ಬೆಂಗಳೂರು : ಕಂದಾಯ ಇಲಾಖೆಯಲ್ಲಿ ದಕ್ಷತೆ ತೋರಿದ್ದೇ ಈಗ ಸಚಿವ ಕೃಷ್ಣಾ ಭೈರೇಗೌಡರಿಗೆ ಮುಳುವಾಗಿ ಪರಿಣಮಿಸಿದೆ. ಇಲಾಖೆಯಲ್ಲಿ ಪಾರದರ್ಶಕತೆ ತಂದ ಸಚಿವ ಕೃಷ್ಣಾ ಭೈರೇಗೌಡ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಕೆಲ ಶಾಸಕರು, ಸಚಿವರಿಂದ ತೀವ್ರ ಒತ್ತಡ ಹೇರುತ್ತಿದ್ದರಂತೆ.
15 ಕ್ಕೂ ಹೆಚ್ಚು ಶಾಸಕರಿಂದ ಕೃಷ್ಣಭೈರೇಗೌಡ ವಿರುದ್ದ ಹೈಕಮಾಂಡ್ ಗೆ ದೂರು ನೀಡಲಾಗಿದ್ದು ಸಿಎಂ ಹಾಗೂ ಹೈಕಮಾಂಡ್ ಮೇಲೆಯೂ ಶಾಸಕರು, ಸಚಿವರು ಒತ್ತಡ ಹೇರುತ್ತಿದ್ದರಂತೆ. ಸಿಎಂ ಬಳಿಯೂ ಸಚಿವರ ವಿರುದ್ದ ಕಂಪ್ಲೇಂಟ್ ಮಾಡಿರೋ ಶಾಸಕರು. ತಮ್ಮ ಜಮೀನುಗಳಿಗೆ ಕೈ ಹಾಕದಂತೆ ತಾಕೀತು ಮಾಡಿದ್ದಾರಂತೆ.
ಇತ್ತೀಚೆಗಷ್ಟೇ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಸಿಂಗ್ ಕಟಾರಿಯಾ ವರ್ಗಾವಣೆಗೆ ಆಗ್ರಹಿಸಿದ್ದ ಶಾಸಕರು ಈಗ ಸಚಿವ ಕೃಷ್ಣಭೈರೇಗೌಡ ವಿರುದ್ದ ತಿರುಗಿ ಬಿದ್ದಿದ್ದಾರೆ.
ನಿರ್ಧಾಕ್ಷೀಣ್ಯವಾಗಿ ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ಮುಂದಾಗಿದ್ದ ಸಚಿವ ಕೃಷ್ಣಭೈರೇಗೌಡ ಅವರ ನಿರ್ಧಾರದಿಂದ ನೂರಾರು ಎಕರೆ ಒತ್ತುವರಿ ಮಾಡಿಕೊಂಡಿರುವ ಕೆಲ ಶಾಸಕರು, ಸಚಿವರ ಕಣ್ಣು ಕೆಂಪಾಗಿದೆ.

