ದೊಡ್ಡಬಳ್ಳಾಪು : ದೊಡ್ಡಬಳ್ಳಾಪು ತಾಲ್ಲೂಕಿನ ತಿರುಮಗೊಂಡನಹಳ್ಳಿ ಗ್ರಾಮದ ದೇವಾಲಯದ ಅರ್ಚಕ ವಾಸುದೇವಾಚರ್ ಅಯೋಧ್ಯೆಯಲ್ಲಿ ಬಸವನಿಗೆ ಗಂಗೆ ಸ್ನಾನ ಮಾಡಿಸಲು ಪ್ರಯಾಣ ಬೆಳಿಸಿದ್ದಾರೆ.
ಬಡಬಾನನ ಮಠದಲ್ಲಿರುವ ಹನುಮಂತ ದೇವಾಲಯ ಹಾಗೂ ಮಂತ್ರಾಲಯದಲ್ಲಿ ರಾಯರ ದರ್ಶನ ಮುಗಿಸಿ ವಿಶೇಷ ಬಸ್ಸು ಮೂಲಕ 15 ದಿವಸಗಳ ಕಾಲ ಪ್ರಯಾಣ ನಡೆಸಿದ್ದಾರೆ.
ದೊಡ್ಡಬಳ್ಳಾಪುರದಿಂದ ಉತ್ತರ ಪ್ರದೇಶದ ಅಯೋಧ್ಯೆಗೆ ಸುಮರು 2ಸಾವಿರ ಕಿಲೋ ಮೀಟರ್ ದೂರವಿದ್ದು, ಅಷ್ಟು ದೂರ ಹಗಲು ರಾತ್ರಿ ಎನ್ನದೇ ರಾಮನ ದರ್ಶನ ಪಡೆಯಲು ಬಸಪ್ಪ ಪಯಣ ಬೆಳೆಸಿದೆ.
ದಿನ್ನೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಾಸುದೇವಾ ಚಾರ್ ನೇತೃತ್ವದಲ್ಲಿ ಎಲ್ಲಾ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ಬಸಪ್ಪನ ಯಾತ್ರೆಗೆ ಚಾಲನೆ ನೀಡಲಾಯಿತು.
ನೇಪಾಳಕ್ಕೆ ತೆರಳಿ ಗಂಡಕ್ಕಿ ನದಿಯಲ್ಲಿ ಸ್ನಾನ ಮಾಡಿ 1008 ಸಾಲಿಗ್ರಾಮ ತರುವ ಪ್ರಯತ್ನ ನಡೆಸಿರುವ ಅರ್ಚಕ ವಾಸುದೇವಾಚರ್.

