ಮಂತ್ರಾಲಯ ರಾಯರ ಮಠದ ಹುಂಡಿ ಎಣಿಕೆ ಕಾರ್ಯ
4 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹ
4,05,95,395 ರೂಪಾಯಿ ನಗದು, 116 ಗ್ರಾಂ ಚಿನ್ನ, 1 ಕೆಜಿ 495 ಗ್ರಾಂ ಬೆಳ್ಳಿ
ಕಳೆದ 32 ದಿನಗಳಲ್ಲಿ 4 ಕೋಟಿಗೂ ಅಧಿಕ ಹಣ ಹುಂಡಿಯಲ್ಲಿ ಸಂಗ್ರಹ
ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಹುಂಡಿಯಿಂದ ಕೋಟಿ-ಕೋಟಿ ಹಣ ಹರಿದು ಬಂದಿದೆ. ರಾಯರ ಮಠದಲ್ಲಿ ಸಿಬ್ಬಂದಿ ಹಾಗೂ ಸ್ವಯಂಸೇವಕರು ಹುಂಡಿ ಹಣ ಎಣಿಕೆ ಕಾರ್ಯ ನಡೆಸಿದರು. ಕಳೆದ 32 ದಿನಗಳಲ್ಲಿ 4 ಕೋಟಿಗೂ ಅಧಿಕ ಹಣ ಹುಂಡಿಯಲ್ಲಿ ಸಂಗ್ರಹವಾಗಿದೆ. 4,05,95,395 ರೂಪಾಯಿ ನಗದು, 116 ಗ್ರಾಂ ಚಿನ್ನ, 1 ಕೆಜಿ 495 ಗ್ರಾಂ ಬೆಳ್ಳಿ ಹುಂಡಿಯಲ್ಲಿ ಸಂಗ್ರಹವಾಗಿದೆ.
ಬೇಸಿಗೆ ರಜೆ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಶ್ರೀಮಠಕ್ಕೆ ತೆರಳುತ್ತಿದ್ದಾರೆ. ಹೀಗಾಗಿ, ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹುಂಡಿಯಲ್ಲಿ ನಾಲ್ಕು ಕೋಟಿ ರೂ. ಕಾಣಿಕೆ ದಾಟಿದೆ.

