ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲರುವ ದಿ ಪೊಲರೀಸ್ ಇಂಟರ್ನ್ಯಾಷನಲ್ ಶಾಲೆಯ ಧನಂಜಯ್ ಗೌಡ (8) ಅವರ ಹೆಸರು ಏಷ್ಯಾ ಬುಕ್ ಆಫ್ ಮತ್ತು ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸೇರಿದೆ.
ಕಾರ್ಟ್ ವೀಲ್ ಕರಾಟೆಯಲ್ಲಿ 46 ಮ್ಯಾಕ್ಸಿಮಮ್ ಫಾರ್ವಡ್ ಆ್ಯಂಡ್ ಬ್ಯಾಕ್ವರ್ಡ್ ಸ್ಟಂಟ್ ಮಾಡುವುದರ ಮೂಲಕ ಬಾಲಕ ಧನಂಜಯ ಗೌಡ ಸಾಧನೆ ಮಡಿದ್ದಾರೆ. ಧನಂಜಯ ಗೌಡ ಅವರಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಧನಂಜಯ ಗೌಡ ಅವರ ಸಾಧನೆಗೆ ಶಾಲಾ ಆಡಳಿತ ಮಂಡಳಿ ಮತ್ತು ಪೋಷಕರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.