ಬೀಜಿಂಗ್ : ವಿಶ್ವವನ್ನೇ ಸ್ತಬ್ದಗೊಳಿಸಿದ್ದ ಕೊರೋನಾ ವೈರಸ್ ಹಾವಳಿ ಕಾಣಿಸಿಕೊಂಡ ಬರೋಬ್ಬರಿ ಐದು ವರ್ಷಗಳ ಬಳಿಕ ಚೀನಾದಲ್ಲಿ ಮತ್ತೆ ಹಲವು ವೈರಸ್‌ಗಳು ವ್ಯಾಪಕವಾಗಿ ಹಬ್ಬಿವೆ ಎಂಬ ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿದೆ. ಕಳೆದ ಕೆಲ ದಿನಗಳಿಂದ ಚೀನಾದಲ್ಲಿ ಇನ್‌ಪ್ಯೂಯೆನ್ನಾ ಎ, ಎಚ್‌ಎಂಪಿವಿ, ಮೈಕೋಪ್ಲಾಸ್ಮಾ ನ್ಯುಮೋನಿಯಾ ಮತ್ತು ಕೋವಿಡ್ 19 ವೈರಸ್ ವ್ಯಾಪಕವಾಗಿ ಹಬ್ಬಿದೆ ಎಂದು ವರದಿಗಳು ತಿಳಿಸಿವೆ.
ಹ್ಯೂಮನ್ ಮೆಟಾಪ್ನ್ಯೂಮೊವೈರಸ್ ಈ ಬಾರಿ ಚೀನಾದಲ್ಲಿ ಕಾಣಿಸಿಕೊಂಡಿರುವ ಹೊಸ ವೈರಾಣು ಆಗಿದ್ದು, ನೆರೆಯ ರಾಷ್ಟ್ರ ಮತ್ತೊಮ್ಮೆ ಹೊಸ ವೈರಾಣುವಿನಿಂದ ಪಾರಾಗಲು ಸ್ಕ್ರೀನಿಂಗ್, ಪತ್ತೆ ಮತ್ತು ಪ್ರತ್ಯೇಕತೆಯ ಪ್ರೋಟೋಕಾಲ್‌ಗಳ ಮೊರೆ ಹೋಗಿದೆ.
ಚೀನಾದಲ್ಲಿ HMPVಯ ವೈರಾಣು ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು ವಿಶೇಷವಾಗಿ ಉತ್ತರ ಪ್ರಾಂತ್ಯಗಳಲ್ಲಿ 14 ವರ್ಷದೊಳಗಿನವರನ್ನು ಈ ವೈರಾಣು ಹೆಚ್ಚು ಬಾಧಿಸುತ್ತಿದೆ ಎಂದು ಅಧಿಕಾರಿಗಳು ಹೇಳಿರುವುದನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
2019ರಲ್ಲಿ ಕೋವಿಡ್ ಪರಿಸ್ಥಿತಿಗೂ ಇದೀಗ ಉದ್ಭವಿಸಿರುವ HMPV ವೈರಸ್ ಪರಿಸ್ಥಿತಿಗೂ ಹೆಚ್ಚಿನ ವತ್ಯಾಸಗಳಿಲ್ಲ. ಆದರೆ ಕೋವಿಡ್ ರೀತಿ ಮಾರಕವಾಗಲಿದೆಯಾ ಅನ್ನೋದು ಸದ್ಯಕ್ಕೆ ಆತಂಕದ ವಿಚಾರ. ಈ ಬಾರಿಯೂ ಚೀನಾ HMPV ವೈರಸ್ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಡಿಸೆಂಬರ್2ನೇ ವಾರದಲ್ಲಿ ಕಾಣಿಸಿಕೊಂಡರೂ ಇದುವರೆಗೆ ಚೀನಾ ಅಧಿಕೃತವಾಗಿ ವೈರಸ್ ಕುರಿತು ಪ್ರಕಟಣೆ ನೀಡಿಲ್ಲ. ಎಲ್ಲವನ್ನೂ ಗೌಪ್ಯವಾಗಿಡುವ ಪ್ರಯತ್ನ ಮಾಡಿದೆ.
ಚೀನಾದಲ್ಲಿ HMPV ವೈರಸ್ ಹರಡುತ್ತಿದ್ದಂತೆ ಭಾರತ ಅಲರ್ಟ್ ಆಗಿದೆ. ಅಂತಾರಾಷ್ಟ್ರೀಯ ಎಜೆನ್ಸಿ, ಚೀನಾ ಆರೋಗ್ಯ ಸಚಿವಾಲ, ವಿಶ್ವ ಆರೋಗ್ಯ ಸಂಸ್ಥೆ ಜೊತೆ ನಿರಂತರ ಸಂಪರ್ಕದಲ್ಲಿದೆ. ವೈರಸ್ ಕುರಿತ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಈಗಾಗಲೇ ತಜ್ಞ ವೈದ್ಯರ ತಂಡ ಈ ಕುರಿತು ತೀವ್ರ ನಿಗಾವಹಿಸಿದೆ. ಭಾರತವನ್ನು HMPV ವೈರಸ್‌ನಿಂದ ಮುಕ್ತವಾಗಿಡಲು ಎಲ್ಲಾ ಪ್ರಯತ್ನಗಳು ಆರಂಭಗೊಂಡಿದೆ. ಶೀಘ್ರದಲ್ಲೇ ಭಾರತ ಕೆಲ ಮಾರ್ಗಸೂಚಿ ಹೊರಡಿಸುವ ಸಾಧ್ಯತೆ ಇದೆ.
