ಚಿತ್ರದುರ್ಗ : ಇಲ್ಲಿನ ಜಿಲ್ಲಾ ಕೋರ್ಟ್ ನಲ್ಲಿ ಕಿಟಕಿಯ ಗ್ಲಾಸ್ ಗೆ ಕೈನಿಂದ ಗುದ್ದಿ, ರಂಪಾಟ ಮಾಡಿರುವ ಘಟನೆ ಜರುಗಿದೆ.ಆರೋಪಿ ಸಮ್ಮು ಅಲಿಯಾಸ್ ಬಷೀರ್ ಎಂಬಾತನಿಂದ ಈ ಕೃತ್ಯ ನಡೆಸಲಾಗಿದ್ದು, ವಿಚಾರಣೆಗೆಂದು ಕೋರ್ಟ್ ಗೆ ಕರೆತರಲಾಗಿತ್ತು.
ಈ ವೇಳೆ ಕ್ಷುಲ್ಲಕ ವಿಷಯಕ್ಕೆ ಕೋರ್ಟ್ ಕಾರಿಡಾರ್ ನಲ್ಲಿದ್ದ ಕಿಟಕಿಯ ಗ್ಲಾಸ್ ಗೆ ಕೈನಿಂದ ಗುದ್ದಿದ್ದಾನೆ. ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಪೇದೆಗಳ ಮೇಲೂ ಕೂಡಾ ಹಲ್ಲೆಗೆ ಮುಂದಾಗಿದ್ದಾನೆ. ಇದೇ ಸಂದರ್ಭದಲ್ಲಿ ಕೂಡಲೇ ಎಚ್ಚತ್ತ ಪೊಲೀಸರು ಆತನಿಂದ ಗ್ಲಾಸ್ ಕಸಿದುಕೊಂಡು ರಕ್ಷಣೆ ಮಾಡಿದ್ದಾರೆ.

