ತುಮಕೂರು: ರಾಮ ನವಮಿ (Ramnavami) ಹಬ್ಬದಂದು ನೀಡಿದ ಪಾನಕ ಮಜ್ಜಿಗೆ ಸೇವಿಸಿದ್ದ ಒಂದೇ ಗ್ರಾಮದ (Village) 45 ಜನರು ಅಸ್ವಸ್ಥರಾದ ಘಟನೆ ಕುಣಿಗಲ್ ತಾಲೂಕಿನ ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ಸುಬ್ರಹ್ಮಣ್ಯ ದೇಗುಲದಲ್ಲಿ ನಿನ್ನೆ ರಾಮನವಮಿ ಪ್ರಯುಕ್ತ ಮಜ್ಜಿಗೆ, ಪಾನಕವನ್ನು ಗ್ರಾಮಸ್ಥರು ಸೇವಿಸಿದ್ದರು. ಬಳಿಕ ಮಧ್ಯರಾತ್ರಿಯಿಂದ ವಾಂತಿ-ಭೇದಿ ಶರುವಾಗಿದೆ. ಬೆಳಗ್ಗೆ ಎಡೆಯೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದರು. ಇದನ್ನೂ ಓದಿ:ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವತಿಗೆ ಥಳಿಸಿ, ಬಾಯಿಗೆ ಫೆವಿಕ್ವಿಕ್ ಹಾಕಿ ಚಿತ್ರಹಿಂಸೆ ನೀಡಿದ ಯುವಕ
ಆರೋಗ್ಯ ಸುಧಾರಿಸದ ಹಿನ್ನೆಲೆ ಕುಣಿಗಲ್ ತಾಲೂಕು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಇದನ್ನೂ ಓದಿ: ಜೈಲಿನಲ್ಲಿ ಹಣ ಬೇಡಿಕೆ ಇಟ್ಟ ಜೈಲರ್ ಸಸ್ಪೆಂಡ್

