ಬೈರುತ್: ಗಾಜಾದ ಹಮಾಸ್ ಉಗ್ರರ ಬೆಂಬಲಕ್ಕೆ ನಿಂತು ಇಸ್ರೇಲ್ ಮೇಲೆ ದಾಳಿ ನಡೆಸಿದ ಹಮಾಸ್ ಉಗ್ರರಿಗೆ ಇದೀಗ ಇಸ್ರೇಲ್ ತಕ್ಕ ಉತ್ತರ ನೀಡಿದ್ದು, ಇಸ್ರೇಲ್ ವಾಯು ಸೇನೆಯ ವೈಮಾನಿಕ ದಾಳಿಗೆ ಮೃತಪಟ್ಟವರ ಸಂಖ್ಯೆ 492ಕ್ಕೆ ಏರಿಕೆಯಾಗಿದೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.
ಹಿಜ್ಜುಲ್ಲಾ ಉಗ್ರರ 800 ಸ್ಥಳಗಳ ಮೇಲೆ ಇಸ್ರೇಲ್ 200 ರಾಕೆಟ್ ದಾಳಿ ನಡೆಸಿದೆ. ಸಾವಿನ ಸಂಖ್ಯೆ 492ಕ್ಕೆ ಏರಿಕೆಯಾಗಿದ್ದು, ಗಾಯಗೊಂಡವರ ಸಂಖ್ಯೆ ಸುಮಾರು 1,500ಕ್ಕೆ ತಲುಪಿದೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ಹೇಳಿಕೊಂಡಿರುವುದಾಗಿ ವರದಿಯಾಗಿದೆ.
ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಆವರಿಸಿದ್ದು, ಲೆಬನಾನ್ – ಇಸ್ರೇಲ್ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಲೆಬನಾನ್‌ನ ದಕ್ಷಿಣ ಹಾಗೂ ಪೂರ್ವ ಪ್ರಾಂತ್ಯದ ಮೇಲೆ ಇಸ್ರೇಲ್ ವಾಯುದಾಳಿಗೆ ಪ್ರತೀಕಾರವಾಗಿ ಉತ್ತರ ಇಸ್ರೇಲಿ ಸೇನಾ ನೆಲೆಗಳ ಮೇಲೆ ಲೆಬನಾನ್ ಪ್ರತಿ ದಾಳಿ ನಡೆಸಿದೆ.
ಈ ದಾಳಿಯು ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಗುಡುಗಿರುವ ಇಸ್ರೇಲ್, ಹಿಜ್ಜುಲ್ಲಾ ಉಗ್ರರು ತಮ್ಮ ಶಸ್ತ್ರಾಸ್ತ್ರಗಳನ್ನು ಅಡಗಿಸಿಟ್ಟಿರುವ ಮನೆಗಳು ಮತ್ತು ಕಟ್ಟಡಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಲೆಬನಾನ್ ನಾಗರಿಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.
ಇತ್ತೀಚಿಗೆ ದೇಶದಲ್ಲಿ ನಡೆದ ಪೇಜರ್, ವಾಕಿಟಾಕಿ ಸ್ಫೋಟಕ್ಕೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದ ಇರಾನ್ ಬೆಂಬಲಿತ ಲೆಬನಾನ್ ಬಂಡುಕೋರ ಪಡೆಯ ಮೇಲೆ ಸೋಮವಾರ ಇಸ್ರೇಲ್ ಮಾರಣಾಂತಿಕ ದಾಳಿ ನಡೆಸಿದೆ.
ಬೈರುತ್: : ಗಾಜಾದ ಹಮಾಸ್ ಉಗ್ರರ ಬೆಂಬಲಕ್ಕೆ ನಿಂತು ಇಸ್ರೇಲ್ ಮೇಲೆ ದಾಳಿ ನಡೆಸಿದ ಹಮಾಸ್ ಉಗ್ರರಿಗೆ ಇದೀಗ ಇಸ್ರೇಲ್ ತಕ್ಕ ಉತ್ತರ ನೀಡಿದ್ದು, ಇಸ್ರೇಲ್ ವಾಯು ಸೇನೆಯ ವೈಮಾನಿಕ ದಾಳಿಗೆ ಮೃತಪಟ್ಟವರ ಸಂಖ್ಯೆ 492ಕ್ಕೆ ಏರಿಕೆಯಾಗಿದೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.