೂಡಲೇ ವಿಧ್ಯಾರ್ಥಿಗಳು ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಷ್ಟರಲ್ಲೇ ಆಕೆ ಸಾವನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.
ವರ್ಷಾಳ ಭಾಷಣವನ್ನು ಮೊಬೈಲ್ ಫೋನ್ನಲ್ಲಿ ರೆಕಾರ್ಡ್ ಮಾಡಲಾಗುತ್ತಿತ್ತು ಮತ್ತು ಈಗ ವೈರಲ್ ಆಗಿರುವ ಈ ವೀಡಿಯೊ ಅವಳು ಕುಸಿದು ಬಿದ್ದ ಕ್ಷಣವನ್ನು ಸೆರೆಯಾಗಿದೆ. ತನ್ನ ಭಾಷಣದಲ್ಲಿ ವಿಧ್ಯಾರ್ಥಿನಿ ಎಲ್ಲರೂ ಚೆನ್ನಾಗಿ ಓದಿರುತ್ತಾರೆ ಎಂದು ಹೇಳಿದ್ದಾಳೆ. ವರ್ಷಾ ಅವರ ಹಠಾತ್ ನಿಧನವು ಕಾಲೇಜಿನಲ್ಲಿ ಶೋಕವನ್ನು ಮೂಡಿಸಿದೆ.