Tourist Boat Capsizes : ವಿಯೆಟ್ನಾಂನಲ್ಲಿ ಶನಿವಾರ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಪರಿಣಾಮ ಮಳೆಗೆ ಪ್ರವಾಸಿಗರ ದೋಣಿಯೊಂದು ಮಗುಚಿ ಸುಮಾರು 34 ಜನ ಸಾವನ್ನಪ್ಪಿದ್ದರೆ, ಹತ್ತು ಜನ ನಾಪತ್ತೆಯಾಗಿರುವ ಘಟನೆ ನಡೆದಿದೆ.
ವರದಿಯ ಪ್ರಕಾರ, ದಿ ವಂಡರ್ ಸೀ ಎಂಬ ದೋಣಿಯಲ್ಲಿ 48 ಪ್ರಯಾಣಿಕರು ಹಾಗೂ 5 ಜನ ಸಿಬ್ಬಂದಿಗಳು ಪ್ರವಾಸಿ ತಾಣ ಹಾ ಲಾಂಗ್ ಕೊಲ್ಲಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಭಾರೀ ಮಳೆ ಚಂಡಮಾರುತ ಉಂಟಾಗಿ ಗಾಳಿಯ ರಭಸಕ್ಕೆ ದೋಣಿ ಮಗುಚಿದೆ.
ಕೂಡಲೇ ಉಳಿದ ಬೋಟ್ ನ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಇದುವರೆಗೆ 11 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು,34 ಜನರ ಮೃತದೇಹವನ್ನು ಹೊರಕ್ಕೆ ತೆಗೆಯಲಾಗಿದೆ, ಹತ್ತು ಜನ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ದೋಣಿಯಲ್ಲಿ ಸುಮಾರು 20 ಜನ ಮಕ್ಕಳೇ ಇದ್ದರೂ ಎನ್ನಲಾಗಿದೆ. ವರದಿಯ ಪ್ರಕಾರ ರಕ್ಷಣೆ ಮಾಡಲಾದ 11 ಜನರಲ್ಲಿ 14 ವರ್ಷದ ಬಾಲಕ ಕೂಡ ಇದ್ದಾನೆ ಎಂದು ಹೇಳಲಾಗಿದೆ. ಅಲ್ಲದೇ ದೋಣಿ ಮಗುಚಿ 4 ಗಂಟೆಯ ಬಳಿಕ ಬಾಲಕನನ್ನು ಜೀವಂತವಾಗಿ ರಕ್ಷಿಸಲಾಗಿದೆ.
ವಿಫಾ ಎಂಬ ಹೊಸ ಚಂಡಮಾರುತ ಉತ್ತರ ವಿಯೆಟ್ನಾಂಗೆ ಬೀಸುವ ವೇಳೆ ದೋಣಿ ಸಿಕ್ಕಿ ಪಲ್ಟಿಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸದ್ಯ ನಾಪತ್ತೆಯಾದವರ ಪತ್ತೆಗಾಗಿ ಹುಡುಕಾಟ ನಡೆಸಲಾಗುತ್ತಿದೆ.
- ಕನಕಪುರ ರಸ್ತೆ ಬಳಿ ಗ್ರಾಮದಲ್ಲಿ 10 ಅಡಿ ಹೆಬ್ಬಾವು ಪ್ರತ್ಯಕ್ಷ
- ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿ : ಸರ್ವಪಕ್ಷ ಸಭೆ ಕರೆದ ಮೋದಿ ಸರ್ಕಾರ
- ಬೀದರ್: ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ
- ದೆಹಲಿ ವಿಧಾನಸಭೆ ಸಂಕೀರ್ಣ ಸ್ಫೋಟಿಸುವುದಾಗಿ ಬೆದರಿಕೆ ಇಮೇಲ್
- ಹಿಂದೂ, ಬೌದ್ಧ, ಸಿಖ್ ಬಿಟ್ಟು ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಪರಿಶಿಷ್ಟ ಜಾತಿ ಸ್ಥಾನಮಾನ ರದ್ದು : ಸುಪ್ರೀಂ

