ಬೆಂಗಳೂರು : ಕಾರಿನಲ್ಲಿ ಹಣ ಇಟ್ಟುಕೊಂಡು ಓಡಾಡುವ ಜನರೇ ಹುಷಾರು, ಕಾರಿನಲ್ಲಿ ಹಣ ಇರೋದು ಗೊತ್ತಾದ್ರೆ.. ಟಾರ್ಗೆಟ್ ಮಾಡಿ ಬೈಕ್ ನಲ್ಲಿ ಬಂದು ಹಣ ಎಗರಿಸಿ ಎಸ್ಕೇಪ್ ಅಗ್ತಾರೆ ಖದೀಮರು.
ಹಗಲು ವೇಳೆಯಲ್ಲಿ ಕಾರ್ ಗ್ಲಾಸ್ ಒಡೆದು ಹಣ ಎಗರಿಸಿರೋ ಖದೀಮರು ನಿಂತಿರೋ ಕಾರಿನ ಗ್ಲಾಸ್ ಒಡೆದು ಮೂರು ಲಕ್ಷ ಹಣ ಕದ್ದು ಎಸ್ಕೇಪ್ ಆಗಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅ.5ರಂದು ನಡೆದಿದೆ.
ಹಣ ಕದ್ದು ಎಸ್ಕೇಪ್ ಆಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ವೆಂಕಟೇಶ್ ಎಂಬುವವರ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು ಹಣ ಕಳ್ಳತನ ಮಾಡಿದ್ದಾರೆ.
ನಾಗರ ಬಾವಿ ರಿಂಗ್ ರಸ್ತೆಯಲ್ಲಿದ್ದ ಕರ್ನಾಟಕ ಬ್ಯಾಂಕ್ ನಲ್ಲಿ ಹಣ ವಿಡ್ರಾಲ್ ಮಾಡಿದ್ದ ವೆಂಕಟೇಶ ಕಾರಿನಲ್ಲಿ ಹಣ ಇಟ್ಟುಕೊಂಡು ಬಂದಿದ್ದು..ಬಳಿಕ ಮನೆಗೆ ಬಂದು ವಾಪಸು ಹೋಗುವಷ್ಟರಲ್ಲಿ ಖದೀಮರು ಹಣ ಎಗರಿಸಿದ್ದಾರೆ.
ವೆಂಕಟೇಶನನ್ನ ಪಾಲೋ ಮಾಡುತ್ತಾ ಬಂದಿದ್ದ ಆರೋಪಿಗಳು ಮನೆ ಮುಂದೆ ನಿಲ್ಲಿದ್ದ ಕಾರಿನ ಗ್ಲಾಸ್ ಒಡೆದು ಹಣ ಕದ್ದು ಎಸ್ಕೇಪ್ ಆಗಿದ್ದಾರೆ. ಹಣ ಕಳೆದುಕೊಂಡ ವೆಂಕಟೇಶ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

