ಕೆಎಸ್‌‍ಆರ್‌ಟಿಸಿ ಬಸ್ಸುಗಳಲ್ಲಿ ಟಿಕೆಟ್‌ ಇಲ್ಲದೆ ಪ್ರಯಾಣಿಸಿದ್ದ 3851 ಪ್ರಯಾಣಿಕರಿಗೆ ದಂಡ

ಬೆಂಗಳೂರು : ಕೆಎಸ್‌‍ಆರ್‌ಟಿಸಿಯು ಆಗಸ್ಟ್‌ ತಿಂಗಳಿನಲ್ಲಿ 3851 ಟಿಕೆಟ್‌ ರಹಿತ ಪ್ರಯಾಣಿಕರಿಂದ 6,21,383 ರೂ. ದಂಡವನ್ನು ವಸೂಲಿ ಮಾಡಿದೆ. ಕೆಎಸ್‌‍ಆರ್‌ಟಿಸಿಯು ತನ್ನ ತನಿಖಾ ತಂಡಗಳಿಂದ ತಪಾಸಣಾ ಕಾರ್ಯವನ್ನು ಚುರುಕುಗೊಳಿಸಿ 43781 ಬಸ್‌‍ಗಳನ್ನು ತನಿಖೆಗೊಳಪಡಿಸಿ 3,692 ಪ್ರಕರಣಗಳನ್ನು ಪತ್ತೆಹಚ್ಚಿ, ಟಿಕೆಟ್‌ ರಹಿತ ಪ್ರಯಾಣ ಮಾಡುತ್ತಿದ್ದ 3851 ಪ್ರಯಾಣಿಕರಿಗೆ ದಂಡ ವಿಧಿಸಿದೆ. ನಿಗಮದಲ್ಲಿ ಆದಾಯ ಸೋರಿಕೆಯಾಗುತ್ತಿದ್ದ 80,059 ರೂ.ಗಳನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದು, ತಪ್ಪಿತಸ್ಥರ ವಿರುದ್ಧ ಇಲಾಖಾ ರೀತಿಯ ಸೂಕ್ತ ಶಿಸ್ತಿನ ಕ್ರಮವನ್ನು ಜರುಗಿಸಲಾಗಿದೆ ಎಂದು ಕೆಎಸ್‌‍ಆರ್‌ಟಿಸಿ ಪ್ರಕಟಣೆ ತಿಳಿಸಿದೆ.