ಕಠ್ಮಂಡು: ಶುಕ್ರವಾರ ಸಂಜೆ ನೇಪಾಳದಲ್ಲಿ 5.0 ತೀವ್ರತೆಯ ಭೂಕಂಪ ಸಂಭವಿಸಿದೆ. ಸ್ಥಳೀಯ ಕಾಲಮಾನ ರಾತ್ರಿ 7.52ಕ್ಕೆ (ಸ್ಥಳೀಯ ಕಾಲಮಾನ) ಭೂಮಿಯಿಂದ 20 ಕಿಮೀ ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದೆ. ಇದರ ಪರಿಣಾಮ ಉತ್ತರ ಭಾರತದಲ್ಲೂ ಲಘು ಭೂಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ.
ಮ್ಯಾನ್ಮಾರ್, ಥಾಯ್ಲೆಂಡ್ ಹಾಗೂ ಜಪಾನ್ ಬಳಿಕ ಈಗ ಭಾರತದ ನೆರೆಯ ರಾಷ್ಟ್ರ ನೇಪಾಳದಲ್ಲಿ 5.0 ತೀವ್ರತೆಯ ಭೂಕಂಪನ ಸಂಭವಿಸಿದೆ.
ಇತ್ತೀಚೆಗಷ್ಟೇ ಮ್ಯಾನ್ಮಾರ್ನಲ್ಲಿ 7.7 ತೀವ್ರತೆಯೇ ಭಾರೀ ಭೂಕಂಪ ಸಂಭವಿಸಿತ್ತು. ಇದರಿಂದ ನೂರಾರು ಗಗನಚುಂಬಿ ಕಟ್ಟಡಗಳು ನೆಲಸಮಗೊಂಡಿದ್ದಲ್ಲದೇ ಸಾವಿರಾರು ಸಂಖ್ಯೆಯ ಜನ ಸಾವನ್ನಪ್ಪಿದ್ದಾರೆ. ಈವರೆಗೆ ಸುಮಾರು 441 ಮಂದಿ ಕಾಣೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.