ಬೆಂಗಳೂರು: ನಟ ದರ್ಶನ್ ಮತ್ತು ಗ್ಯಾಂಗ್‌ನಿಂದಾದ ರೇಣುಕಾಸ್ವಾಮಿಯ ಭೀಕರ ಕೊಲೆಯ ಒಂದೊಂದೇ ಫೋಟೊಗಳು ರಿವೀಲ್ ಆಗುತ್ತಿದೆ. ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಿರುವುದು ಹಾಗೆ ಈ ಚಾರ್ಜ್ಶೀಟ್ನಲ್ಲಿ ಇರೋ ಮಾಹಿತಿಯ ವಿಚಾರಗಳು ಈಗ ಒಂದೊಂದಾಗಿಯೇ ಹೊರಬರುತ್ತಾ ಇವೆ. ಕೊಲೆ ಪ್ರಕರಣದಲ್ಲಿ ದರ್ಶನ್ ಪಾತ್ರ ಏನು? ಅವರು ಎಷ್ಟು ಬಾರಿ ಹಲ್ಲೆ ಮಾಡಿದ್ದರು ಎನ್ನುವ ವಿಚಾರ ಕೂಡ ರಿವೀಲ್ ಆಗಿದೆ.
ರೇಣುಕಾ ಸ್ವಾಮಿ ಕಳುಹಿಸಿದ ಅಶ್ಲೀಲ ಸಂದೇಶದ ಬಗ್ಗೆ ಪವನ್ ಬಳಿ ಪವಿತ್ರಾ ಹೇಳಿಕೊಂಡಿದ್ದರು. ಮೆಸೇಜ್ ಬಗ್ಗೆ ದರ್ಶನ್ಗೆ ತೋರಿಸಿದ್ದಾಗ ಅವರನ್ನು ಎತ್ತಿಕೊಂಡು ಬರಲು ದರ್ಶನ್ ಸೂಚನೆ ನೀಡಿದ್ದರು. ದರ್ಶನ್ ಆಣತಿಯಂತೆ ರೇಣುಕಾ ಸ್ವಾಮಿಯನ್ನು ಎತ್ತಿಕೊಂಡು ಬಂದು ಪಟ್ಟಣಗೆರೆ ಶೆಡ್ನಲ್ಲಿ ಇಡಲಾಯಿತು. ಶೆಡ್ನಲ್ಲಿ ಇಟ್ಟ ಬಗ್ಗೆ ದರ್ಶನ್ಗೆ ಮಾಹಿತಿ ರವಾನೆ ಆಗಿತ್ತು. ನೇರವಾಗಿ ಪವಿತ್ರಾ ಮನೆಗೆ ತೆರಳಿದ ದರ್ಶನ್ ಅವರನ್ನು ಪಿಕ್ ಮಾಡಿಕೊಂಡು ಶೆಡ್ಗೆ ಬಂದರು.
ದರ್ಶನ್ ಬಂದು ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡುತ್ತಾರೆ. ರಿಬ್ ಮುರಿದು ಹಾಕುವ ಅವರು, ಮರ್ಮಾಂಗಕ್ಕೆ ಹೊಡೆಯುತ್ತಾರೆ. ಲಾಠಿನಲ್ಲಿಯೂ ದರ್ಶನ್ ಹಲ್ಲೆ ಮಾಡಿದ್ದಾರೆ. ಪವಿತ್ರಾ ಚಪ್ಪಲಿಯಿಂದ ಹಲ್ಲೆ ಮಾಡುತ್ತಾರೆ. ಆ ಬಳಿಕ ದರ್ಶನ್ ಮತ್ತೆ ಹಲ್ಲೆ ಮಾಡುತ್ತಾರೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖ ಇದೆ.
ಹೇಗೆಲ್ಲ ಹಿಂಸೆ ಕೊಟ್ಟಿದ್ದರು..?
ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಿಸಿದ ದಾಸನ ಗ್ಯಾಂಗ್ ಸೀದಾ ಆತನನ್ನು ಪಟ್ಟಣಗೆರೆಯಲ್ಲಿನ ಜಯಣ್ಣ ಶೆಡ್ಗೆ ಕರೆತಂದಿದೆ. ನಂತರ ದರ್ಶನ್ ಸೇರಿದಂತೆ ಆತನ 12 ಮಂದಿ ಚೇಲಾಗಳು ಮನಸ್ಸೋ ಇಚ್ಚೆ ಥಳಿಸಿದ್ದಾರೆ.
