ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಡೆಂಗ್ಯೂ ಸೋಂಕಿನಿಂದ ಸಾವನ್ನಪ್ಪಿರುವ ಪ್ರಕರಣಗಳ ಕುರಿತು ಹೆಲ್ತ್ ಆಡಿಟ್ ಮಾಡುವಂತೆ ಸರ್ಕಾರ ಬಿಬಿಎಂಪಿಗೆ (BBMP) ಸೂಚನೆ ನೀಡಿತ್ತು.
ಕಳೆದ ಶುಕ್ರವಾರ ಸಂಭವಿಸಿದ್ದ ಎರಡು ಡೆಂಗ್ಯೂ ಶಂಕಿತ ಸಾವು ಪ್ರಕರಣಗಳಲ್ಲಿ ಕಗ್ಗದಾಸಪುರದ 27 ವರ್ಷದ ಯುವಕ ಮೃತಪಟ್ಟಿದ. ಯುವಕನ ಸಾವಿಗೆ ಡೆಂಗ್ಯೂ ಕಾರಣ ಎಂದು ಬಿಬಿಎಂಪಿ ದೃಢಪಡಿಸಿದ. ಆದರೆ ಅಂದೇ ಸಾವನ್ನಪ್ಪಿದ 80ರ ವೃದ್ದೆಯ ಸಾವಿಗೆ ಡೆಂಘಿ ಕಾರಣವಲ್ಲ ಎಂದ ಬಿಬಿಎಂಪಿ ತಿಳಿಸಿತ್ತು. ಮೃತಪಟ್ಟ 80ರ ವೃದ್ಧೆಯ ಸಾವಿಗೆ ಕಾರಣ ಕ್ಯಾನ್ಸರ್ ಎಂದೂ ಬಿಬಿಎಂಪಿ ಹೆಲ್ತ್ ಆಡಿಟ್ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಇದನ್ನೂ ಓದಿ: ರಾಜಧಾನಿ ಬೆಳ್ಳಂ ಬೆಳಗ್ಗೆ ಕೂಲ್ ಕೂಲ್- ಕರಾವಳಿ ಮಲೆನಾಡು ಭಾಗದಲ್ಲಿ ಮಳೆಯ ಮುನ್ಸೂಚನೆ
ಹೊಸದಾಗಿ 213 ಡೆಂಘಿ ಪ್ರಕರಣಗಳ ಪತ್ತೆಯಾಗಿ ಜೂನ್ ತಿಂಗಳಲ್ಲಿ 1742 ಜನ ಡೆಂಘಿ ಸೊಂಕಿಗೆ ಒಳಗಾದಂತಾಗಿದೆ. ಮಹಿಳೆಯರು ಮತ್ತು ಮಕ್ಕಳು ಸೋಂಕಿಗೆ ಬೇಗ ಒಳಗಾಗುತ್ತಿದ್ದಾರೆ ಎಂದೂ ಹೆಲ್ತ್ ಆಡಿಟ್ ತಿಳಿಸಿದೆ. ಜೊತೆಗೆ ಗರ್ಭಿಣಿಯರು ಡೆಂಘಿ ಸೋಂಕಿಗೆ ಹೆಚ್ಚು ಬೇಗ ಒಳಗಾಗುತ್ತಿದ್ದು ಎಚ್ಚರ ವಹಿಸಲು ತಿಳಿಸಲಾಗಿದೆ. ಇದನ್ನೂ ಓದಿ: ಇಂದು ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಕರವೇ ರಣಕಹಳೆ

