ಬೆಂಗಳೂರು: ರಾಜ್ಯದಾದ್ಯಂತ ವಿವಿಧ ಮಾದರಿಯ ಎಲ್ಲಾಟ್ಯಾಕ್ಸಿಗಳ ಪ್ರಯಾಣ ದರಗಳನ್ನು ಒಂದೇ ಮಾದರಿಯಲ್ಲಿ ನಿಗದಿಗೊಳಿಸಿ ರಾಜ್ಯ ಸರ್ಕಾರ ಆದೇಶಹೊರಡಿಸಿದೆ.
ಕರ್ನಾಟಕ ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರು ನಗರ ಮಿತಿಯೊಳಗೆ ಆಚರಣೆ ಮಾಡುವ ಎಲ್ಲಾ ಟ್ಯಾಕ್ಸಿ ಸೇವೆಗಳಿಗೆ “ಒಂದು ನಗರ ಒಂದು ದರ” ನೀತಿಯನ್ನು ಅನುಷ್ಠಾಗೊಳಿಸುವಂತೆ ಉಲ್ಲೇಖ (3) ರ ಪತ್ರದಲ್ಲಿ President, Federation of Karnataka State Private Transport Associations, Bangalore ಇವರು ಕೋರಲಾಗಿತ್ತು.
ಕರ್ನಾಟಕ ರಾಜ್ಯಾದ್ಯಂತ (ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಹ ಒಳಗೊಂಡಂತೆ) ಮತ್ತು ಅಗ್ರಿಗೇಟರ್ ನಿಯಮಗಳಡಿ ಆಚರಣೆ ಮಾಡುವ ಎಲ್ಲಾ ವಿವಿಧ ಮಾದರಿಯ ಟ್ಯಾಕ್ಸಿಗಳ ಪ್ರಯಾಣ ದರಗಳನ್ನು ಒಂದೇ ಮಾದರಿಯಲ್ಲಿ ನಿಗಧಿಪಡಿದಿಸಿ ಆದೇಶಿಸಿದ್ದು ಅದರಂತೆ ನಿರ್ದೇಶನಗಳಂತೆ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಸಾರ್ವಜನಿಕರ ಮಾಹಿತಿಗಾಗಿ ಕಛೇರಿಯ ಸೂಚನಾ ಫಲಕಗಳಲ್ಲಿ ಪ್ರದರ್ಶಿಸಲು ಸೂಚಿಸಲಾಗಿದೆ.
ಕರ್ನಾಟಕ ರಾಜ್ಯದಲ್ಲಿ (ಬೆಂಗಳೂರು ನಗರ ವ್ಯಾಪ್ತಿಯನ್ನು ಸಹ ಒಳಗೊಂಡಂತೆ) ಆಚರಣೆ ಮಾಡುವ ಎಲ್ಲಾ ಟ್ಯಾಕ್ಸಿ, ಸಿಟಿ ಟ್ಯಾಕ್ಸಿ ಇನ್ನಿತರೆ ಟ್ಯಾಕ್ಸಿ (ಮೋಟಾರು ಕ್ಯಾಬ್ ಗಳ ಹಾಗೂ ಅಗ್ರಿಗೇಟರ್ಸ್ ನಿಯಮಗಳಡಿ ಕಾರ್ಯಾಚರಿಸುತ್ತಿರುವ ವಿವಿಧ ಮಾದರಿಯ ಟ್ಯಾಕ್ಸಿಗಳ ಪ್ರಯಾಣ ದರ ಮತ್ತು ಸಾಗಾಣಿಕೆ ದರಗಳನ್ನು ಈ ಕೆಳಕಂಡಂತೆ ಕೂಡಲೇ ಜಾರಿಗೆ ಬರುವಂತೆ ನಿಗಧಿಪಡಿಸಲು ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರಕ್ಕೆ ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳಿಗೆ ಈ ಮೂಲಕ ನಿರ್ದೇಶಿಸಲಾಗಿದೆ.
ಯಾವ ವಾಹನಕ್ಕೆ ಎಷ್ಟು ಚಾರ್ಜ್ :
*10 ಲಕ್ಷಕ್ಕಿಂ ತ ಕಡಿಮೆ ಮೌಲ್ಯ ದ ವಾಹನಗಳಿಗೆ ಕನಿಷ್ಟ 4 ಕಿಲೋಮೀಟರ್ ವರೆಗೆ 100ರೂ., ನಂತರ ಪ್ರ ತಿ ಕಿಲೋಮೀಟರ್ ಗೆ 24ರೂ.
