ನ್ಯೂಯಾರ್ಕ್: ಮೆಲ್ವಿಲ್ಲೆಯಲ್ಲಿರುವ ಬಿಎಪಿಎಸ್ ಸ್ವಾಮಿನಾರಾಯಣ ದೇವಸ್ಥಾನವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ಮೆಲ್ವಿಲ್ಲೆಯಲ್ಲಿರುವ ಬಿಎಪಿಎಸ್ ಸ್ವಾಮಿನಾರಾಯಣ ದೇವಸ್ಥಾನ ಧ್ವಂಸಗೊಳಿಸಿರುವ ಸಂಬಂಧ ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಖಂಡಿಸಿದ್ದು, ಇದು ಸ್ವೀಕಾರವಲ್ಲ ಹಾಗೂ ಅಮೆರಿಕಾದ ಕಾನೂನು ಅಧಿಕಾರಿಗಳು ಹೇಯ ಕೃತ್ಯ ಎಸಗಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಅಮೆರಿಕಾದ ಕಾನೂನು ಅಧಿಕಾರಗಳ ಮುಂದೆ ವಿಷಯವನ್ನು ಪ್ರಸ್ತಾಪಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದೆ.
ಕ್ಯಾಲಿಫೋನಿರ್ಯಾ ಹಾಗೂ ಕೆನಡಾದ ದೇವಸ್ಥಾನಗಳ ಮೇಲೆ ಆದ ದಾಳಿ ಬಳಿಕ, ಅದೇ ರೀತಿಯಲ್ಲಿ ನ್ಯೂಯಾರ್ಕ್ ದೇವಸ್ಥಾನದ ಧ್ವಂಸ ನಡೆದಿದೆ ಎಂದು ಅಮೆರಿಕಾದ ಹಿಂದೂ ಸಂಸ್ಥೆಯು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದೆ.
ಅಮೆರಿಕಾದ ಹಿಂದೂ ಸಂಸ್ಥೆಯು ಬಿಎಪಿಎಸ್, ಹಿಂದೂ ದೇವಾಲಯದ ಧ್ವಂಸಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಅಮೆರಿಕಾದ ನ್ಯಾಯ ಇಲಾಖೆಗೆ ತಿಳಿಸಿದೆ.