ಮೊದಲು ರೇಣುಕಾಸ್ವಾಮಿಯ ಬಟ್ಟೆ ಬಿಚ್ಚಿಸಿದ ಗ್ಯಾಂಗ್ ಬಿಳಿ ಬನಿಯನ್ ಮತ್ತು ನೀಲಿ ಜೀನ್ಸ್ ನಲ್ಲಿದ್ದ ಆತನ ಮೇಲೆ ಲಾಠಿ, ರಿಪೀಸ್ ಪಟ್ಟಿಯಿಂದ ಎಲ್ಲೆಂದರಲ್ಲಿ ಥಳಿಸಿದ್ದಾರೆ. ಈ ಸಂದರ್ಭದಲ್ಲಿ ಪವಿತ್ರಾಗೌಡ ತನ್ನ ಚಪ್ಪಲಿ ತೆಗೆದು ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ. ಆಗ ಆಕೆ ಹೊಡೆಯುತ್ತಿದ್ದ ಚಪ್ಪಲಿಯನ್ನು ಕಿತ್ತುಕೊಂಡು ದರ್ಶನ್ ಕೂಡ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ.
ಅಣ್ಣಾ….ನಾನು ನಿಮ್ಮ ಪಕ್ಕಾ ಅಭಿಮಾನಿ…. ಇನುಂದೆ ಅಂತಹ ಕೆಲಸ ಮಾಡಲ್ಲ ಪ್ಲೀಸ್ ನನ್ನ ಬಿಟ್ಟುಬಿಡಿ ಎಂದು ರೇಣುಕಾಸಾಮಿ ಕುಕ್ಕರ ಕಾಲಿನಲ್ಲಿ ಕುಳಿತು ಕೈ ಮುಗಿದು ಪರಿ ಪರಿಯಾಗಿ ಬೇಡಿಕೊಂಡರೂ ದರ್ಶನ್ ಅಂಡ್ ಗ್ಯಾಂಗ್ನ ರಾಕ್ಷಸ ಮನಸು ಕರಗದೆ ಆತನನ್ನು ನಿರ್ದಯಿಯಾಗಿ ಕೊಲೆ ಮಾಡಿರುವುದಕ್ಕೆ ಪೊಲೀಸರಿಗೆ ಪಕ್ಕಾ ಸಾಕ್ಷ್ಯ ದೊರೆತಿದೆ.
ಎರಡು ಲಾರಿಗಳ ಮಧ್ಯೆ ಬಿಳಿ ಬನಿಯನ್ ಮತ್ತು ನೀಲಿ ಜೀನ್ಸ್ ತೊಟ್ಟ ರೇಣುಕಾಸ್ವಾಮಿ ಕುಕ್ಕರ ಕಾಲಿನಲ್ಲಿ ಕುಳಿತು ಪ್ರಾಣ ಬಿಕ್ಷೆ ನೀಡುವಂತೆ ಪರಿ ಪರಿಯಾಗಿ ಬೇಡಿಕೊಳ್ಳುತ್ತಿರುವ ಪೋಟೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಈ ನನ್ನ ಮಗನನ್ನು ಯಾವುದೆ ಕಾರಣಕ್ಕೂ ಜೀವ ಸಹಿತ ಉಳಿಸಬೇಡಿ ಎಂದು ಪವಿತ್ರಾಗೌಡ ಉಳಿದ ಆರೋಪಿಗಳನ್ನು ಪ್ರೋತ್ಸಾಹಿಸುತ್ತಿರುವುದನ್ನು ಆರೋಪಿಯೊಬ್ಬ ಸೆರೆ ಹಿಡಿದಿರುವುದರಿಂದ ದರ್ಶನ್ ಅಂಡ್ ಗ್ಯಾಂಗ್ನ ಪ್ರತಿಯೊಂದು ಕೃತ್ಯವೂ ರೆಕಾರ್ಡ್ ಅಗಿ ಹೋಗಿದೆ.
ಅಷ್ಟೆ ಆಗಿದ್ದರೆ ಪರ್ವಾಗಿಲ್ಲ.. ದರ್ಶನ್ ಅಂಡ್ ಟೀಮ್ನ ಪ್ರತಿಯೊಂದು ಕೃತ್ಯವನ್ನು ತನ್ನ ಫೋನಿನಲ್ಲಿ ಸೆರೆ ಹಿಡಿದ ಆರೋಪಿ ಅಷ್ಟು ದೃಶ್ಯಗಳನ್ನು ತನ್ನ ಮತ್ತೊಬ್ಬ ಸ್ನೇಹಿತನಿಗೆ ಕಳುಹಿಸಿರುವುದರಿಂದ ಎಲ್ಲಾ ಸಾಕ್ಷ್ಯಗಳು ಪೊಲೀಸರ ಕೈ ಸೇರಿವೆ. ಹೀಗಾಗಿಯೇ ಒಂದು ಜೀವ ತೆಗೆಯಲು ಪ್ರೋತ್ಸಾಹಿಸಿದ ಪವಿತ್ರಾಗೌಡ ಅವರನ್ನು ಎ-ಒನ್ ಆರೋಪಿಯನ್ನಾಗಿ ಮಾಡಲಾಗಿದೆ.