*10 ಲಕ್ಷದಿಂದ 15 ಲಕ್ಷದವರೆಗಿನ ಮೌಲ್ಯ ದ ವಾಹನಗಳಿಗೆ ಕನಿಷ್ಟ 4 ಕಿಲೋಮೀಟರ್ ವರೆಗೆ ರೂ.115, ನಂತರ ಪ್ರ ತಿ ಕಿಲೋಮೀಟರ್ ಗೆ 28ರೂ.
*ರೂ.15 ಲಕ್ಷಕ್ಕಿಂ ತ ಹೆಚ್ಚಿ ನಮೌಲ್ಯ ದಟ್ಯಾ ಕ್ಸಿ ವಾಹನಗಳಿಗೆ 4 ಕಿಮೀ ವರೆಗೆರೂ.130, ಆನಂತ್ರ ಪ್ರ ತಿ ಕಿಲೋ ಮೀಟರ್ ಗೆರೂ.32
ದರವನ್ನು ರಾಜ್ಯ ಸರ್ಕಾರ ನಿಗದಿ ಪಡಿಸಲಾಗಿದೆ.
*ಲಗೇಜ್ ದರಗಳು ಮೊದಲಿನ 120 ಕೆ.ಜಿ. ವರೆಗೆ ಉಚಿತ (ಸೂಟ್ ಕೇಸ್, ಬೆಡ್ಡಿಂಗ್ ಇತ್ಯಾದಿ ವೈಯಕ್ತಿಕ ಲಗೇಜುಗಳು) ನಂತರದ ಪ್ರತಿ 30 ಕಿ.ಗ್ರಾಂ. ಗೆ ಅಥವಾ ಅದರ ಭಾಗಕ್ಕೆ ರೂ.7.00.
*ಕಾಯುವಿಕೆಯ ದರಗಳು ಮೊದಲ 5 ನಿಮಿಷಗಳವರೆಗೆ ಉಚಿತ, ನಂತರದ ಪ್ರತಿ 1 ನಿಮಿಷಕ್ಕೆ 1.00.ರೂ.
*ರಾತ್ರಿ 12.00 ಗಂಟೆಯಿಂದ ಬೆಳಗಿನ 6.00 ಗಂಟೆಯವರೆಗೆ ಸಂಚರಿಸುವ ಟ್ಯಾಕ್ಸಿಗಳಿಗೆ ಪ್ರಯಾಣ ದರದ ಮೇಲೆ ಶೇ.10 ರಷ್ಟು ಹೆಚ್ಚುವರಿ ದರ.
*ಸಿಟಿ ಟ್ಯಾಕ್ಸಿಯವರು / ಪ್ರವರ್ತಕರು, ಅಗ್ರಿಗೇಟರ್‌ಗಳು ಅನ್ವಯಿಸುವಂತಹ ಜಿ.ಎಸ್.ಟಿ. ಮತ್ತು ಟೋಲ್ ಶುಲ್ಕವನ್ನು ಪ್ರಯಾಣಿಕರಿಂದ ವಸೂಲಿ ಮಾಡಬಹುದಾಗಿದೆ.
*ಸಮಯದ ಆಧಾರದಲ್ಲಿ ದರಗಳನ್ನು ವಸೂಲಿ ಮಾಡಬಾರದು. ಸರ್ಕಾರದಿಂದ ಕಿ.ಮೀ. ಆಧಾರದಲ್ಲಿ ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ದರಗಳನ್ನು ಮಾತ್ರ ಪ್ರಯಾಣಿಕರಿಂದ ವಸೂಲಿ ಮಾಡುವುದು.
*ಸರ್ಕಾರದಿಂದ ಕಿ.ಮೀ. ಆಧಾರದಲ್ಲಿ ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ದರಗಳನ್ನು ಹೊರತುಪಡಿಸಿ ಅನಧಿಕೃತವಾಗಿ ಯಾವುದೇ ದರಗಳನ್ನು ಪ್ರಯಾಣಿಕರಿಂದ ಪಡೆಯತಕ್ಕದಲ್ಲ.

