ಮಧ್ಯಪ್ರದೇಶ: ಆರು ವರ್ಷದ ಬಾಲಕನೋರ್ವ ತೆರೆದ ಬೋರ್‌ವೆಲ್ ಒಳಕ್ಕೆ ಬಿದ್ದ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ಬೆಳಕಿಗೆ ಬಂದಿದೆ.
ಮಯೂರ್ ಕೊಳವೆ ಬಾವಿಗೆ ಬಿದ್ದಿರುವ ಬಾಲಕ. ಶುಕ್ರವಾರ ಸುಮಾರು 3:30 ಕ್ಕೆ ಕೊಳವೆ ಬಾವಿಗೆ ಬಿದ್ದಿದ್ದಾನೆ. ಗೋಧಿ ಕಟಾವು ವೇಳೆ ಸ್ನೇಹಿತರೊಂದಿಗೆ ಆಟವಾಡುತ್ತಾ ಹೋಗಿ ಬೋರ್‌ವೆಲ್‌ಗೆ ಬಿದ್ದಿದ್ದಾನೆ. ಇದನ್ನೂ ಓದಿ: ವರ್ಷಗಳ ಮುನಿಸು ಮರೆತು ಶ್ರೀನಿವಾಸ ಪ್ರಾಸದ್ ಮನೆಗೆ ಸಿಎಂ ಭೇಟಿ
ಸದ್ಯ ಆತನಿಗಾಗಿ ರಕ್ಷಣಾ ಕಾರ್ಯ ನಡೆಯುತ್ತಿದ್ದು ಬವಿ ಒಳಗೆ ಅಮ್ಲಜನಕ ಒದಗಿಸಲಾಗಿದೆ. ಬಾಲಕನ ಚಲನೆಯನ್ನು ಗಮನಿಸಲು ಸಿಸಿಟಿವಿ ಸಹ ಬೋರ್‌ವೆಲ್ ಒಳಕ್ಕೆ ಇಳಿಸಲಾಗಿದೆ. ಆದರೆ ಮಳೆಯಿಂದಾಗಿ ಕಾರ್ಯಚರಣೆಗೆ ಅಡ್ಡಿಯಾಗುತ್ತಿದೆ. ಇದನ್ನೂ ಓದಿ: ಜೈಲಿನ ಅನುಭವದ ಬಗ್ಗೆ ಹೇಳಿಕೊಂಡ ಸೋನು ಶ್ರೀನಿವಾಸ ಗೌಡ