ವೈರಸ್ ಎಲ್ಲಾ ವಯಸ್ಸಿನ ಜನರಲ್ಲಿ ಉಸಿರಾಟದ ಕಾಯಿಲೆಗಳನ್ನು ಉಂಟುಮಾಡಬಹುದು. ಆದಾಗ್ಯೂ, ಚಿಕ್ಕ ಮಕ್ಕಳು, ಹಿರಿಯ ವಯಸ್ಕರು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು ವಿಶೇಷವಾಗಿ ಈ ರೋಗಕ್ಕೆ ಬೇಗ ಗುರಿಯಾಗುತ್ತಾರೆ. HMPV ವೈರಾಣುವನ್ನು 2001 ರಲ್ಲಿ ಮೊದಲ ಬಾರಿಗೆ ಪತ್ತೆ ಮಾಡಲಾಗಿತ್ತು.
ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ವೈರಸ್ ರೋಗಲಕ್ಷಣಗಳು ಚಳಿಗಾಲದಲ್ಲಿ ಸಾಮಾನ್ಯವಾದ ಇತರ ವೈರಲ್ ಸೋಂಕುಗಳಂತೆಯೇ ಇರುತ್ತವೆ.
ಕೇಂದ್ರ ಆರೋಗ್ಯ ಸಚಿವಾಲಯ ಅಲರ್ಟ್ :
ಚೀನಾದಲ್ಲಿ HMPV ವೈರಸ್ ಹರಡುತ್ತಿದ್ದಂತೆ ಭಾರತ ಅಲರ್ಟ್ ಆಗಿದೆ. ಅಂತಾರಾಷ್ಟ್ರೀಯ ಎಜೆನ್ಸಿ, ಚೀನಾ ಆರೋಗ್ಯ ಸಚಿವಾಲ, ವಿಶ್ವ ಆರೋಗ್ಯ ಸಂಸ್ಥೆ ಜೊತೆ ನಿರಂತರ ಸಂಪರ್ಕದಲ್ಲಿದೆ. ವೈರಸ್ ಕುರಿತ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಈಗಾಗಲೇ ತಜ್ಞ ವೈದ್ಯರ ತಂಡ ಈ ಕುರಿತು ತೀವ್ರ ನಿಗಾವಹಿಸಿದೆ. ಭಾರತವನ್ನು HMPV ವೈರಸ್‌ನಿಂದ ಮುಕ್ತವಾಗಿಡಲು ಎಲ್ಲಾ ಪ್ರಯತ್ನಗಳು ಆರಂಭಗೊಂಡಿದೆ. ಶೀಘ್ರದಲ್ಲೇ ಭಾರತ ಕೆಲ ಮಾರ್ಗಸೂಚಿ ಹೊರಡಿಸುವ ಸಾಧ್ಯತೆ ಇದೆ.
ಭಾರತದಲ್ಲಿ ತೀವ್ರ ನಿಘಾವಹಿಸಲು ಚರ್ಚೆಗಳು ನಡೆಯುತ್ತಿದೆ. ಮುನ್ನಚ್ಚೆರಿಕಾ ಕ್ರಮ, ಭಾರತಕ್ಕೆ ಆಗಮಿಸುವ ಪ್ರಯಾಣಿಕರ ತಪಾಸಣೆ ಸೇರಿದಂತೆ ಹಲವು ಕ್ರಮಗಳು ಜಾರಿಯಾಗುವ ಸಾಧ್ಯತೆ ಇದೆ. ಸದ್ಯ ಚೀನಾದಲ್ಲಿ ಕಾಣಿಸಿಕೊಂಡ HMPV ವೈರಸ್ ಮತ್ತಷ್ಟು ಆತಂಕದ ವಾತಾವರಣ ಸೃಷ್ಟಿಸಿದರೆ ಭಾರತದಲ್ಲಿ ಕೋವಿಡ್ ರೀತಿಯ ಆರಂಭಿಕ ಮಾರ್ಗಸೂಚಿಗಳು ಜಾರಿಯಾಗಲಿದೆ. ಸದ್ಯ ಚೀನಾದಲ್ಲಿ ಕೆಲ ಪ್ರಾಂತ್ಯಗಳಲ್ಲಿ ಈ ವೈರಸ್ ಸ್ಫೋಟಗೊಂಡಿದೆ. ಕೋವಿಡ್ ರೀತಿಯಲ್ಲೇ ಈ ವೈರಸ್ ಅಷ್ಟೇ ವೇಗದಲ್ಲಿ ಹರಡುತ್ತಿದೆಯಾ ಅನ್ನೋ ಕುರಿತು ಅಧ್ಯಯನಗಳು ನಡೆಯುತ್ತಿದೆ.

