ಬೆಂಗಳೂರು : ಇದು ಮದ್ಯ ಪ್ರಿಯರಿಗೆ ಕಿಕ್ ಏರಿಸುವ ಸುದ್ದಿ, ಕೊನೆಗೂ ಎಣ್ಣೆ ಪ್ರಿಯರಿಗೆ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ.ರಾಜ್ಯದಲ್ಲಿ ಸೆಪ್ಟೆಂಬರ್-1 ರಿಂದ ದುಬಾರಿ ಮದ್ಯ ಅಗ್ಗದ ದರದಲ್ಲಿ ಸಿಗಲಿದೆ . ಅಬಕಾರಿ ಆದಾಯ ಹೆಚ್ಚಿಸಲು ಮದ್ಯ ದರ ಇಳಿಕೆಗೆ ಅಸ್ತು ಎಂದ ಸರ್ಕಾರ ಮದ್ಯ ದರ ಇಳಿಕೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಸೆಪ್ಟೆಂಬರ್ – 1 ರಿಂದ ಅನ್ವಯವಾಗುವಂತೆ ರಾಜ್ಯದಲ್ಲಿ ಮದ್ಯ ದರ ಇಳಿಕೆಯಾಗಲಿದ್ದು ದರ ಇಳಿಕೆ ಮಾಡುವಂತೆ ಅಬಕಾರಿ ಇಲಾಖೆಗೆ ಸಿಎಂ ಸೂಚನೆ ನೀಡಿದ್ದಾರೆ.
ಅನ್ಯರಾಜ್ಯಕ್ಕಿಂತ ರಾಜ್ಯದಲ್ಲಿ ಮದ್ಯ ರೇಟ್ ಹೆಚ್ಚಿದೆ, ಹೀಗಾಗಿ ಗಡಿಭಾಗದ ಜನ ಅನ್ಯ ರಾಜ್ಯಕ್ಕೆ ತೆರಳಿ ಮದ್ಯ ಖರೀದಿ ಮಾಡುತ್ತಿದ್ದು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ನಷ್ಟವಾಗುತ್ತಿದೆ. ಈ ನಷ್ಟವನ್ನು ತಪ್ಪಿಸಲು ಮದ್ಯ ದರ ಇಳಿಕೆಗೆ ಸರ್ಕಾರ ಮುಂದಾಗಿದೆ.
ಸೆಪ್ಟೆಂಬರ್-1 ರಿಂದ ರಾಜ್ಯದಲ್ಲಿ ದುಬಾರಿ ಬೆಲೆಯ ಬ್ರಾಂದಿ,ವಿಸ್ಕಿ ಜಿನ್,ರಮ್ ಅಗ್ಗ ಆಗಲಿದ್ದು ಪ್ರತಿ ಬ್ರ್ಯಾಂಡ್ ಮದ್ಯದ ಪರಿಷ್ಕೃತ ದರ ಪಟ್ಟಿ ನಾಳೆ ಅಥವಾ ನಾಡಿದ್ದು ಬಿಡುಗಡೆಯಾಗಲಿದೆ.
ಹಾಗಾದರೆ ಯಾವೆಲ್ಲಾ ಬ್ರ್ಯಾಂಡ್ ಎಷ್ಟೆಷ್ಟು ಕಡಿಮೆ ಆಗೋ ಸಾಧ್ಯತೆ ಇದೆ ಗೊತ್ತಾ..
ಶಿವಾಕ್ ಬ್ರ್ಯಾಂಡ್ ಫುಲ್ ಬಾಟಲ್ – 1009 ರಿಂದ 872 ಗೆ ಇಳಿಕೆ
ಜಾನಿ ವಾಕರ್ ದರ ಆಫ್ ಬಾಟಲ್ – 905 ರಿಂದ 775 ಇಳಿಕೆ
678 ರೂ ಇದ್ದ ಬ್ಲಾಕ್ & ವೈಟ್ – 592 ರೂಗೆ ಇಳಿಕೆ
100 ಪೈಪರ್ಸ್ಆಫ್ ಬಾಟಲ್ – 678 ರಿಂದ 592 ಕ್ಕೆ ಇಳಿಕೆ
383 ಗೆ ಸಿಗ್ತಿದ್ದ ರಾಯಲ್ ಚಾಲೆಂಜರ್ಸ್ ವಿಸ್ಕಿ 290 ಕ್ಕೆ
ಓಲ್ಡ್ ಮಾಂಕ್ 180 ರಿಂದ 159ಕ್ಕೆ ಇಳಿಕೆ ಸಾಧ್ಯತೆ.
..

