ಕೊಲಂಬೊ, ನ.27 – ಈ ವಾರ ಶ್ರೀಲಂಕಾದಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ಸಂಭವಿಸಿದ ಪ್ರವಾಹ ಹಾಗೂ ಭೂಕುಸಿತಗಳಲ್ಲಿ ಕನಿಷ್ಠ 31 ಮಂದಿ ಪ್ರಾಣ ಕಳೆದುಕೊಂಡಿದ್ದು, 14 ಮಂದಿ ಇನ್ನೂ ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬದುಲ್ಲಾ ಜಿಲ್ಲೆಯ ಮಧ್ಯ ಚಹಾ ಬೆಳೆಗಾರಿಕೆಯ ಪ್ರದೇಶದಲ್ಲಿ ಹೆಚ್ಚಿನ ಜೀವಹಾನಿ ಸಂಭವಿಸಿದೆ. ಅಲ್ಲಿ ಪರ್ವತ ಇಳಿಜಾರಿನಲ್ಲಿ ಉಂಟಾದ ಭೂಕುಸಿತವು ಮನೆಗಳ ಮೇಲೆ ಬಿದ್ದು 16 ಮಂದಿ ಜೀವಂತ ಸಮಾಧಿಯಾಗಿದ್ದಾರೆ ಎಂದು ಶ್ರೀಲಂಕಾ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ.
ರಕ್ಷಣಾ ತಂಡಗಳು ಶೋಧ–ರಕ್ಷಣೆ ಕಾರ್ಯದಲ್ಲಿ ತೊಡಗಿದ್ದು, ಮಳೆ ಮುಂದುವರಿಯುತ್ತಿರುವ ಹಿನ್ನೆಲೆ ಇನ್ನೂ ಹೆಚ್ಚಿನ ಹಾನಿ ಸಂಭವಿಸುವ ಸಾಧ್ಯತೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

